ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಪಾಕಿಸ್ತಾನಕ್ಕೆ ಜೈಕಾರ ಹಾಕುವವರನ್ನು ಗುಂಡಿಟ್ಟು ಕೊಲ್ಲಿ'

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 14: ಹುಬ್ಬಳ್ಳಿಯ ಗಣೇಶಪೇಟೆ ಪಾಕಿಸ್ತಾನದಂತೆ ಕಾಣುತ್ತಿದೆ ಎಂದು ಮೌಲ್ವಿ ಹೇಳಿದಾಗ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಬೆಳಗಾವಿಗೆ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿದ ಬಿಜೆಪಿ ಸಂಸದ ಸುರೇಶ್ ಅಂಗಡಿ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದರು.

ಹುಬ್ಬಳ್ಳಿಯಲ್ಲಿ ಪಾಕಿಸ್ತಾನವನ್ನು ಗುಣಗಾನ ಮಾಡಿದ ಮುಸ್ಲಿಂ ಮೌಲ್ವಿಹುಬ್ಬಳ್ಳಿಯಲ್ಲಿ ಪಾಕಿಸ್ತಾನವನ್ನು ಗುಣಗಾನ ಮಾಡಿದ ಮುಸ್ಲಿಂ ಮೌಲ್ವಿ

ಮೌಲ್ವಿ ವಿವಾದಿತ ಹೇಳಿಕೆ ನೀಡಿದಾಗ ಆತನೊಂದಿಗೆ ವೇದಿಕೆ ಹಂಚಿಕೊಂಡಿದ್ದ ಪೊಲೀಸ್ ಸಹಾಯಕ ಆಯುಕ್ತ ದಾವೂದ್ ಖಾನ್ ಈಗ ಬೆಳಗಾವಿಯ ಐಜಿ ಕಚೇರಿಗೆ ವರ್ಗಾವಣೆಯಾಗಿದ್ದು ಆತನನ್ನು ಬೆಳಗಾವಿಗೆ ಬರದಂತೆ ತಡೆಯಬೇಕಿದೆ, ಪಾಕಿಸ್ತಾನಕ್ಕೆ ಬೆಂಬಲ ನೀಡುವ ಅಂತಹಾ ಅಧಿಕಾರಿಗಳು ಬೆಳಗಾವಿಗೆ ಬೇಡ ಎಂದು ಅವರು ಹೇಳಿದರು.

BJP MP Suresh Angadi said Belagavi officers are pakisthan sympathizers

ಜಿಲ್ಲೆಯ ಅಧಿಕಾರಿಗಳು ಕಾಂಗ್ರೆಸ್‌ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದ ಅವರು ಪಾಕಿಸ್ತಾನದ ಪರ ಘೋಷಣೆ ಕೋಗಿದವರಿಗೆ ರಕ್ಷಣೆ ನೀಡುವ ಕೆಲಸವನ್ನು ರಾಜ್ಯದ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದರು.

ಪಾಕಿಸ್ತಾನವನ್ನು ಗುಣಗಾನ ಮಾಡಿದ ಮೌಲ್ವಿಯ ತಲೆ ಕಡಿದ್ರೆ 10 ಲಕ್ಷ ರು ಪಾಕಿಸ್ತಾನವನ್ನು ಗುಣಗಾನ ಮಾಡಿದ ಮೌಲ್ವಿಯ ತಲೆ ಕಡಿದ್ರೆ 10 ಲಕ್ಷ ರು

ದೇಶದಲ್ಲಿ ಕೊಲೆ ದರೊಡೆ ಮಾಡುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಸ್ಥಳೀಯ ಕೆಲ ನಾಯಕರು ಓಟ್ ಬ್ಯಾಂಕ್ ಗೊಸ್ಕರ ನಗರದ ವಿವಿಧ ಬಡಾವಣೆಗಳಲ್ಲಿ ಉತ್ತರ ಭಾರತ ಮತ್ತು ಬಾಂಗ್ಲಾ ದೇಶದದಿಂದ ಕೆಲವರನ್ನು ಕರೆತಂದು ನಿವೇಶನ ನೀಡಿ ಮತಗಳ ಕ್ರೂಡಿಕರಣಕ್ಕಾಗಿ ಇಟ್ಟುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪರೇಶ ಮೆಸ್ತಾ ಸೇರಿದಂತೆ ಸಿಬಿಐಗೆ ವಹಿಸಿರುವ ರಾಜ್ಯದ ವಿವಿಧ ಪ್ರಕರಣಗಳ ತನಿಖೆ ಚುರುಕುಗೊಳಿಸುವ ನಿಟ್ಟಿನಲ್ಲಿ ಸಂಸದರ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲಿದೆ ಎಂದರು. ಹೊನ್ನಾವರ, ಶಿರಸಿ ಗಲಾಟೆ ಪ್ರಕರಣ ಖಂಡಿಸಿ ಬರುವ ರವಿವಾರ ದಿ. 17 ರಂದು 11ಕ್ಕೆ ಬೋಗಾರವೇಸ್ ನಿಂದ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

English summary
BJP MP Suresh Angadi said Belagavi district officers supporting Pakisthan sympathizers. He opposes transfer of police officer Dawood Khan to Belagavi who shared stage when maulvi compared Hubbali's Ganeshpete to Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X