ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ವಿರುದ್ಧ ಅತೃಪ್ತರಿಂದ ಹೈಕಮಾಂಡ್‌ಗೆ ದೂರು

By Manjunatha
|
Google Oneindia Kannada News

Recommended Video

Karnataka Private Doctors Strike: ಸಿದ್ದರಾಮಯ್ಯ ವಿರುದ್ಧ ಹೈ ಕಮಾಂಡ್ ಗೆ ದೂರು | Oneindia Kannada

ಬೆಳಗಾವಿ, ನವೆಂಬರ್ 17 : ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ತಿದ್ದುಪಡಿ ಮಸೂದೆ ದಿನೇ ದಿನೇ ಜಟಿಲವಾಗುತ್ತಾ ಹೋಗುತ್ತಿದೆ. ಅದು ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಸುತ್ತಿ ಹಾಕಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ವೈದ್ಯರ ಪ್ರತಿಭಟನೆ, ಪ್ರತಿಪಕ್ಷಗಳತ್ತ ಕೈ ತೋರಿಸಿದ ಸಿಎಂ!ವೈದ್ಯರ ಪ್ರತಿಭಟನೆ, ಪ್ರತಿಪಕ್ಷಗಳತ್ತ ಕೈ ತೋರಿಸಿದ ಸಿಎಂ!

ಕಾಯ್ದೆ ಮಂಡನೆ ವಿರೋಧಿಸಿ ಖಾಸಗಿ ವೈದ್ಯರು ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪರಿಸ್ಥಿತಿ ವಿಷಮಕ್ಕೆ ತಿರುಗಿತ್ತು. ಇದರಿಂದ ಮುಖ್ಯಮಂತ್ರಿಗಳು ಮಾಧ್ಯಮದಿಂದ ಹಾಗೂ ಸಾರ್ವಜನಿಕರಿಂದಲೂ ಸಾಕಷ್ಟು ಮೂದಲಿಕೆಗೆ ಒಳಗಾಗಬೇಕಾಯಿತು. ವಿರೋಧ ಪಕ್ಷಗಳೂ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸದನದಲ್ಲಿ ವೈದ್ಯರ ಮುಷ್ಕರದ ಕದನ : ಯಾರು, ಏನು ಹೇಳಿದರು?ಸದನದಲ್ಲಿ ವೈದ್ಯರ ಮುಷ್ಕರದ ಕದನ : ಯಾರು, ಏನು ಹೇಳಿದರು?

ಇದೆಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನ ಶಾಸಕರ ಪಾಳೆಯದಲ್ಲೇ ಕಾಯ್ದೆಯ ಪರ-ವಿರೋಧ ಬಣಗಳು ನಿರ್ಮಾಣವಾಗಿ ಜಿದ್ದಾ ಜಿದ್ದಾಗಿ ಇಳಿದಿರುವುದು ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿದೆ

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಕಾಯ್ದೆ ವಿರೋಧಿ ಬಣದ ಸದಸ್ಯರು ಈಗ ಹೈಕಮಾಂಡ್ ಗೆ ಸಿದ್ದರಾಮಯ್ಯ ವಿರುದ್ಧ ದೂರು ಕೂಡ ನೀಡಿದ್ದಾರೆ. ಇಮೇಲ್ ಮುಖಾಂತರ ತಮ್ಮ ದೂರು ಸಲ್ಲಿಸಿರುವ ಅತೃಪ್ತ ಶಾಸಕರು ಸಿದ್ದರಾಮಯ್ಯ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಾಸಕರು ಹೈಕಮಾಂಡ್ ಗೆ ಬರೆದ ಪತ್ರದಲ್ಲಿ ಏನಿದೆ, ಮುಂದೆ ಓದಿ....

ಸೋನಿಯಾ ಗಾಂಧಿಗೂ ಒಂದು ಪ್ರತಿ

ಸೋನಿಯಾ ಗಾಂಧಿಗೂ ಒಂದು ಪ್ರತಿ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಸಚಿವರು, ಶಾಸಕರು ಯಥಾವತ್ ಪ್ರತಿಯನ್ನು ಸೋನಿಯಾ ಗಾಂಧಿ ಅವರಿಗೂ ರವಾನಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನೂ ದೂರವಾಣಿ ಮುಖಾಂತರ ಸಂಪರ್ಕಿಸಿ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಬಗ್ಗೆಯೂ ಪತ್ರದಲ್ಲಿ ದೂರಿದ್ದಾರೆ ಎನ್ನಲಾಗಿದೆ.

ವಿವಾದಾತ್ಮಕ ಕಾಯ್ದೆ ಅವಶ್ಯಕತೆ ಇರಲಿಲ್ಲ

ವಿವಾದಾತ್ಮಕ ಕಾಯ್ದೆ ಅವಶ್ಯಕತೆ ಇರಲಿಲ್ಲ

ಚುನಾವಣೆ ಹೊಸ್ತಿಲಲ್ಲಿದ್ದಾಗ ಇಂತಹಾ ವಿವಾದಾತ್ಮಕ ಕಾಯ್ದೆ ಮಂಡಿಸಲು ಮುಂದಾಗುವ ಅಗತ್ಯವೇ ಇರಲಿಲ್ಲ ಎಂದು ಅತೃಪ್ತ ಸಚಿವರು, ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಚುನಾವಣೆ ಸಮಯದಲ್ಲಿ ಯಾವ ಸಮುದಾಯವನ್ನೂ, ಯಾವ ಸಂಘಟನೆಯನ್ನೂ ಎದುರುಹಾಕಿಕೊಳ್ಳದೇ ಕಾರ್ಯ ಮಾಡಬೇಕು ಆದರೆ ಸರ್ಕಾರವು ವೈದ್ಯರನ್ನು ಅವರ ಕುಟುಂಬವನ್ನೂ ಎದುರು ಹಾಕಿಕೊಂಡಿದೆ. ವೈದ್ಯರ ಪ್ರತಿಭಟನೆಗೆ ಹಲವು ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ತಿರುಗಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

ತಮ್ಮಷ್ಟಕ್ಕೆ ತಾವೇ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ

ತಮ್ಮಷ್ಟಕ್ಕೆ ತಾವೇ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ

ಕಾಯ್ದೆ ರಚಿಸುವಾಗ ಪಕ್ಷದ ಶಾಸಕ ಮತ್ತು ಸಚಿವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿಲ್ಲ ಎಂದು ಶಾಸಕರು ದೂರಿದ್ದಾರೆ. ಪಕ್ಷದ ಬಹಳಷ್ಟು ಶಾಸಕರಿಗೆ ಕಾಯ್ದೆ ಮಂಡನೆಯ ಬಗ್ಗೆ ಮಾಹಿತಿಯೇ ಇರಲಿಲ್ಲ. ಆರೋಗ್ಯ ಸಚಿವರು ತಮ್ಮಷ್ಟಕ್ಕೆ ತಾವೇ ಕಾಯ್ದೆ ತರಲು ಮುಂದಾಗಿದ್ದಾರೆ. ಅವರೊಬ್ಬರೆ ಸಚಿವ ಸಂಪುಟದಲ್ಲಿರುವುದು ಎಂದು ತಿಳಿದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಜನರ ಬಳಿ ಹೋಗುವುದು ಸರ್ಕಾರವಲ್ಲ ಪಕ್ಷ

ಜನರ ಬಳಿ ಹೋಗುವುದು ಸರ್ಕಾರವಲ್ಲ ಪಕ್ಷ

ಕಾಯ್ದೆಯು ಚುನಾವಣೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ನ ಅತೃಪ್ತ ಶಾಸಕರು ಪತ್ರದಲ್ಲಿ ಹೇಳಿದ್ದಾರೆ. ಚುನಾವಣೆ ವೇಳೆ ಜನರ ಬಳಿ ತೆರಳುವುದು ಸರ್ಕಾರವಲ್ಲ ಪಕ್ಷ. ಹಾಗಾಗಿ ಜನರು ಸರ್ಕಾರದ ಕ್ರಮಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಪ್ರತಿನಿಧಿಗಳು ಏನೆಂದು ಉತ್ತರ ನೀಡುವುದು ಎಂದು ಪತ್ರದಲ್ಲಿ ಹೇಳಲಾಗಿದೆ.

English summary
Few Congress MLAs have written a letter to Rahul Gandhi and Sonia Gandhi complaining against Siddaramaiah about impending KPME Bill, which is being debated at Winter Session in Belagavi. Few have expressed unhappiness over Ramesh Kumar too, for not taking others into cofidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X