ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡದ ಹುಚ್ಚಾಸ್ಪತ್ರೆಗೆ ಸಿಎಂ ಕುಮಾರಸ್ವಾಮಿ ದಾಖಲಾಗಲಿ: ಬಿಜೆಪಿ ಶಾಸಕ

|
Google Oneindia Kannada News

Recommended Video

ರಾಯಚೂರಿನಲ್ಲಿ ಕಾರ್ಮಿಕರಿಗೆ ಬೈದಿದ್ದರು ಕುಮಾರಸ್ವಾಮಿ | Oneindia Kannada

ಬೆಳಗಾವಿ, ಜೂನ್ 26: ರಾಯಚೂರಿನಲ್ಲಿ ಇಂದು ಪ್ರತಿಭಟನಾಕಾರರ ಜೊತೆ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆದುಕೊಂಡು ರೀತಿಗೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಬಿಜೆಪಿ ಶಾಸಕರೋರ್ವರು ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.

ಮುಖ್ಯಮಂತ್ರಿಯಾದವರಿಗೆ ತಾಳ್ಮೆ ಬಹುಮುಖ್ಯ, ಕುಮಾರಸ್ವಾಮಿಯವರಿಗೆ ಅದಿಲ್ಲ. ಅವರು ಗ್ರಾಮ ವಾಸ್ತವ್ಯ ಮಾಡುವ ಬದಲು ಹುಚ್ಚಾಸ್ಪತ್ರೆಗೆ ದಾಖಲಾಗಲಿ ಎಂದು ಬೆಳಗಾವಿ ಜಿಲ್ಲೆಯ ರಾಯಭಾಗ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಹೇಳಿದ್ದಾರೆ.

ವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿ

ಕುಮಾರಸ್ವಾಮಿಯವರ ಮಾನಸಿಕ ಸ್ಥಿತಿ ಸರಿ ಇದ್ದಂತಿಲ್ಲ, ಗ್ರಾಮ ವಾಸ್ತವ್ಯ ಮಾಡುವ ಬದಲು ಧಾರವಾಡದ ಹುಚ್ಚಾಸ್ಪತ್ರೆಯಲ್ಲಿ ಸ್ವಲದಿನ ದಾಖಲಾಗಲಿ ಎನ್ನುವ ಹೇಳಿಕೆಯನ್ನು ಐಹೊಳೆ ದುರ್ಯೋಧನ ನೀಡಿದ್ದಾರೆ.

CM Kumaraswamy should admit Dharwad mental hospital : Raibag BJP MLA

ಗ್ರಾಮ ವಾಸ್ತವ್ಯವನ್ನು ರಾಯಚೂರಿನಲ್ಲಿ ಮಾಡುವ ಬದಲು ಧಾರವಾಡದ ಹುಚ್ಚಾಸ್ಪತ್ರೆಯಲ್ಲಿ ಮಾಡಿದರೆ, ಎಲ್ಲವೂ ಸರಿಹೋಗುತ್ತದೆ ಎಂದು ಬಿಜೆಪಿ ಶಾಸಕರು ಲೇವಡಿ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ಕರೆಗುಡ್ಡ ಗ್ರಾಮಕ್ಕೆ ಬಸ್ಸಿನಲ್ಲಿ ಪ್ರಯಾಣಿಸಬೇಕಾದರೆ ವೈಟಿಪಿಎಸ್‌ನ ಕಾರ್ಮಿಕರು ಕುಮಾರಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಬಸ್‌ಗೆ ಅಡ್ಡ ಬಂದು ಪ್ರತಿಭಟನೆ ನಡೆಸಿದ್ದರು.

ಕಾರ್ಮಿಕರ ಮೇಲೆ ರೇಗಾಡಿ ತಪ್ಪು ಮಾಡಿದೆ: ಕುಮಾರಸ್ವಾಮಿ ಕಾರ್ಮಿಕರ ಮೇಲೆ ರೇಗಾಡಿ ತಪ್ಪು ಮಾಡಿದೆ: ಕುಮಾರಸ್ವಾಮಿ

ಈ ಸಮಯ ತಾಳ್ಮೆ ಕಳೆದುಕೊಂಡ ಕುಮಾರಸ್ವಾಮಿ , ನರೇಂದ್ರ ಮೋದಿಗೆ ವೋಟು ಹಾಕಿ, ನನ್ನನ್ನು ಕೇಳಲು ಬಂದಿದ್ದೀರಾ, ಪೊಲೀಸರು ನಿಮ್ಮ ಮೇಲೆ ಲಾಠಿ ಚಾರ್ಜ್‌ ಮಾಡಬೇಕಾ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿತ್ತು.

English summary
Chief Minister Kumaraswamy should admit Dharwad mental hospital : Raibag BJP MLA Aihole Duryodhana controversial statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X