• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನ್ನಡದಲ್ಲಿದ್ದ ಚೆಕ್ ಅಮಾನ್ಯ ಮಾಡಿದ್ದಕ್ಕೆ ಬ್ಯಾಂಕ್ ನ ಕೋರ್ಟ್ ಗೆಳೆದ ಗ್ರಾಹಕ

|

ಬೆಳಗಾವಿ, ಜನವರಿ 27: ಚೆಕ್ ನಲ್ಲಿನ ಮಾಹಿತಿಯನ್ನು ಕನ್ನಡದಲ್ಲಿ ಬರೆದಿದೆ ಎಂಬ ಕಾರಣ ಕೊಟ್ಟು, ಅದನ್ನು ಮಾನ್ಯತೆ ಮಾಡ ಕಾರಣಕ್ಕೆ ಗ್ರಾಹಕರೊಬ್ಬರು ಐಸಿಐಸಿಐ ಬ್ಯಾಂಕ್ ಅನ್ನು ಕೋರ್ಟ್ ಗೆ ಎಳೆದಿದ್ದಾರೆ. ಅಸಮರ್ಪಕ ಸೇವೆ ಎಂದು ಆರೋಪಿಸಿ, ಬೆಳಗಾವಿಯ ಜಿಲ್ಲಾ ಗ್ರಾಹಕರ ಕೋರ್ಟ್ ನಲ್ಲಿ ಆನಂದ್ ದಿವಾಕರ್ ಗಾರಗ್ ಮೊಕದ್ದಮೆ ಹೂಡಿದ್ದಾರೆ.

ನವೆಂಬರ್ ನಲ್ಲಿ ಗಾರಗ್ ಅವರು ಎಲ್ ಐಸಿಗೆ 17,220 ರುಪಾಯಿಗೆ ಚೆಕ್ ನೀಡಿದ್ದರು. ಅದನ್ನು ಎಲ್ ಐಸಿಯು ಕಾರ್ಪೋರೇಷನ್ ಬ್ಯಾಂಕ್ ಗೆ ಹಾಕಿತ್ತು. ಅದರ ಪಾವತಿಗಾಗಿ ಐಸಿಐಸಿಐ ಬ್ಯಾಂಕ್ ಗೆ ಕಳುಹಿಸಿದಾಗ, "ದಾಖಲೆ ಸಹಿತ ಕಳುಹಿಸಿ" ಎಂಬ ಒಕ್ಕಣೆಯೊಂದಿಗೆ ವಾಪಸ್ ಮಾಡಿದ್ದಾರೆ.[ಪ್ರಯಾಣಕ್ಕೆ ಅವಕಾಶ ನೀಡದ ಕೆಎಸ್ ಆರ್ ಟಿಸಿಗೆ 10 ಸಾವಿರ ದಂಡ]

ಮೊಕದ್ದಮೆ ದಾಖಲಿಸುವ ಮುನ್ನ ಐಸಿಐಸಿಐ ಬ್ಯಾಂಕ್ ಹಾಗೂ ಎಲ್ ಐಸಿ ಬಳಿ ಚೆಕ್ ಅಮಾನ್ಯ ಮಾಡಿರುವುದಕ್ಕೆ ಗಾರಗ್ ಸ್ಪಷ್ಟನೆ ಕೇಳಿದ್ದಾರೆ. ಎರಡೂ ಕಡೆಯಿಂದಲೂ ಸಮಾಧಾನಕರ ಉತ್ತರ ಬಂದಿಲ್ಲ. ಈ ಹಿಂದೆ ಹೆಸ್ಕಾಂಗೆ ಕನ್ನಡದಲ್ಲೇ ಚೆಕ್ ನೀಡಿದ್ದೆ ಎನ್ನುತ್ತಾರೆ ಗಾರಗ್.[ಇಲ್ಲೊಬ್ಬ ಟಿಸಿ ಅವ್ನೇ, ಅವ್ನಿಗೆ ಕರ್ನಾಟಕದ ಗಾಡಿ ಕಂಡ್ರೆ ಆಗಲ್ಲಾ]

"ನಾನು ಕನ್ನಡದಲ್ಲಿ ಬರೆದೆ ಅನ್ನೋ ಕಾರಣಕ್ಕೆ ಐಸಿಐಸಿಐ ಬ್ಯಾಂಕ್ ಚೆಕ್ ಅಮಾನ್ಯ ಮಾಡಿದೆಯಂತೆ. ಅದೇ ರೀತಿ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದ್ದ ಚೆಕ್ ಕೂಡ ಅಮಾನ್ಯವಾಗಿದೆ" ಎನ್ನುತ್ತಾರೆ ಅವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಐಸಿ, ಐಸಿಐಸಿಐ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಗೆ ಕೋರ್ಟ್ ನೋಟಿಸ್ ನೀಡಿದ್ದು, ಫೆಬ್ರವರಿ 28ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.

English summary
A customer has dragged ICCI bank to court after his cheque was dishonoured on grounds that the information on it was written in Kannada.Anand Diwakar Garag has filed a case, alleging lack of service, with the district consumer redressal court in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X