ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ; ಜೂನ್‌ 4ರಿಂದ ಸಂಪೂರ್ಣ ಲಾಕ್‌ಡೌನ್

|
Google Oneindia Kannada News

ಬೆಳಗಾವಿ, ಜೂನ್ 01; ಬೆಳಗಾವಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಸೋಂಕು ಹರಡುವಿಕೆ ತಡೆಯಲು ಜೂನ್ 4 ರಿಂದ 7ರ ತನಕ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಈ ಕುರಿತು ಆದೇಶ ಹೊರಡಿಸಿದ್ದಾರೆ. ಜೂನ್ 4ರ ಬೆಳಗ್ಗೆ 6 ರಿಂದ ಸಂಪೂರ್ಣ ಲಾಕ್‌ಡೌನ್ ಜಾರಿಗೆ ಬರಲಿದೆ. ಕರ್ನಾಟಕದಲ್ಲಿ ಜೂನ್ 7ರ ಮುಂಜಾನೆ 6ರ ತನಕ ಲಾಕ್‌ಡೌನ್ ಜಾರಿಯಲ್ಲಿರಲಿದೆ.

ಬೆಳಗಾವಿ; ಕೊರೊನಾ ತೊಲಗಿಸಲು ಬಿಜೆಪಿ ಶಾಸಕನಿಂದ ಹೋಮ! ಬೆಳಗಾವಿ; ಕೊರೊನಾ ತೊಲಗಿಸಲು ಬಿಜೆಪಿ ಶಾಸಕನಿಂದ ಹೋಮ!

ಶುಕ್ರವಾರ, ಶನಿವಾರ, ಭಾನುವಾರ ಮತ್ತು ಸೋಮವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಈ ದಿನಗಳಲ್ಲಿ ಬೆಳಗ್ಗೆ 6 ರಿಂದ 10ರ ತನಕ ತರಕಾರಿಗಳನ್ನು ಸಹ ಕೊಳ್ಳಲು ಅವಕಾಶವಿಲ್ಲ.

ಬೆಳಗಾವಿ: ಕೋವಿಡ್ ನಿಯಮ ಮೀರಿ ಕುದುರೆಯ ಅಂತ್ಯಕ್ರಿಯೆಯಲ್ಲಿ ನೂರಾರು ಜನರು ಬೆಳಗಾವಿ: ಕೋವಿಡ್ ನಿಯಮ ಮೀರಿ ಕುದುರೆಯ ಅಂತ್ಯಕ್ರಿಯೆಯಲ್ಲಿ ನೂರಾರು ಜನರು

Complete Lockdown In Belagavi From June 4

ಸಂಪೂರ್ಣ ಲಾಕ್‌ಡೌನ್ ಅವಧಿಯಲ್ಲಿ ಹಾಲು, ಆನ್‌ಲೈನ್ ಫುಡ್ ಡೆಲಿವರಿ, ಮಡಿಕಲ್ ಶಾಪ್, ಆಸ್ಪತ್ರೆ, ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ನಡೆಸಲು ಅವಕಾಶವನ್ನು ನೀಡಲಾಗಿದೆ.

 ಲಾಕ್ ಡೌನ್ ಬೇಡ ಎಂದ ಸಚಿವರಿಗೆ ಡಾ.ಸುಧಾಕರ್ ಹೇಳಿದ್ದೇನು? ಲಾಕ್ ಡೌನ್ ಬೇಡ ಎಂದ ಸಚಿವರಿಗೆ ಡಾ.ಸುಧಾಕರ್ ಹೇಳಿದ್ದೇನು?

ನ್ಯಾಯಬೆಲೆ ಅಂಗಡಿಗಳು 6 ರಿಂದ 10ರ ತನಕ, ರೈತ ಸಂಪರ್ಕ ಕೇಂದ್ರಗಳು ಬೆಳಗ್ಗೆ 6 ರಿಂದ 12ರ ತನಕ ಕಾರ್ಯ ನಿರ್ವಹಣೆ ಮಾಡಲು ಅವಕಾಶ ಕೊಡಲಾಗಿದೆ. ಲಾಕ್‌ಡೌನ್ ಅವಧದಿಯಲ್ಲಿ ಜನ, ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ಸಂಚಾರ ನಡೆಸುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರದ ವರದಿ ಅನ್ವಯ 910 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು 15250.

English summary
Complete lockdown in Belagavi from June 4 to 7, 2021. No relaxation to buy vegetables in morning 6 to 10 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X