ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಫೇಸ್‌ಬುಕ್ ಪೋಸ್ಟ್ ವೈರಲ್

|
Google Oneindia Kannada News

ಬೆಳಗಾವಿ, ಫೆಬ್ರವರಿ 14 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಫೇಸ್‌ ಬುಕ್ ಪೋಸ್ಟ್ ವೈರಲ್ ಆಗಿದೆ. ಫೆ.14ರಂದು ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಪೋಸ್ಟ್ ಹಾಕಿದ್ದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ Laxmihebbalkarofficial ಫೇಸ್‌ ಬುಕ್ ಪುಟದಲ್ಲಿ ಹುಟ್ಟು ಹಬ್ಬದ ಬಗ್ಗೆ ಒಂದು ವಿಡಿಯೋವನ್ನು ಹಾಕಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ನಿಮ್ಮ ಮನೆ ಮಗಳು ಎಂದು ಕ್ಷೇತ್ರದ ಜನರನ್ನು ಉದ್ದೇಶಿಸಿ ಶಾಸಕರು ಈ ವಿಡಿಯೋ ಹಾಕಿದ್ದಾರೆ.

ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಹೈಕಮಾಂಡ್‌ ಕರೆ!ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಹೈಕಮಾಂಡ್‌ ಕರೆ!

ಫೆಬ್ರವರಿ 14ರಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹುಟ್ಟು ಹಬ್ಬ. ಆದರೆ, ನಾನು ಹುಟ್ಟ ಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ. ಮೇ 12ರಂದು ಜನರ ಜೊತೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತೇನೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಗೆದ್ದ ಜಾರಕಿಹೊಳಿ ಪ್ರಭಾವ, ಮಹಿಳಾ ಘಟಕ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕೊಕ್‌ಗೆದ್ದ ಜಾರಕಿಹೊಳಿ ಪ್ರಭಾವ, ಮಹಿಳಾ ಘಟಕ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕೊಕ್‌

2018ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು 102040 ಮತಗಳನ್ನು ಪಡೆದು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ರಾಜಕೀಯ ಮುರುಜನ್ಮ ನೀಡಿದ ಕ್ಷೇತ್ರದ ಜನರಿಗೆ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ರಮೇಶ್ ಕೆನ್ನೆ ಸವರಿದ ಸಿಎಂ, ಅಕ್ಕ ಪಕ್ಕ ಕುಳಿತ ಸತೀಶ್-ಲಕ್ಷ್ಮಿ ಹೆಬ್ಬಾಳ್ಕರ್ರಮೇಶ್ ಕೆನ್ನೆ ಸವರಿದ ಸಿಎಂ, ಅಕ್ಕ ಪಕ್ಕ ಕುಳಿತ ಸತೀಶ್-ಲಕ್ಷ್ಮಿ ಹೆಬ್ಬಾಳ್ಕರ್

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಹಾ ಜನತೆಯು ನನಗೆ
2018 ರ ಮೇ 12 ರಂದು ಆಶೀರ್ವಾದವನ್ನು ಮಾಡಿ ರಾಜಕೀಯ ರಂಗದಲ್ಲಿ ಮರು ಜನ್ಮವನ್ನು ನೀಡಿ ಪ್ರಚಂಡ ಬಹುಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಆಯ್ಕೆಯನ್ನು ಮಾಡಿದ್ದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ದಿನವಾಗಿದೆ, ಆದ್ದರಿಂದ ಫೆಬ್ರವರಿ 14 ರ ಬದಲಾಗಿ ಮೇ 12 ಅದೇ ದಿನ ಅರ್ಥಪೂರ್ಣವಾಗಿ ನನ್ನ ಹುಟ್ಟು ಹಬ್ಬವನ್ನು ಕ್ಷೇತ್ರದ ಜನತೆಯ ಸಮ್ಮುಖದಲ್ಲಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ..! ಧನ್ಯವಾದಗಳೊಂದಿಗೆ
ನಿಮ್ಮ ಮನೆ ಮಗಳು ಎಂದು ಹೇಳಿದ್ದಾರೆ.

ಹುಟ್ಟು ಹಬ್ಬ ಆಚರಣೆ ದಿನಾಂಕ ಬದಲು

ಹುಟ್ಟು ಹಬ್ಬ ಆಚರಣೆ ದಿನಾಂಕ ಬದಲು

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಫೆ.14ರ ಬದಲು ಮೇ 12ರಂದು ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಸಮ್ಮುಖದಲ್ಲಿಯೇ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ 142 ಶೇರ್ ಆಗಿದ್ದು, 1.9 ಕೆ ಲೈಕ್ ಆಗಿದೆ. 30 ಕೆ ಜನರು ವಿಡಿಯೋವನ್ನು ನೋಡಿದ್ದಾರೆ.

ರಾಜಕೀಯ ರಂಗದಲ್ಲಿ ಮರು ಜನ್ಮ

ರಾಜಕೀಯ ರಂಗದಲ್ಲಿ ಮರು ಜನ್ಮ

ಸತತ ಎರಡು ಚುನಾವಣೆಗಳಲ್ಲಿ ಸೋತಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವು ಮೂಲಕ ರಾಜಕೀಯ ರಂಗದಲ್ಲಿ ಮರು ಜನ್ಮ ಪಡೆದಿದ್ದರು. ಚುನಾವಣೆಯಲ್ಲಿ ಬಿಜೆಪಿಯ ಸಂಜಯ್ ಬಿ.ಪಾಟೀಲ್ ಅವರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಎರಡು ಚುನಾವಣೆ ಸೋಲು

ಎರಡು ಚುನಾವಣೆ ಸೋಲು

2018ರ ವಿಧಾನಸಭೆ ಚುನಾವಣೆ ಗೆಲುವಿಗೂ ಮೊದಲು ಎರಡು ಚುನಾವಣೆಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋತಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 35,811 ಮತಗಳನ್ನು ಪಡೆದು ಸೋತಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ 4,78,557 ಮತಗಳನ್ನು ಪಡೆದು ಬಿಜೆಪಿಯ ಸುರೇಶ್ ಅಂಗಡಿ ವಿರುದ್ಧ ಸೋಲು ಅನುಭವಿಸಿದ್ದರು.

ಬೆಳಗಾವಿಯ ಪ್ರಭಾವಿ ನಾಯಕಿ

ಬೆಳಗಾವಿಯ ಪ್ರಭಾವಿ ನಾಯಕಿ

ಕರ್ನಾಟಕದ ಇತರ ಜಿಲ್ಲೆಗಳ ರಾಜಕೀಯ ಬೇರೆ, ಬೆಳಗಾವಿಯ ರಾಜಕೀಯವೇ ಬೇರೆ. ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಹ ಒಬ್ಬರು. ಕರ್ನಾಟಕ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿಯೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ನಡೆದ ಜಟಾಪಟಿಯನ್ನು ಇಡೀ ರಾಜ್ಯದ ಜನರು ನೋಡಿದ್ದಾರೆ.

English summary
Belagavi Rural constituency Congress MLA Lakshmi Hebbalkar facebook post viral. I will celebrate my birthday on May 12 instead of February 14 she said in a video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X