ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಮೋಡಿಗೆ ಮರುಳಾಗಿ ಡಾಲರ್ ಕೆಲಸ ಬಿಟ್ಟುಬಂದರು!

ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ, ಅವರ ವಿಭಿನ್ನ ಆಡಳಿತದಿಂದ ಪ್ರಭಾವಿತರಾದ ಬಾಗಲಕೋಟೆಯ ಚಂದ್ರಕಾಂತ್ ಯತ್ನಟ್ಟಿ ಅಮೆರಿಕದಲ್ಲಿ ಸಾಫ್ಟ್ ವೇರ್ ಕೆಲಸ ಬಿಟ್ಟು ಭಾರತಕ್ಕೆ ಮರಳಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮೇ 17: ವಿದೇಶದಲ್ಲಿ, ಅದರಲ್ಲೂ ಅಮೆರಿಕದಲ್ಲಿ ಉದ್ಯೋಗ ಸಿಗುತ್ತೆ ಅಂದ್ರೆ ಎಲ್ಲವನ್ನೂ ಬಿಟ್ಟು ಹೊರಡಲು ತುದಿಗಾಲಿನಲ್ಲಿ ನಿಲ್ಲುವವರಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾವೇ ಕಟ್ಟಿದ್ದ ಉದ್ಯಮವನ್ನು ಬಿಟ್ಟು, ಲಕ್ಷಾಂತರ ರೂ. ಸಂಬಳವನ್ನೂ ತೊರೆದು ಸ್ವದೇಶಕ್ಕೆ ಮರಳಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ? ಮೋದಿ!

ಹೌದು, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ, ಅವರ ವಿಭಿನ್ನ ಆಡಳಿತದಿಂದ ಪ್ರಭಾವಿತರಾದ ಬಾಗಲಕೋಟೆಯ ಚಂದ್ರಕಾಂತ್ ಯತ್ನಟ್ಟಿ ಅಮೆರಿಕದಲ್ಲಿ ಸಾಫ್ಟ್ ವೇರ್ ಕೆಲಸ ಬಿಟ್ಟು ಭಾರತಕ್ಕೆ ಮರಳಿದ್ದಾರೆ. ಕೇವಲ ಮರಳಿದ್ದಷ್ಟೇ ಅಲ್ಲ, ಮೋದಿ ಹಾದಿಯಲ್ಲಿ ನಡೆದು ತಾವೂ ಸಮಾಜ ಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕೆಂದೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವ ಸಂಕಲ್ಪ ಹೊಂದಿರುವ ಅವರು 'ಮಹಾಸಂಕಲ್ಪ' ಎಂಬ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ.[3 ವರ್ಷದ ಹಿಂದೆ, ಮೋದಿ ಗೆಲುವನ್ನು ಪತ್ರಿಕೆಗಳು ಸಾರಿದ್ದು ಹೀಗೆ]

Chandrakanth, real hero who has impressed by modi and leaves his job in America!

'ಮಹಾಸಂಕಲ್ಪ'ದ ಕೆಲಸವೇನು?
ರಾಮದುರ್ಗ ರಾಮಅಯಣ ಕಾಲದಲ್ಲಿ ರಾಮನಿಗಾಗಿ ಕಾಯುತ್ತಿದ್ದ ಶಬರಿಯ ನೆಲೆ. ಆದ್ದರಿಂದಲೇ ನಾನು ಈ ತಾಲೂಕನ್ನು ಆಯ್ದುಕೊಂಡಿದ್ದೇನೆ, ಈ ತಾಲೂಕನ್ನು ರಾಮರಾಜ್ಯವನ್ನಾಗಿಸುವ ಸ್ವ ಇಚ್ಛೆಯಿಂದ ನಾನಿಲ್ಲಿಬಂದಿದ್ದೇನೆ. ಮನೆ ಮನೆಗೆ ಆರೋಗ್ಯ, ಮನೆ ಮನೆಗೆ ಮಾಹಿತಿ, ತಂತ್ರಜ್ಞಾನ, ಶುದ್ಧ ಕುಡಿಯುವ ನೀರು, ಶೌಚಾಲಯ, ಮನೆಗೊಂದು ಸ್ವಾವಲಂಬಿ ಉದ್ಯೋಗ, ಗ್ರಾಮಕ್ಕೊಂದು ಗೋಶಾಲೆ ಸ್ಥಾಪನೆ ಮಾಡುವ ಗುರಿಗಳನ್ನು ಹೊಂದಿರುವ ಅವ್ರು ತಮ್ಮ ಮಹಾ ಸಂಕಲ್ಪ ಫೌಂಡೇಶನ್ ಮೂಲಕ ಈ ಗುರಿಯನ್ನು ಈಡೇರಿಸಿಕೊಳ್ಳುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ವಾರ ರಾಮದುರ್ಗ ತಾಲೂಕಿನಾದ್ಯಂತ ಮಹಾಸಂಕಲ್ಪ ಯಾತ್ರೆ ಸಹ ಕೈಗೊಂಡಿದ್ದಾರೆ.

ಯಾರು ಚಂದ್ರಕಾಂತ್ ಯತ್ನಟ್ಟಿ
ಚಂದ್ರಕಾಂತ್ ಮೂಲತಃ ಕರ್ನಾಟಕದ ಬಾಗಲಕೋಟೆಯವರು. ಆಲಮಟ್ಟಿ ಆಣೆಕಟ್ಟು ನಿರ್ಮಾಣವಾದಾಗ ಅವರ ಕುಟುಂಬದ ಎಲ್ಲಾ ಆಸ್ತಿಯೂ ಮುಳುಗಡೆಯಾಯಿತು. ಬಳ್ಳಾರಿಯ ವಿಜಯನಗರ ಕಾಲೇಜಿನಲ್ಲಿ ಪದವಿ ಪಡೆದ ಅವರು ನಂತರ ಅಮೆರಿಕಕ್ಕೆ ತೆರಳಿ ಉದ್ಯೋಗ ಮಾಡುತ್ತಿದ್ದರು. ಅಮೆರಿಕದ ಐಷಾರಾಮಿ ಜೀವನದ ಗುಂಗಿನಲ್ಲಿ ಹುಟ್ಟಿದ ನೆಲದ ಮಣ್ಣಿನ ಸೊಗಡನ್ನೇ ಮರೆತುಬಿಡುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಚಂದ್ರಕಾಂತ್ ಯತ್ನಟ್ಟಿ ಅಂಥವರ ಸೇವಾ ಮನೋಭಾವ ಶ್ಲಾಘನೀಯ. ಮೋದಿಯವರ ಆದರ್ಶ ಪಾಲಿಸುತ್ತ ರಾಮದುರ್ಗವನ್ನು ಆದರ್ಶ ತಾಲೂಕನ್ನಾಗಿ ನಿರ್ಮಿಸುವ ಅವರ ಕನಸು ನನಸಾಗಲಿ ಎಂಬುದು ನಮ್ಮ ಹಾರೈಕೆ.

'ಮಹಾಸಂಕಲ್ಪ'ಕ್ಕೆ ಕೈಜೋಡಿಸಿ:
ಸೇವಾ ಮನೋಭಾವದ ಯಾರೇ ಬೇಕಾದರೂ ಮಹಾಸಂಕಲ್ಪದೊಂದಿಗೆ ಕೈಜೋಡಿಸಬಹುದು. ಹೆಚ್ಚಿನ ಮಾಹಿತಿಗೆ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ: 7760785807

English summary
Here is a story of a man who left his job as software engineer in America and came to his mother land India to serve people. Chandrakanth Yatnatti is the real hero of this story. He has impressed by PM Narendra modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X