ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ನಾಳೆಯಿಂದ ಬಸ್ ಸಂಚಾರ ಸ್ಥಗಿತ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮಾರ್ಚ್ 22: ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬೆಳಗಾವಿ ಜಿಲ್ಲೆಯನ್ನು ಲಾಕ್‌ಡೌನ್‌ಗೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ

ನಾಳೆಯಿಂದ ಜಿಲ್ಲೆಯಾದ್ಯಂತ ಸರ್ಕಾರಿ, ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಬ್ರೇಕಿಂಗ್: ಕರ್ನಾಟಕದ 9 ಜಿಲ್ಲೆಗಳು ಸೇರಿ ಭಾರತದ 75 ಜಿಲ್ಲೆಗಳ ಲಾಕ್!ಬ್ರೇಕಿಂಗ್: ಕರ್ನಾಟಕದ 9 ಜಿಲ್ಲೆಗಳು ಸೇರಿ ಭಾರತದ 75 ಜಿಲ್ಲೆಗಳ ಲಾಕ್!

12 ಪ್ಲಸ್ 1 ಮತ್ತು ಹೆಚ್ಚಿನ ಸೀಟ್‌ಗಳಿರುವ ಎಲ್ಲಾ ವಾಹನಗಳ‌ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಮಾರ್ಚ್ 31 ರವರೆಗೆ ಬೆಳಗಾವಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಮುಂದುವರೆಸಲಾಗಿದೆ.

Bus service Breakdown From Tomorrow in Belagavi

ಅವಶ್ಯಕ ವಸ್ತುಗಳ ವ್ಯಾಪ್ತಿಯಲ್ಲಿ ಬರದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಕಿರಾಣಿ ಅಂಗಡಿ, ತರಕಾರಿ, ಹಾಲಿನ‌ ಡೈರಿ, ಪೆಟ್ರೋಲ್‌ ಬಂಕ್ ಮಾತ್ರ ತೆರೆದಿರುತ್ತವೆ.

ಮಾರ್ಚ್ 31ರ ತನಕ ಹೊರ ರಾಜ್ಯಗಳಿಗೆ ಕೆಎಸ್ಆರ್‌ಟಿಸಿ ಬಸ್ ಇಲ್ಲಮಾರ್ಚ್ 31ರ ತನಕ ಹೊರ ರಾಜ್ಯಗಳಿಗೆ ಕೆಎಸ್ಆರ್‌ಟಿಸಿ ಬಸ್ ಇಲ್ಲ

ಮಹಾರಾಷ್ಟ್ರದಲ್ಲಿ‌ ಕೊರೊನಾ‌ ವೈರಸ್ ಸೋಂಕಿತರ ಸಂಖ್ಯೆ 70 ರ ಗಡಿ ದಾಟಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಉಭಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಸ್ಕ್ರೀನಿಂಗ್ ಮಾಡಲು ನಿರ್ಧರಿಸಲಾಗಿದೆ. ಇನ್ಫಾರೆಡ್ ಥರ್ಮಾಮೀಟರ್ ಮೂಲಕ ತಪಾಸಣೆಗೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಸಿಲಾಗಿದೆ.

English summary
Public and private buses across the Belagavi district will be Breakdown from tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X