ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇತರ ಜಿಲ್ಲೆಗಳಿಗೂ ರಾತ್ರಿ ಕರ್ಫ್ಯೂ ವಿಸ್ತರಣೆ?: ಸಿಎಂ ಬಿಎಸ್‌ವೈ ಸುಳಿವು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಏಪ್ರಿಲ್ 14: ಎಲ್ಲ ಕಡೆ ಕೋವಿಡ್ ಮಹಾಮಾರಿ ಕಾಡುತ್ತಿದ್ದು, ಈ ಕುರಿತು ಏ.18ರಂದು ಪ್ರತಿಪಕ್ಷ ನಾಯಕರ ಸಭೆ ಕರೆದಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಈಗಾಗಲೇ ಕೆಲವು ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಇದ್ದು, ಬೇರೆ ಜಿಲ್ಲೆಗಳಲ್ಲೂ ಕೊರೊನಾ ಜಾಸ್ತಿಯಾದರೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು. ನಿಮ್ಮ ಆರೋಗ್ಯ ದೃಷ್ಟಿಯಿಂದ ಮಾಸ್ಕ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರಿಕೆ ವಹಿಸುವಂತೆ ರಾಜ್ಯದ ಜನರಲ್ಲಿ ಸಿಎಂ ಬಿಎಸ್‌ವೈ ಮನವಿ ಮಾಡಿದರು.

ಸುರೇಶ್ ಅಂಗಡಿಯವರನ್ನು ಕೋವಿಡ್ ಬಲಿ ಪಡೆದಿದ್ದು ದುರಾದೃಷ್ಟ: ಶೆಟ್ಟರ್ಸುರೇಶ್ ಅಂಗಡಿಯವರನ್ನು ಕೋವಿಡ್ ಬಲಿ ಪಡೆದಿದ್ದು ದುರಾದೃಷ್ಟ: ಶೆಟ್ಟರ್

ರಾಜ್ಯದಲ್ಲಿ ದಿನೇ ದಿನೇ ಮಹಾಮಾರಿ ಕೊರೊನಾ ಹೆಚ್ಚಳ ವಿಚಾರವಾಗಿ ಮಹಾರಾಷ್ಟ್ರ ಮಾದರಿಯಲ್ಲಿ ಜನತಾ ಕರ್ಫ್ಯೂ ಜಾರಿ ಆಗುತ್ತಾ ಎಂದು ಸಿಎಂಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಮಹಾರಾಷ್ಟ್ರಕ್ಕೂ ನಮಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಪಕ್ಷ ನಾಯಕರ ಸಲಹೆಯಂತೆ ಮುಂದಿನ ನಿರ್ಧಾರ

ಪ್ರತಿಪಕ್ಷ ನಾಯಕರ ಸಲಹೆಯಂತೆ ಮುಂದಿನ ನಿರ್ಧಾರ

ಏ.18ರಂದು ವಿಪಕ್ಷ ನಾಯಕರ ಸಭೆ ಕರೆದಿದ್ದು, ಚರ್ಚೆ ಮಾಡುತ್ತೇನೆ. ಪ್ರತಿಪಕ್ಷ ನಾಯಕರ ಸಲಹೆಯಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಇದರ ಫಲಿತಾಂಶ ಬರಬೇಕಂದರೆ ನಾಲ್ಕಾರು ದಿನ ಕಾಯಬೇಕಾಗುತ್ತದೆ ಎಂದರು.

ಯಾವ್ಯಾವ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗಿವೆಯೋ ಅಲ್ಲಿ ನೈಟ್ ಕರ್ಫ್ಯೂ ಹಾಕುವ ಬಗ್ಗೆ ಚರ್ಚೆ ಮಾಡುತ್ತೇನೆ. ಜೀವ ಉಳಿಸಿಕೊಳ್ಳಲು ಜನರೇ ಮುಂದೆ ಬರಬೇಕು. ಆದರೆ, ಸೆಮಿ ಲಾಕ್‌ಡೌನ್ ಮಾಡುವ ಯಾವುದೇ ಪ್ರಶ್ನೆ ಇಲ್ಲ ಎಂದು ಸಿಎಂ ಸ್ಪಷ್ಪಪಡಿಸಿದರು.

ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

ಎರಡು ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಬೆಳಗಾವಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ‌ ನಾಲ್ಕು ಲಕ್ಷ ಅಂತರದಿಂದ ಗೆಲ್ಲುತ್ತೇವೆ, ಸುರೇಶ್ ಅಂಗಡಿ ಕುಟುಂಬದ ತ್ಯಾಗ ಅರ್ಥ ಮಾಡಿಕೊಂಡು ಮತ ಹಾಕಿ. ಅವರ ಶ್ರೀಮತಿಯವರೇ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಮಂಗಲ ಸುರೇಶ್ ಅಂಗಡಿಗೆ ಟಿಕೆಟ್

ಮಂಗಲ ಸುರೇಶ್ ಅಂಗಡಿಗೆ ಟಿಕೆಟ್

ಸೋಲಿನ ಭಯದಿಂದ ಸಿಎಂ ಪ್ರಚಾರಕ್ಕೆ ಬರುತ್ತಿದ್ದಾರೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ, ಬೇರೆ ಪಕ್ಷದ ಅಭ್ಯರ್ಥಿಗಳ ಬಗ್ಗೆ ನಾನು ಏನೂ ಮಾತನಾಡಲ್ಲ. ಮುಖ್ಯಮಂತ್ರಿ ಆಗಿ ನನ್ನ ಕರ್ತವ್ಯ ಮಾಡ್ತಿದ್ದೇನೆ. ಮತದಾರರ ಭೇಟಿ ಮಾಡಿ, ಮನವಿ ಮಾಡಲು ಬಂದಿದ್ದೇನೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿದ್ದೇನೆ ಪ್ರಚಾರಕ್ಕೆ ಬರಬಹುದು ಎಂದು ಹೇಳಿದರು.

ಬೆಳಗಾವಿಯ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ಸಿಎಂ ಬಿಎಸ್‌ವೈ ಚುನಾವಣಾ ಪ್ರಚಾರ ಮಾಡಿ, ಸುರೇಶ್ ಅಂಗಡಿ ರೈಲ್ವೆ ಸಚಿವರಾಗಿ ಏನೆಲ್ಲಾ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ತಮಗೆಲ್ಲ ಗೊತ್ತಿದೆ. ಪ್ರಧಾನಿ ಮೋದಿ ನಿರ್ಣಯ ಮಾಡಿ ಮಂಗಲ ಸುರೇಶ್ ಅಂಗಡಿಗೆ ಟಿಕೆಟ್ ನೀಡಿದ್ದಾರೆ.

ಕಾಗಿನೆಲೆಗೆ ಹೋದರೆ ನಿಮಗೆ ಅರ್ಥವಾಗುತ್ತದೆ

ಕಾಗಿನೆಲೆಗೆ ಹೋದರೆ ನಿಮಗೆ ಅರ್ಥವಾಗುತ್ತದೆ

ಕುರುಬ, ವೀರಶೈವ ಸಮುದಾಯ ಮಧ್ಯೆ ನನಗೆ ಯಾವುದೇ ಭೇದ-ಭಾವ ಇಲ್ಲ. ಕಾಗಿನೆಲೆಗೆ ಹೋದರೆ ನಿಮಗೆ ಅರ್ಥವಾಗುತ್ತದೆ. ಸುರೇಶ್ ಅಂಗಡಿಯವರ ಪತ್ನಿಯನ್ನು ಗೆಲ್ಲಿಸಿದರೆ, ಏನು ಕೆಲಸ ಕಾರ್ಯ ಆಗಬೇಕೋ ಅದನ್ನು ಮಾಡಿ ಕೊಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದರು.

English summary
Chief Minister BS Yediyurappa said night curfews are already in place in some cities and if coronavirus cases are increases in other districts, night curfew will be enforced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X