ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಹದಲ್ಲಿ ಕೊಚ್ಚಿಕೊಂಡು ಗದ್ದೆಗೆ ಬಿದ್ದ ಕಾರುಗಳು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 15: ಬಿಡದೇ ಸುರಿಯುತ್ತಿರುವ ಮಳೆ, ನದಿಗಳ ಪ್ರವಾಹ ಉಂಟು ಮಾಡಿರುವ ಅವಾಂತರಕ್ಕೆ ಲೆಕ್ಕವಿಲ್ಲ. ಬೆಳಗಾವಿಯಲ್ಲಂತೂ ಮಳೆ ಎಲ್ಲವನ್ನೂ ನಾಶ ಮಾಡಿದೆ. ಇದುವರೆಗೂ ಕೂಡಿಟ್ಟಿದ್ದ, ಸಂಪಾದಿಸಿದ್ದ ಆಸ್ತಿ ಪಾಸ್ತಿಗಳೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.

 ಕಾರವಾರ ಜಿಲ್ಲಾಸ್ಪತ್ರೆ ಡಯಾಲಿಸಿಸ್ ಕೇಂದ್ರಕ್ಕೆ ನುಗ್ಗಿದ ಮಳೆ ನೀರು ಕಾರವಾರ ಜಿಲ್ಲಾಸ್ಪತ್ರೆ ಡಯಾಲಿಸಿಸ್ ಕೇಂದ್ರಕ್ಕೆ ನುಗ್ಗಿದ ಮಳೆ ನೀರು

ಇನ್ನು ನೀರಿನಲ್ಲಿ ಕಳೆದುಹೋದ ವಾಹನಗಳೂ ಪತ್ತೆಯಿಲ್ಲ. ಎಲ್ಲಿ ಕೊಚ್ಚಿಕೊಂಡು ಹೋಗಿ ಎಲ್ಲಿ ಬಿದ್ದಿವೆಯೋ ತಿಳಿದಿಲ್ಲ. ಅದು ಕಂಡರೂ ಜನರಿಗೆ ಅದು ತಮ್ಮದೇ ವಾಹನ ಎಂದು ಗುರುತು ಹಿಡಿಯುವುದೂ ಸುಲಭವಲ್ಲ. ಒಂದು ವೇಳೆ ಅವು ಸಿಕ್ಕರೂ ಮತ್ತೆ ಮೊದಲಿನ ಸ್ಥಿತಿಗೆ ಬರುವುದಂತೂ ಸಾಧ್ಯವಿಲ್ಲ.

Cars Dumped To Field From Flood In Ramadurga

ಕಾವೇರಿ ನೀರಿನ ಹೊಡೆತಕ್ಕೆ ಇನ್ನಷ್ಟು ಕುಸಿದ ವೆಸ್ಲಿ ಸೇತುವೆಕಾವೇರಿ ನೀರಿನ ಹೊಡೆತಕ್ಕೆ ಇನ್ನಷ್ಟು ಕುಸಿದ ವೆಸ್ಲಿ ಸೇತುವೆ

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲೂ ಹೀಗೆ ಪ್ರವಾಹದಲ್ಲಿ ಕೊಚ್ಚಿ ಬಂದ ಕಾರುಗಳು ಗದ್ದೆ ಬಯಲಿನಲ್ಲಿ ಬಂದು ಬಿದ್ದಿವೆ. ರಾಮದುರ್ಗದ ಯಾದವಾಡ ಪೆಟ್ರೋಲ್ ಪಂಪ್ ಪಕ್ಕದಲ್ಲಿ ಇರುವ ಗದ್ದೆ ಸ್ವಲ್ಪ ತಗ್ಗಾಗಿರುವುದರಿಂದ ಎರಡು ಕಾರುಗಳು, ವಾಹನದ ಕೆಲ ಭಾಗಗಳು ಇಲ್ಲಿಗೆ ಬಂದು ಬಿದ್ದಿವೆ. ಇವೆಲ್ಲವೂ ರಸ್ತೆ ಬದಿಯ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಕಾರುಗಳು ಇರಬಹುದು ಎನ್ನಲಾಗಿದೆ. ಆದರೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ದ ವಾಹನಗಳು ಈಗ ಉಪಯೋಗಕ್ಕೆ ಬಾರದೆ ನಿಂತಿರುವುದು ನೋಡಿದರೆ ಬೇಸರವಾಗುತ್ತದೆ.

English summary
The uninterrupted rain and flooding of rivers caused so much loss. In belagavi, rain has destroyed everything. cars have also fallen on the field from flood in Ramadurga of belagavi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X