ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಶ್ರೇಯಾಂಕ: ಬಿಮ್ಸ್‌ಗೆ 12ನೇ ಸ್ಥಾನ

|
Google Oneindia Kannada News

ಬೆಳಗಾವಿ, ಜುಲೈ 13: ದೇಶದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೈದ್ಯಕೀಯ ವಿಜ್ಞಾನ ವಿದ್ಯಾಲಯವು (ಬಿಮ್ಸ್) 12ನೇ ಸ್ಥಾನವನ್ನು ಪಡೆದುಕೊಂಡಿದೆ.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟ್ವೀಟ್‌ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕದ ಬೆಳಗಾವಿಯ ವೈದ್ಯಕೀಯ ವಿಜ್ಞಾನ ವಿದ್ಯಾಲಯ 12ನೇ ಸ್ಥಾನವನ್ನು ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Breaking; ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ಶೀಘ್ರ ಆರಂಭBreaking; ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ಶೀಘ್ರ ಆರಂಭ

ಔಟ್‌ಲುಕ್ ನಿಯತ ಕಾಲಿಕೆ (Outlook Magazine) ಇತ್ತೀಚೆಗೆ ಪ್ರಕಟಿಸಿದ ಮಾಹಿತಿಯ ಪ್ರಕಾರ ಬಿಮ್ಸ್ 12ನೇ ಸ್ಥಾನ ಬಂದಿದೆ. ಬೆಳಗಾವಿಯ ವೈದ್ಯಕೀಯ ವಿಜ್ಞಾನ ವಿದ್ಯಾಲಯ ಸಂಸ್ಥೆಯು ನವದೆಹಲಿಯ ಆಲ್‌ ಇಂಡಿಯಾ ಇನ್ಸಟಿಟ್ಯೂಟ್ ಆಪ್‌ ಮೆಡಿಕಲ್ ಸೈನ್ಸ್‌ (ಎಐಎಂಎಸ್), ಪುಣೆಯ ಆರ್ಮ್ಡ ಫೋರ್ಸ್ ಮೆಡಿಕಲ್ ಕಾಲೇಜ್ (ಎಎಫ್ಎಂಸಿ), ಪಾಂಡಿಚೇರಿಯ ಜವಾಹರಲಾಲ್ ಇನ್ಸಟಿಟ್ಯೂಷನ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜ್ಯುಕೇಷನ್ ಆಂಡ್ ರಿಸರ್ಚ್ (ಜಿಐಪಿಎಂಇಆರ್) ನಂತಹ ಘನ ವಿದ್ಯಾಲಯಗಳ ಜೊತೆಗೆ ಇರುವುದು ಹೆಮ್ಮೆಯ ವಿಷಯವಾಗಿರುತ್ತದೆ.

BIMS Bagged 12th ranking of Government Medical Institutions in the country

ದೇಶದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಅಗ್ರಸ್ಥಾನಗಳ ಪಟ್ಟಿಯಲ್ಲಿ ಬರುವಷ್ಟರ ಮಟ್ಟಿಗೆ ಬಿಮ್ಸ ಸಾಧನೆ ಮಾಡಲು ಶ್ರಮಿಸಿದ ಸಂಸ್ಥೆಯ ಅಧಿಕಾರಿಗಳು, ವೈದ್ಯರು ಹಾಗೂ ಎಲ್ಲ ಸಿಬ್ಬಂದಿಗಳಿಗೆ ಅಭಿನಂದನೆಗಳು ಎಂದು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಬೆಳಗಾವಿಗೆ ಏಮ್ಸ್ ತರಲು ಆಗ್ರಹ; ಸಚಿವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ಬೆಳಗಾವಿಗೆ 12ನೇ ಅಗ್ರಸ್ಥಾನ ಬಂದಿರುವುದು ನಮ್ಮಲ್ಲೂ ಸಂತಸ ಮೂಡಿಸಿದೆ. ಆದರೆ 750 ಹಾಸಿಗೆ ಇಟ್ಟುಕೊಂಡು 52 ಲಕ್ಷ ಜನಸಂಖ್ಯೆಯ ಬೆಳಗಾವಿ ಜಿಲ್ಲೆಯ ಜನರ ಆರೋಗ್ಯ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗುವುದೇ? ಎಂದು ಪಶ್ನಿಸಿದ್ದಾರೆ.

ಇಷ್ಟೊಂದು ಜನರ ಆರೋಗ್ಯ ಸುಧಾರಣೆಗೆ ಬೆಳಗಾವಿಗೆ ಆಲ್‌ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಎಐಎಂಎಸ್) ಸಂಸ್ಥೆ ತರಲು ಪ್ರಯತ್ನಿಸಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

BIMS Bagged 12th ranking of Government Medical Institutions in the country

ಬೆಳಗಾವಿಯ ಬಿಮ್ಸ್ ಸಂಸ್ಥೆಯನ್ನು 2005ರಲ್ಲಿ ಸ್ಥಾಪಿಸಲಾಗಿದೆ. ಆರಂಭದಲ್ಲಿ ನೂರು ಸೀಟುಗಳೊಂದಿಗೆ ಆರಂಭವಾಗಿ ನಂತರ 2017ರಲ್ಲಿ 150ಕ್ಕೆ ಸೀಟುಗಳನ್ನು ಹೆಚ್ಚಿಸಲಾಯಿತು. ಪ್ರತಿ ವರ್ಷ ಎಲ್ಲ ಪದವಿ ಸೇರಿ ಒಟ್ಟು 1,110 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ.

Recommended Video

Jaggesh ಮೋದಿಯವರನ್ನೇ ಲಾಂಛನದ ಸಿಂಹಕ್ಕೆ ಹೋಲಿಸಿದ್ದಾರೆ | *Politics | OneIndia Kannada

English summary
The Belagavi Institute Of Medical Sciences (BIMS) of Belagavi, Karnataka has been ranked 12th position in the ranking list of government medical institutions in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X