• search
 • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ ಫಲಿತಾಂಶ: "ಏನಯ್ಯ ಸತೀಶ್, ಎಷ್ಟು ಟೆನ್ಷನ್ ಕೊಡ್ತಿಯಲ್ಲಪ್ಪ''

|
Google Oneindia Kannada News

ಬೆಂಗಳೂರು, ಮೇ 2: "ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ'' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ಫೋನ್ ಕರೆ ಮಾಡಿ ಹೇಳಿದ್ದಾರೆ.

Karnataka By Elections Results 2021 Live Updates: ಬಸವಕಲ್ಯಾಣ ಬಿಜೆಪಿ ತೆಕ್ಕೆಗೆ, ಮಸ್ಕಿ ಕಾಂಗ್ರೆಸ್ ವಶಕ್ಕೆ Karnataka By Elections Results 2021 Live Updates: ಬಸವಕಲ್ಯಾಣ ಬಿಜೆಪಿ ತೆಕ್ಕೆಗೆ, ಮಸ್ಕಿ ಕಾಂಗ್ರೆಸ್ ವಶಕ್ಕೆ

ಉಪ ಚುನಾವಣೆಯಲ್ಲಿ ಈಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್, ಬೆಳಗಾವಿ ಕ್ಷೇತ್ರದ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ವೇಳೆ ಕರೆ ಮಾಡಿದ ಸಿದ್ದರಾಮಯ್ಯ, ""ಏನಯ್ಯ ಸತೀಶ್, ಎಷ್ಟು ಟೆನ್ಷನ್ ಕೊಡ್ತಿದಿಯಲ್ಲಪ್ಪ'' ಎಂದು ಹೇಳಿದಾಗ, ""ಇಲ್ಲಾ ಸಾರ್, 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ'' ಎಂದು ಸತೀಶ್ ಜಾರಕಿಹೊಳಿ ಹೇಳಿದರು. ನಿನಗೆ ಒಳ್ಳೆದಾಗಲಿ ಗೆದ್ದು ಬಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

   ಮಸ್ಕಿ ಗೆಲುವಿನ ನಂತರ ಮಾತಾಡಿದ ಕೆಪಿಸಿಸಿ ಅಧ್ಯಕ್ಷ !!

   ಇದೇ ವೇಳೆ ಮಸ್ಕಿ ಕ್ಷೇತ್ರ ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಸವನಗೌಡ ತುರವಿಹಾಳ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದು, ಅಭಿನಂದನೆ ಕಣಯ್ಯ ನಿನಗೆ. 2 ವರ್ಷ ಸಮಯವಿದೆ, ಚೆನ್ನಾಗಿ ಕೆಲಸ ಮಾಡಿ ಮತ್ತೆ ನೀನೇ ಗೆಲ್ಲಬೇಕು. ನಾಳೆ ಎಂಎಲ್ಎಗಳ ವರ್ಚುವಲ್ ಮೀಟಿಂಗ್ ಕರೆದಿದ್ದೇನೆ, ನೀನು ಭಾಗವಹಿಸು. ಲಾಕ್‍ಡೌನ್ ಎಲ್ಲಾ ಮುಗಿದ ಮೇಲೆ ಬಂದು ಭೇಟಿಯಾಗು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

   English summary
   Karnataka Assembly Election Results 2021: Former CM Siddaramaiah Call To Belagavi Candiadte Satish Jarkiholi And Maski Candidate Basanagowda Turavihal. Read on.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X