ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಗವಾಡ ಉಪ ಚುನಾವಣೆ; ಬಿಜೆಪಿಗೆ ಟಿಕೆಟ್ ಹಂಚಿಕೆಯೇ ತಲೆನೋವು!

|
Google Oneindia Kannada News

Recommended Video

ಕಾಗವಾಡದಲ್ಲಿ ಬಿಜೆಪಿಗೆ ಟಿಕೆಟ್ ಹಂಚಿಕೆಯೇ ತಲೆನೋವು!

ಬೆಳಗಾವಿ, ಸೆಪ್ಟೆಂಬರ್ 23 : ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಯಾರು ಅಭ್ಯರ್ಥಿಯಾಗಬಹುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಕಗ್ಗಂಟಾಗುವ ಸಾಧ್ಯತೆ ಇದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀಮಂತ ಪಾಟೀಲ 83,060 ಮತಗಳನ್ನು ಪಡೆದು ಜಯಗಳಿಸಿದ್ದರು. ಈಗ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು, ಅಕ್ಟೋಬರ್ 21ರಂದು ಉಪ ಚುನಾವಣೆ ನಡೆಯಲಿದೆ.

ಅಥಣಿ ಉಪ ಚುನಾವಣೆ; ಲಕ್ಷ್ಮಣ ಸವದಿಗೆ ಇಲ್ಲ ಬಿಜೆಪಿ ಟಿಕೆಟ್!ಅಥಣಿ ಉಪ ಚುನಾವಣೆ; ಲಕ್ಷ್ಮಣ ಸವದಿಗೆ ಇಲ್ಲ ಬಿಜೆಪಿ ಟಿಕೆಟ್!

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಸೋತಿದ್ದ ರಾಜು ಕಾಗೆ (ಭರಮ ಗೌಡ ಕಾಗೆ) ಬಿಜೆಪಿ ಟಿಕೆಟ್ ತಮಗೆ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಯಶವಂತಪುರ ಉಪ ಚುನಾವಣೆ; ಜವರಾಯಿ ಗೌಡ ಕಾಂಗ್ರೆಸ್‌ಗೆ?ಯಶವಂತಪುರ ಉಪ ಚುನಾವಣೆ; ಜವರಾಯಿ ಗೌಡ ಕಾಂಗ್ರೆಸ್‌ಗೆ?

ಸುಪ್ರೀಂಕೋರ್ಟ್ ಆದೇಶ ಶ್ರೀಮಂತ ಪಾಟೀಲ್ ಪರವಾಗಿ ಬಾರದಿದ್ದರೆ ಅವರ ಪುತ್ರ ಶ್ರೀನಿವಾಸ ಪಾಟೀಲ್‌ಗೆ ಟಿಕೆಟ್ ನೀಡುವ ಚಿಂತನೆ ಬಿಜೆಪಿಯದ್ದು. ಆದರೆ, ಮಾಜಿ ಶಾಸಕ ರಾಜು ಕಾಗೆ ಬೇಡಿಕೆ ಪಕ್ಷದ ನಾಯಕರ ತಲೆನೋವಿಗೆ ಕಾರಣವಾಗಿದೆ.

15 ಕ್ಷೇತ್ರದ ಉಪ ಚುನಾವಣೆ; ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಇಲ್ಲ?15 ಕ್ಷೇತ್ರದ ಉಪ ಚುನಾವಣೆ; ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಇಲ್ಲ?

ಹಿಡಿತ ಕಳೆದುಕೊಂಡಿದ್ದಾರೆ

ಹಿಡಿತ ಕಳೆದುಕೊಂಡಿದ್ದಾರೆ

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶ್ರೀಮಂತ ಪಾಟೀಲ್ ಕ್ಷೇತ್ರದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ. ಶ್ರೀಮಂತ ಪಾಟೀಲ್ ಪುತ್ರನಿಗೆ ಟಿಕೆಟ್ ನೀಡಿದರೆ ಗೆಲ್ಲುವುದು ಕಷ್ಟ ಎಂಬುದು ರಾಜು ಕಾಗೆ ಮತ್ತು ಕ್ಷೇತ್ರದ ಇತರ ನಾಯಕರ ಅಭಿಪ್ರಾಯವಾಗಿದೆ.

ರಾಜು ಕಾಗೆ ಬೇಡಿಕೆ

ರಾಜು ಕಾಗೆ ಬೇಡಿಕೆ

ಕಾಗವಾಡ ಕ್ಷೇತ್ರದ ಉಪ ಚುನಾವಣೆ ಟಿಕೆಟ್‌ ಅನ್ನು ತಮಗೆ ನೀಡಬೇಕು ಎಂಬುದು ರಾಜು ಕಾಗೆ ಅವರ ಬೇಡಿಕೆಯಾಗಿದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ ಸೇರಿ ಕಣಕ್ಕಿಳಿಯಲು ರಾಜು ಕಾಗೆ ಚಿಂತನೆ ನಡೆಸುತ್ತಿದ್ದಾರೆ.

ನಿಷ್ಠಾವಂತರನ್ನು ಕಡೆಗಣಿಸಬೇಡಿ

ನಿಷ್ಠಾವಂತರನ್ನು ಕಡೆಗಣಿಸಬೇಡಿ

ಉಪ ಚುನಾವಣೆ ಟಿಕೆಟ್ ಹಂಚಿಕೆ ಮಾಡುವಾಗ ನಿಷ್ಠಾವಂತರನ್ನು ಕಡೆಗಣಿಸಬೇಡಿ ಎಂಬುದು ರಾಜು ಕಾಗೆ ಅವರ ವಾದವಾಗಿದೆ. ಶ್ರೀಮಂತ ಪಾಟೀಲ್ ಪುತ್ರ ಶ್ರೀನಿವಾಸ ಪಾಟೀಲ್‌ಗೆ ಟಿಕೆಟ್ ನೀಡುವ ಚಿಂತನೆಯಲ್ಲಿದ್ದ ಬಿಜೆಪಿ ಈಗ ಇಕ್ಕಟ್ಟಿಗೆ ಸಿಲುಕಿದೆ.

32 ಸಾವಿರ ಮತಗಳ ಸೋಲು

32 ಸಾವಿರ ಮತಗಳ ಸೋಲು

2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ರಾಜು ಕಾಗೆ 50118 ಮತಗಳನ್ನು ಪಡೆದಿದ್ದರು. ಸೀಮಂತ ಪಾಟೀಲ್ 83060 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ರಾಜು ಕಾಗೆಗೆ 32,942 ಮತಗಳ ಸೋಲಾಗಿತ್ತು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ಗೆಲ್ಲುವ ನಿರೀಕ್ಷೆಯನ್ನು ಅವರು ಹೊಂದಿದ್ದಾರೆ.

English summary
Big trouble for BJP in Kagwad assembly seat. By election will be held on October 21, 2019. Former MLA Bharamagouda Kage demand for party ticket. BJP wish to issue ticket for the son of Shrimant Balasaheb Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X