ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಗುಂಪು ಘರ್ಷಣೆ, 5 ಬೈಕ್‌ಗಳಿಗೆ ಬೆಂಕಿ

|
Google Oneindia Kannada News

ಬೆಳಗಾವಿ, ಸೆ. 11 : ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರದ ಚವಾಟ­ಗಲ್ಲಿ, ಖಡಕ್‌ಗಲ್ಲಿ ಸುತ್ತಲಿನ ಪ್ರದೇ­ಶ­ಗಳಲ್ಲಿ ಬುಧವಾರ ರಾತ್ರಿ ಗುಂಪು ಘರ್ಷಣೆ ನಡೆದಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದು, ಘಟನೆಗೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಲಾಗಿದೆ.

ಕೇಳಕರ ಬಾಗ್‌ನಲ್ಲಿ ರಾತ್ರಿ 10ಗಂಟೆಗೆ ಸುಮಾರಿಗೆ ಪ್ರೇಮಿಗಳು ಮಾತ­ನಾಡು­ವಾಗ ಹುಡು­­ಗನ ಮೇಲೆ ಕೆಲ­ವರು ಹಲ್ಲೆ ನಡೆ­ಸಿದರು. ಈ ಕುರಿತು ಮಾಹಿತಿ ಪಡೆದ ಕೆಲವರು ಕಲ್ಲು ತೂರಾಟ ಆರಂಭಿಸಿದರು. ಕೆಲವು ದುಷ್ಕರ್ಮಿಗಳು ಬೈಕ್‌ಗೆ ಬೆಂಕಿ ಹಚ್ಚಿದರು. ಕಲ್ಲು ತೂರಾಟದಿಂದ ಆರು ಕಾರು ಮತ್ತು 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂ­ಗೊಂಡಿವೆ. 30ಕ್ಕೂ ಹೆಚ್ಚು ಮನೆಗಳ ಕಿಟಕಿ ಗಾಜುಗಳು ಒಡೆದಿವೆ.

ಚವಾಟ­ಗಲ್ಲಿ, ಖಡಕ್‌­ಗಲ್ಲಿ, ಶೆಟ್ಟಿಗಲ್ಲಿ, ಜಾಲ­­­ಗಾರಗಲ್ಲಿ ಸುತ್ತಲಿನ ಪ್ರದೇಶ­ಗಳಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿ ಡಾ. ಚಂದ್ರಗುಪ್ತ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. [ದಯನೀಯ ಸ್ಥಿತಿಯಲ್ಲಿ ಬೆಳಗಾವಿ ಬಸ್ ನಿಲ್ದಾಣ]

ಉದ್ರಿಕ್ತ ಗುಂಪು ರಸ್ತೆಯ ಮೇಲೆ ನಿಲ್ಲಿಸಿದ್ದ ಕಾರು, ಬೈಕ್‌ಗಳ ಮೇಲೆ ಕಲ್ಲು ತೂರಿದ್ದಾರೆ. ಐದಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಿದರು. ತಕ್ಷಣವೇ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತ್‌ ಏರ್ಪಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಕೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಎಸ್ಪಿ ಡಾ.ಚಂದ್ರಗುಪ್ತ ಅವರು ತಿಳಿಸಿದ್ದಾರೆ.

English summary
Groups of men clashed and threw stones at Khade Bazaar, Chavat Galli, Shetty Galli and other areas of the Belgaum city on Wednesday night, after a youth from a particular community was beaten up hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X