ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ; ದೆಹಲಿ, ತಿರುಪತಿಗೆ ವಿಮಾನ ಹಾರಾಟ, ವೇಳಾಪಟ್ಟಿ

|
Google Oneindia Kannada News

ಬೆಳಗಾವಿ, ಅಕ್ಟೋಬರ್ 12; ಬೆಳಗಾವಿ-ತಿರುಪತಿ ವಿಮಾನ ಸೇವೆಯನ್ನು ಪುನಃ ಆರಂಭಿಸಲಾಗಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಸೇವೆಗೆ ಸೋಮವಾರ ಪುನಃ ಚಾಲನೆ ಸಿಕ್ಕಿದೆ.

ಸ್ಟಾರ್ ಏರ್ ಸಂಸ್ಥೆ ವಾರದಲ್ಲಿ ಎರಡು ದಿನ ಬೆಳಗಾವಿ-ತಿರುಪತಿ ನಡುವೆ ವಿಮಾನ ಹಾರಾಟವನ್ನು ನಡೆಸಲಿದೆ. ಬೆಳಗಾವಿಯ ಬಿಜೆಪಿ ಸಂಸದೆ ಮಂಗಲ ಸುರೇಶ್ ಅಂಗಡಿ ವಿಮಾನ ಸೇವೆಗೆ ದೀಪ ಬೆಳಗುವ ಮೂಲಕ ಚಾಲನೆ ಕೊಟ್ಟರು.

ಮೈಸೂರು; ಗರಿಬಿಚ್ಚಿದ ವಿಮಾನ ಸೇವೆ, 1 ತಿಂಗಳಲ್ಲಿ 4 ಸಾವಿರ ಜನರ ಹಾರಾಟಮೈಸೂರು; ಗರಿಬಿಚ್ಚಿದ ವಿಮಾನ ಸೇವೆ, 1 ತಿಂಗಳಲ್ಲಿ 4 ಸಾವಿರ ಜನರ ಹಾರಾಟ

ತಿರುಪತಿಯಿಂದ ಮಧ್ಯಾಹ್ನ 12.55ಕ್ಕೆ ಹೊರಡುವ ವಿಮಾನ ಬೆಳಗಾವಿಗೆ ಮಧ್ಯಾಹ್ನ 1.20ಕ್ಕೆ ಆಗಮಿಸಲಿದೆ. ಸ್ಟಾರ್ ಏರ್ ಸಂಸ್ಥೆಯ ವೆಬ್ ಸೈಟ್‌ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಈ ವಿಮಾನ ಸೇವೆಯಿಂದ ತಿರುಪತಿ ದೇವಾಲಯಕ್ಕೆ ಭೇಟಿ ನೀಡುವ ಜನರಿಗೆ ಅನುಕೂಲವಾಗಲಿದೆ.

ಪುಣೆ ವಿಮಾನ ನಿಲ್ದಾಣ 14 ದಿನಗಳ ಕಾಲ ಬಂದ್ ಪುಣೆ ವಿಮಾನ ನಿಲ್ದಾಣ 14 ದಿನಗಳ ಕಾಲ ಬಂದ್

Belagavi-Tirupati Flight Service Resumed

ಸ್ಟಾರ್ ಏರ್ ಸಂಸ್ಥೆ ಮುಂಬೈ, ಸೂರತ್, ಅಹಮದಾಬಾದ್, ಜೋಧಪುರ್, ನಾಸಿಕ್, ಇಂಧೋರ್ ಮತ್ತು ತಿರುಪತಿ ಸೇರಿ ಏಳು ನಗರಗಳಿಗೆ ವಿಮಾನ ಸೇವೆಯನ್ನು ನೀಡುತ್ತಿದೆ. ಇದರಿಂದಾಗಿ ಕರ್ನಾಟಕದ ಜೊತೆಗೆ ಮಹಾರಾಷ್ಟ್ರ ಮತ್ತು ಗೋವಾದ ಗಡಿ ಭಾಗದಲ್ಲಿರುವ ಜನರಿಗೆ ಅನುಕೂಲವಾಗಲಿದೆ.

ಕಾಬೂಲ್‌ನಿಂದ ವಿಮಾನ ಸಂಚಾರಕ್ಕೆ ಅನುಮತಿ ನೀಡಲಿದೆ ಭಾರತ ಕಾಬೂಲ್‌ನಿಂದ ವಿಮಾನ ಸಂಚಾರಕ್ಕೆ ಅನುಮತಿ ನೀಡಲಿದೆ ಭಾರತ

ವಾರಕ್ಕೆ 3 ದಿನ ಸಂಚಾರ; ಸ್ಪೈಸ್ ಜೆಟ್ ಬೆಳಗಾವಿ-ದೆಹಲಿ ನಡುವೆ ವಾರದಲ್ಲಿ ಎರಡು ದಿನ ನೇರ ವಿಮಾನ ಸೇವೆ ಒದಗಿಸುತ್ತಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ವಾರದಲ್ಲಿ ಮೂರು ದಿನ ಸಂಚಾರ ನಡೆಸಲು ಆರಂಭಿಸಿದೆ.

ಪ್ರಸ್ತುತ ಸೋಮವಾರ, ಗುರುವಾರ, ಶುಕ್ರವಾರ ವಿಮಾನ ಸಂಚಾರ ನಡೆಸಲಿದೆ. ಮಧ್ಯಾಹ್ನ 2.30ಕ್ಕೆ ದೆಹಲಿಯಿಂದ ಹೊರಡುವ ವಿಮಾನ ಸಂಜೆ 4.45ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಸೋಮವಾರ 142 ಪ್ರಯಾಣಿಕರು ಬೆಳಗಾವಿಗೆ ಬಂದಿಳಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ ಮಾಧ್ಯಮಗಳ ಜೊತೆ ಮಾತನಾಡಿದ್ದು, "ನವೆಂಬರ್ 2ರಿಂದ 189 ಆಸನ ಸಾಮರ್ಥ್ಯವಿರುವ ಬೊಯಿಂಗ್ ವಿಮಾನ ಸೇವೆ ಆರಂಭಿಸಲಿದೆ. ಬೆಳಗ್ಗೆ 8.10ಕ್ಕೆ ದೆಹಲಿಯಿಂದ ಹೊರಡುವ ವಿಮಾನ ಬೆಳಗ್ಗೆ 9.20ಕ್ಕೆ ಬೆಳಗಾವಿಗೆ ಆಗಮಿಸಲಿದೆ" ಎಂದು ಮಾಹಿತಿ ನೀಡಿದರು.

ಟ್ರೂಜೆಟ್ ವಿಮಾನ ಸಂಸ್ಥೆಯೂ ಮಂಗಳವಾರದಿಂದ ಅಕ್ಟೋಬರ್ 12ರಿಂದ ತಿರುಪತಿ-ಬೆಳಗಾವಿ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ಬೆಳಗಾವಿಯ ವಿಮಾನ ನಿಲ್ದಾಣವನ್ನು ಈಗಾಗಲೇ ಉಡಾನ್ ಯೋಜನೆಗೆ ಸೇರಿಸಲಾಗಿದೆ.

ಅತಿ ಹೆಚ್ಚು ಪ್ರಯಾಣಿಕರ ಭೇಟಿ; ಕೋವಿಡ್ ಪರಿಸ್ಥಿತಿ ಬಳಿಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿದರೆ ಅತಿ ಹೆಚ್ಚು ಪ್ರಯಾಣಿಕರು ಭೇಟಿ ನೀಡುವ ವಿಮಾನ ನಿಲ್ದಾಣಗಳ ಪೈಕಿ 3ನೇ ಸ್ಥಾನದಲ್ಲಿ ಬೆಳಗಾವಿಯಲ್ಲಿದೆ.

ಮೇ 26 ರಿಂದ ಸೆಪ್ಟೆಂಬರ್ 13ರ ತನಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ 53 ಸಾವಿರ ಜನರು ಭೇಟಿ ನೀಡಿದ್ದಾರೆ. ಆಗಸ್ಟ್‌ ತಿಂಗಳಿನಲ್ಲಿ 18,280 ಜನರು ಸಂಚಾರ ನಡೆಸಿದ್ದಾರೆ. ಸೆಪ್ಟೆಂಬರ್ 1 ರಿಂದ 13ರ ತನಕ 793 ಜನರು ಪ್ರಯಾಣ ಬೆಳೆಸಿದ್ದಾರೆ.

ಕರ್ನಾಟಕದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 2019ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ 3ನೇ ಸ್ಥಾನದಲ್ಲಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಕುಸಿತವಾಗುತ್ತಿದೆ. 2021ರ ಏಪ್ರಿಲ್‌ನಿಂದ ಜೂನ್ ತನಕ 928 ವಿಮಾನಗಳು ಬಂದಿದ್ದು, 27,352 ಪ್ರಯಾಣಿಕರು ಆಗಮಿಸಿದ್ದಾರೆ.

ಕರ್ನಾಟಕದ ಹಳೆಯ ವಿಮಾನ ನಿಲ್ದಾಣಗಳಲ್ಲಿ ಸಾಂಬ್ರಾ ವಿಮಾನ ನಿಲ್ದಾಣವೂ ಒಂದಾಗಿದೆ. 2019ರಲ್ಲಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಗೆ ಸೇರಿಸಲಾಗಿದೆ.

2021ರ ಏಪ್ರಿಲ್‌ನಿಂದ ಜೂನ್ ತನಕ 1,640 ವಿಮಾನಗಳು ನಿಲ್ದಾಣದಲ್ಲಿ ಲ್ಯಾಂಡಿಂಗ್ ಅಥವ ಟೇಕಾಫ್ ಆಗಿವೆ. 51,190 ಪ್ರಯಾಣಿಕರು ವಿಮಾಣ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.

English summary
Star Air resumed flight service to Belagavi-Tirupati. Flight service stopped in the time of Covid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X