ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಲಕ್ಷ್ಮಿಗೆ ಸಿಕ್ತು ಮರಾಠಿಗರ ಬೆಂಬಲ

By Mahesh
|
Google Oneindia Kannada News

ಬೆಳಗಾವಿ, ಏ.9: ಕುಂದಾನಗರಿಯ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಅವರು ಬೆಳಗಾವಿ ಮಹಾನಗರ ಪಾಲಿಕೆಯನ್ನು ಬೆಂಗಳೂರು ಮಾದರಿಯಲ್ಲಿ ಬೃಹತ್ತ ಬೆಳಗಾವಿ ಮಹಾನಗರ ಪಾಲಿಕೆಯನ್ನು ಮಾಡುವ ಸಂಕಲ್ಪ ನನ್ನದು ಎಂದು ಘೋಷಿಸಿದ ಬೆನ್ನಲ್ಲೇ ಎಂಇಎಸ್ ಶಾಸಕ ಸಂಭಾಜಿ ರಾವ್ ಪಾಟೀಲ್ ಅವರ ಬೆಂಬಲ ಸಿಕ್ಕಿದೆ.

ಇದರ ಜತೆಗೆ ಬೆಳಗಾವಿ ಜೆಡಿಎಸ್ ಅಭ್ಯರ್ಥಿ ಭಗವಾನ್ ಅವರು ಕೂಡಾ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ ಈ ಬಾರಿ ಕುಂದಾ ನಗರಿಯಲ್ಲಿ ಕಾಂಗ್ರೆಸ್ ಬಾವುಟ ಹಾರುವುದು ನಿಶ್ಚಿತವಾಗಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕ ಸಂಭಾಜಿ ರಾವ್ ಅವರು ತಮ್ಮ ಬೆಂಬಲಿಗರು, ಕಾರ್ಪೊರೇಟರ್ ದಿನೇಶ್ ರಾವಲ್, ಸಂಜಯ್ ಶಿಂಧೆ ಮುಂತಾದವರೊಂದಿಗೆ ಲಕ್ಷ್ಮಿ ಅವರ ಪರ ವಡಗಾಂವ್, ಖಾಸ್ ಬಾಗ್ ಹಾಗೂ ಶಹಾಪುರದಲ್ಲಿ ಮತಯಾಚನೆ ಮಾಡುವ ಮೂಲಕ ಅಚ್ಚರಿ ಮೂಡಿಸಿದರು. ಲಕ್ಷ್ಮಿ ಅವರಿಗೆ ಎಂಇಎಸ್ ಶಾಸಕರ ಬೆಂಬಲ ಸಿಕ್ಕಿರುವುದರ ಬಗ್ಗೆ ಪರ ವಿರೋಧಿ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.

ನಗರದ ಫುಲೆ ರಸ್ತೆಯಲ್ಲಿ ಮಹಾರಾಷ್ಟ್ರ ಪರ ಕಾರ್ಯಕರ್ತರು ಸಾಂಭಾಜಿ ಪಾಟೀಲ್ ವಿರುದ್ಧ ಬೋರ್ಡ್ ಬರೆದು ಹಾಕಿದ್ದು ಎಂಇಎಸ್ ವಿರೋಧಿ ಎಂದು ಜರೆದಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಉಳಿದಿದೆ.

ನಿಮಗೆ ಬೇಕಾದ ಅಗತ್ಯ ಸೌಲಭ್ಯ ಒದಗಿಸಲು ಅನುದಾನ ನೀಡಲು ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ ಹೀಗಾಗಿ ಲಕ್ಷ್ಮಿ ಅವರ ಪರ ಪ್ರಚಾರ ನಡೆಸಿದ್ದೇನೆ ಎಂದು ಸಾಂಭಾಜಿ ಹೇಳಿಕೊಂಡಿದ್ದಾರೆ. ಎಂಇಎಸ್ ನ ಮಾಜಿ ಶಾಸಕ ಮನೋಹರ್ ಕಿನೇಕರ್ ಅವರು ಕೂಡಾ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಕೆಲವು ಎಂಇಎಸ್ ನಾಯಕರು ಹಿಂದುತ್ವದ ಅಡಿಯಲ್ಲಿ ಮೋದಿ ಅವರನ್ನು ಬೆಂಬಲಿಸುತ್ತಿದ್ದು, ಈಗ ಮರಾಠಿಗರ ಪಕ್ಷ ಒಡೆದ ಮನೆಯಾಗಿದೆ.

ಬೆಳಗಾವಿಯಲ್ಲಿ ಕಾಂಗ್ರೆಸ್ಸಿಗೆ ವಿಜಯ ಲಕ್ಷ್ಮಿ ಒಲಿದಿದೆ

ಬೆಳಗಾವಿಯಲ್ಲಿ ಕಾಂಗ್ರೆಸ್ಸಿಗೆ ವಿಜಯ ಲಕ್ಷ್ಮಿ ಒಲಿದಿದೆ

ಬೆಳಗಾವಿಯಲ್ಲಿ ಕಾಂಗ್ರೆಸ್ಸಿಗೆ ವಿಜಯ ಲಕ್ಷ್ಮಿ ಒಲಿದಿದೆ. ಜೆಡಿಎಸ್ ಪ್ರಬಲ ಅಭ್ಯರ್ಥಿ ಭಗವಾನ್ ಹಾಗೂ ಸಂಗೊಳ್ಳಿ ರಾಯಣ್ಣ ಸಿನಿಮಾ ನಿರ್ಮಾಪಕ ಆನಂದ್ ಅಪ್ಪುಗೊಳ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವುದು ಅಂಗಡಿಗೆ ಸೋಲಿನ ಭೀತಿ ಎದುರಾಗಿದೆ ಎನ್ನಲಾಗಿದೆ. ನನ್ನ ಇಬ್ಬರು ಬ್ರದರ್ಸ್ ಕಾಂಗ್ರೆಸ್ಸಿಗೆ ಬೇಷರತ್ ಸೇರಿಕೊಂಡಿದ್ದಾರೆ ನಮಗೆ ಜಯ ಎಂದು ಲಕ್ಷ್ಮಿ ನಗೆ ಬೀರಿದ್ದಾರೆ.

ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಿ-ಸತೀಶ

ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಿ-ಸತೀಶ

ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರು ಸಾಮಾನ್ಯ ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶ ನೀಡಿ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದ್ದಾರೆ.

ಬೆಳಗಾವಿಯಲ್ಲಿ ನಡೆದ ಹಿರಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು ಹಿರಿಯ ಕಾರ್ಯಕರ್ತರಿಗೆ ಹಲವಾರು ಚುನಾವಣೆಗಳನ್ನು ಎದುರಿಸಿದ ಅನುಭವ ಇದೆ. ಈ ಬಾರಿಯ ಚುನಾವಣೆಯನ್ನು ಸವಾಲಾಗಿ ಸ್ವಿಕರಿಸಿ ಪಕ್ಷದ ಗೆಲುವಿಗೆ ಬೇರುಮಟ್ಟದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿಕೊಂಡರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ.ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು,ಸರ್ಕಾರದ ಎಲ್ಲ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಮ್ಮ ಸಾಧನೆಗಳೆಂದು ಜನರಿಗೆ ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತಿದ್ದಾರೆಂದು ಸತೀಶ ಆರೋಪಿಸಿದರು.

ಬೆಳಗಾವಿ ನಗರ ಪಾಲಿಕೆ ಅಭಿವೃದ್ಧಿ ಬಗ್ಗೆ ಲಕ್ಷ್ಮಿ

ಬೆಳಗಾವಿ ನಗರ ಪಾಲಿಕೆ ಅಭಿವೃದ್ಧಿ ಬಗ್ಗೆ ಲಕ್ಷ್ಮಿ

ಬೆಳಗಾವಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ನಗರದ ಸುತ್ತಮುತ್ತಲು ಬೆಳೆದು ನಿಂತ ಬಡಾವಣೆಗಳನ್ನು ಬೆಳಗಾವಿ ಮಹಾನಗರ ವ್ಯಾಪ್ತಿಗೆ ಸೇರಿಸಿ ಬೆಳಗಾವಿ ಮಹಾನಗರ ಪಾಲಿಕೆಯನ್ನು ಬೆಂಗಳೂರು ಮಾದರಿಯಲ್ಲಿ ಬೃಹತ್ ಬೆಳಗಾವಿ ಮಹಾನಗರ ಪಾಲಿಕೆಯನ್ನು ಮಾಡುವ ಸಂಕಲ್ಪ ನನ್ನದಾಗಿದ್ದು ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಸೇವೆ ಮಾಡುವ ಅವಕಾಶ ನೀಡಿದರೆ ಹಲವಾರು ಅಭಿವೃದ್ಧಿ ಯೋಜನೆಯ ಮೂಲಕ ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡುವದಾಗಿ ಲಕ್ಷ್ಮೀ ಹೆಬ್ಬಾಳಕರ ಮತದಾರರಿಗೆ ಭರವಸೆ ನೀಡಿದರು

ಬಿಜೆಪಿಯಿಂದ ಕರ್ನಾಟಕ ರಾಜ್ಯಕ್ಕೆ ಕಳಂಕ-ಹೆಬ್ಬಾಳಕರ

ಬಿಜೆಪಿಯಿಂದ ಕರ್ನಾಟಕ ರಾಜ್ಯಕ್ಕೆ ಕಳಂಕ-ಹೆಬ್ಬಾಳಕರ

ರಾಜ್ಯದಲ್ಲಿ ಐದು ವರ್ಷಗಳಕಾಲ ದುರಾಡಳಿತ ನಡೆಸಿದ ಬಿಜೆಪಿಯಿಂದ ರಾಜ್ಯದ ಮಾನ ಹರಾಜಾಗಿದೆ.ಬಿಜೆಪಿ ನಾಯಕರು ಕೈಗಾರಿಕೆಗಳನ್ನು ಸ್ಥಾಪಿಸುವ ನೆಪದಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡಿ ರಾಜ್ಯದ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಲಕ್ಷ್ಮೀ ಹೆಬಾಳಕರ ಆರೋಪಿಸಿದ್ದಾರೆ.

ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಅವರು.ಕಾಂಗ್ರೇಸ್ ಏನೂ ಮಾಡಿಲ್ಲವೆಂದು ಕಾಂಗ್ರೆಸ್ ಪಕ್ಷದ ಮೇಲೆ ಗೂಭೆ ಕೂರಿಸುತ್ತಿರುವ ಸುರೇಶ ಅಂಗಡಿಯವರಿಗೆ ಜಿಲ್ಲೆಯ ಅಭಿವೃದ್ಧಿ ಮಾಡಿ ಎಂದು ಈ ಕ್ಷೇತ್ರದ ಜನ ಅವರನ್ನು ಎರಡು ಬಾರಿ ದೆಹಲಿಗೆ ಕಳುಹಿಸಿದ್ದರು ಹತ್ತು ವರ್ಷಗಳಕಾಲ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಮಾಡಿದ್ದೇನು ಎನ್ನುವದನ್ನು ಜನರಿಗೆ ಉತ್ತರ ನೀಡಲಿ ಎಂದು ಹೆಬ್ಬಾಳಕರ ಸವಾಲು ಹಾಕಿದ್ದಾರೆ.

ಬಸ್ ನಲ್ಲಿ ಸಂಚರಿಸಿ ಮತಯಾಚನೆ

ಬಸ್ ನಲ್ಲಿ ಸಂಚರಿಸಿ ಮತಯಾಚನೆ

ಲಕ್ಷ್ಮೀ ಹೆಬ್ಬಾಳಕರ ಅವರು ಅಲಾರವಾಡ ಗ್ರಾಮದಿಂದ ಸಿಟಿ ಬಸ್ ನಲ್ಲಿ ಪ್ರಯಾಣಿಸಿ ಬಸ್ ಪ್ರಯಾಣಿಕರಲ್ಲಿ ಮತಯಾಚಿಸಿ ಅಚ್ಚರಿ ಮೂಡಿಸಿದರು ಅಲಾರವಾಡ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯ ಮುಗಿಸಿಕೊಂಡು ಬೆಳಗಾವಿಗೆ ಮರಳಬೆಕೆನ್ನುವಷ್ಟರಲ್ಲಿ ಸರ್ಕಾರಿ ಬಸ್ ಎದುರಾಯಿತು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಶಾಸಕ ಫಿರೋಜ್ ಸೇಠ ನಗರಸೇವಕಿಯರಾದ ಜಯಶ್ರೀ ಮಾಳಗಿ ಪುಷ್ಪಾ ಪರ್ವತರಾವ ನಾಗರಾಜ ಯಾದವ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಕಾರ್ಯಕರ್ತರು ಸರ್ರನೇ ಬಸ್ ಏರಿ ಟಿಕೆಟ್ ಪಡೆದು ಪ್ರಯಾಣಿಕರಲ್ಲಿ ಮತಯಾಚಿಸುತ್ತ ಬೆಳಗಾವಿಯವರೆಗೆ ಬಸ್ ‍ನಲ್ಲಿಯೇ ಪ್ರಯಾಣಿಸಿದರು.

ರೈತರ ಸಾಲ ಮನ್ನಾಮಾಡುತ್ತೇವೆ ಎಂದು ಸುಳ್ಳು ಹೇಳಿ

ರೈತರ ಸಾಲ ಮನ್ನಾಮಾಡುತ್ತೇವೆ ಎಂದು ಸುಳ್ಳು ಹೇಳಿ

ರೈತರ ಸಾಲ ಮನ್ನಾಮಾಡುತ್ತೇವೆ ಎಂದು ಸುಳ್ಳು ಹೇಳಿಒಂದು ಪೈಸೆಯನ್ನು ಬಿಡುಗಡೆ ಮಾಡದೆ ರೈತರಿಗೆ ಮೋಸ ಮಾಡಿರುವ ಬಿಜೆಪಿ ರೈತರ ವಿರೋಧಿಯಾಗಿದೆ ಎಂದು ಆರೋಪಿಸಿದರು ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರ ಸಾಲ ಮನ್ನಾಗೆ ಸಂಬಂಧಿಸಿದ ಅನುದಾನವನ್ನು ಬಿಡುಗಡೆ ಮಾಡಿ ಕಾಂಗ್ರೇಸ್ ಸರ್ಕಾರ ರೈತಪರ ಸರ್ಕಾರವೆಂದು ಸಾಬೀತು ಪಡಿಸಿದ್ದಾರೆಂದು ಹೆಬ್ಬಾಳಕರ ಹೇಳಿದರು

ಸುಳ್ಳಿನ ರೀಲು ಬಿಟ್ಟಿದ್ದೇ ಸುರೇಶ ಅಂಗಡಿ ಸಾಧನೆ

ಸುಳ್ಳಿನ ರೀಲು ಬಿಟ್ಟಿದ್ದೇ ಸುರೇಶ ಅಂಗಡಿ ಸಾಧನೆ

ಬೆಳಗಾವಿ ಜಿಲ್ಲೆಯು ಜನಸ್ನೇಹಿ ವಾಯುಗುಣವನ್ನು ಹೊಂದಿದೆ. ಮಧುರ ಭಾಷಾ ಬಾಂಧವ್ಯ, ಸೌಹಾಧ್ರ್ಯದ ಸಹಬಾಳ್ವೆಗೆ ಜಿಲ್ಲೆ ಹೆಸರಾಗಿದೆ. ಆದರೆ ಬೆಳಗಾವಿ ನಗರ ವೈಜ್ಞಾನಿಕವಾಗಿ ಬೆಳವಣಿಗೆಯಾಗುವ ಅಗತ್ಯವಿದ್ದು ನಗರದ ಅಭಿವೃದ್ಧಿಗಾಗಿ ಕೇಂದ್ರದಿಂದ ವಿಶೇಷ ಅನುದಾನ ತರುವಲ್ಲಿ ಸಂಸದ ಸುರೇಶ ಅಂಗಡಿ ಸಂಪೂರ್ಣವಾಗಿ ವಿಫಲರಾಗಿದ್ದು ಬೆಳಗಾವಿ ನಗರಕ್ಕೆ ರೈಲಿನ ಬದಲು ಸುಳ್ಳಿನ ರೀಲು ಬಿಟ್ಟಿದ್ದೇ ಸುರೇಶ ಅಂಗಡಿ ಸಾಧನೆ ಎಂದು ಲಕ್ಷ್ಮೀಹೆಬ್ಬಾಳಕರ ಆರೋಪಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ

ಬೆಳಗಾವಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ

ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದ ಅವರು ಬೆಳಗಾವಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೇ ನಗರದ ನಾಲ್ಕು ಪ್ರದೇಶಗಳಲ್ಲಿ ರೈಲ್ವೆ ಮೆಲ್ಸೆತುವೆ ನಿರ್ಮಾಣಕ್ಕಾಗಿ ಸಂಸದ ಸುರೇಶ ಅಂಗಡಿ ಯಾವುದೇ ರೀತಿಯ ಪ್ರಯತ್ನ ಮಾಡಲಿಲ್ಲ ಬೆಳಗಾವಿಯಲ್ಲಿ ಕುಳಿತುಕೊಂಡು ಪತ್ರ ಬರೇಯುವದರಲ್ಲೇ ಹತ್ತು ವರ್ಷ ಕಾಲಹರಣ ಮಾಡಿದ್ದು ಈಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಹೆಬ್ಬಾಳಕರ ಮತದಾರರಲ್ಲಿ ಮನವಿ ಮಾಡಿಕೊಂಡರು

ನಗರದ ಅಭಿವೃದ್ಧಿಯ ದೃಷ್ಠಿಯಿಂದ ಮತ ಹಾಕಿ

ನಗರದ ಅಭಿವೃದ್ಧಿಯ ದೃಷ್ಠಿಯಿಂದ ಮತ ಹಾಕಿ

ಬೆಳಗಾವಿ ನಗರದ ಟ್ರಾಫಿಕ್ ಸಮಸ್ಯಯನ್ನು ಹೋಗಲಾಡಿಸಲು ರೆಲ್ವೆ ಮೆಲ್ಸೆತುವೆ ನಿರ್ಮಾಣ,ಬೆಳಗಾವಿ ನಗರದ ಚನ್ನಮ್ಮನ ವೃತ್ತದಿಂದ ಪೀರನವಾಡಿಯವರೆಗೆ ಪ್ಲಾಯ್ ಓವರ್ ಬ್ರಿಡ್ಜ್ ನಿರ್ಮಾಣ, ಮಲ್ಟಿಲೆವಲ್ ಪಾರ್ಕಿಂಗ್, ಮಹಿಳೆಯರಿಗಾಗಿ ವಿಶೇಷ ಸ್ಡಿಮಿಂಗ್ ಫೂಲ್, ಸೇರಿದಂತೆ ನಗರದ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತರುವ ಸಂಕಲ್ಪ ಮಾಡಿದ್ದು ನಗರದ ಅಭಿವೃದ್ಧಿಯ ದೃಷ್ಠಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ತಮ್ಮನ್ನು ಗೆಲ್ಲಿಸಿ ಜನಸೇವೆಗೆ ಅವಕಾಶ ನೀಡಬೇಕೆಂದು ಹೆಬ್ಬಾಳಕರ ವಿನಂತಿಸಿಕೊಂಡರು

ಸಂಸದ ಸುರೇಶ ಅಂಗಡಿ ರೈಲು ಬಿಟ್ಟಿದ್ದು ಸಾಕು

ಸಂಸದ ಸುರೇಶ ಅಂಗಡಿ ರೈಲು ಬಿಟ್ಟಿದ್ದು ಸಾಕು

ಸಂಸದ ಸುರೇಶ ಅಂಗಡಿಯವರಿಗೆ ಹತ್ತು ವರ್ಷದಲ್ಲಿ ರಾಣಿ ಚನ್ನಮ್ಮ ಎಕ್ಸಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಿಸಲು ಸಾಧ್ಯವಾಗಲಿಲ್ಲ.ಹುಬ್ಬಳ್ಳಿ ಬೆಂಗಳೂರು ಇಂಟರ ಸಿಟಿ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಲು ಸುರೇಶ ಅಂಗಡಿಯವರಿಂದ ಸಾಧ್ಯವಾಗಲಿಲ್ಲ

ಲಕ್ಷ್ಮೀ ಹೆಬ್ಬಾಳಕರ ಮರಾಠಿ ಕರಪತ್ರ ಕಿರಿಕಿರಿ

ಲಕ್ಷ್ಮೀ ಹೆಬ್ಬಾಳಕರ ಮರಾಠಿ ಕರಪತ್ರ ಕಿರಿಕಿರಿ

ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಅವರು ಮರಾಠಿಯಲ್ಲಿ ಕರಪತ್ರ ಮತ ಯಾಚನೆ ಪತ್ರಗಳನ್ನು ಹೊರಡಿಸಿ ಮರಾಠಿಗರನ್ನು ಸೆಳೆದಿದ್ದು ಫಲ ನೀಡಿದೆ. ಹೀಗಾಗಿ ಎಂಇಎಸ್ ಕೂಡಾ ಈಗ ಕಾಂಗ್ರೆಸ್ ಪರ ನಿಂತಿದೆ. ಆದರೆ, ಕನ್ನಡ ನಾಡಿನಲ್ಲಿ ಮರಾಠಿಯಲ್ಲಿ ಮತ ಯಾಚಿಸಿದ್ದು ಎಷ್ಟು ಸರಿ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನಿಸಿದ್ದಾರೆ.

English summary
Maharashtra Ekikaran Samiti (MES) MLA Sambhajirao Patil has drawn criticism from a group in the MES for campaigning for Congress Lok Sabha candidate Laxmi Hebbalkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X