ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಗಡಿ ವಿವಾದಕ್ಕೆ ತುಪ್ಪ ಸುರಿದ ಉದ್ದವ್ ಠಾಕ್ರೆ

By Manjunatha
|
Google Oneindia Kannada News

ಬೆಳಗಾವಿ, ನವೆಂಬರ್ 24 : ಬೆಳಗಾವಿಯಲ್ಲಿ ಎಂಇಎಸ್ ಮುಖಂಡರು ತಮ್ಮ ಕಿಡಿಗೇಡಿತನ ಮುಂದುವರೆಸಿದ್ದಾರೆ, ಇಂದು (ನವೆಂಬರ್ 24) ಬೆಳಗಾವಿಗೆ ಆಗಮಿಸಿದ್ದ ಶಿವಸೇನೆ ಮುಖಂಡ ಉದ್ದವ್ ಠಾಕ್ರೆ ಬೆಳಗಾವಿ ಕುರಿತು ಭಂಡತನದ ಹೇಳಿಕೆ ನೀಡಿದ್ದಾರೆ.

ನಗರದ ಗಡಿ ಗ್ರಾಮವಾದ ಚಂದಗಡ ತಾಲ್ಲೂಕಿನ ಸಿನ್ನೋಳ್ಳಿ ಗ್ರಾಮಕ್ಕೆ ಬಂದಿದ್ದ ಉದ್ದವ್ ಠಾಕ್ರೆ "ಬೆಳಗಾವಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕಾದುದು' ಎಂದು ಗಡಿ ವಿವಾದ ಬೆಂಕಿಗೆ ತುಪ್ಪ ಸುರಿದಿದ್ದಾರೆ.

Belagavi should be part of Maharashtra : Uddhav Thackeray

'ಬೆಳಗಾವಿ ವಿವಾದಿತ ಗಡಿ ವಿಚಾರದಲ್ಲಿ ಶಿವಸೇನೆಯು ಸದಾ ಮಾರಾಠಿಗರ ಪರವಾಗಿ ಇರುತ್ತದೆ ಎಂದು ವಚನ ನೀಡುತ್ತೇನೆ' ಎಂದು ಅವರು ಸ್ಥಳೀಯ ಮರಾಠಿಗರಿಗೆ ಗಡಿ ವಿವಾದ ಹೋರಾಟಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.

ಕರ್ನಾಟಕ ವ್ಯಾಪ್ತಿಯ ಮರಾಠಿ ಭೂಭಾಗ ಪ್ರದೇಶ ಮಹಾರಾಷ್ಟ್ರದ್ದು ಎಂದು ಇದು ಮರಾಠಾ ತಾಯಿಯ ನೆಲೆ, ಇದು ನನ್ನ ನೆಲ, ಮರಾಠಿ ಭೂಭಾಗ ಪ್ರದೇಶ ಮಹಾರಾಷ್ಟ್ರ ಕ್ಕೆ ಸೇರಲೇಬೇಕು ಎಂದು ಭಾವಾವೇಶಪೂರ್ಣ ಭಾಷಣ ಮಾಡಿದರು.

'ಶಿವಸೇನೆ ಮಂತ್ರಿಗಳು, ಶಾಸಕರು ಗಡಿ ಮರಾಠಿಗ ಬೆನ್ನಿಗೆ ನಿಲ್ಲಲಿದ್ದಾರೆ ಎಂದು ಅಭಯ ನೀಡಿದ ಉದ್ದವ್ ಠಾಕ್ರೆ ಈ ಹೋರಾಟಕ್ಕೆ ಮರಾಠಿಗಳು ನನಗೆ ನನಗೆ ಆಶಿರ್ವಾದ ನೀಡಬೇಕು' ಎಂದು ಅವರು ಮರಾಠಿಗರಲ್ಲಿ ಕೇಳಿಕೊಂಡರು.

ಉದ್ದವ ಠಾಕ್ರೆ ಗೆ ಜೈಕಾರ ಹಾಕಿ ಬೆಳಗಾವಿ, ನಿಪ್ಪಾಣಿ ಸೇರಿ ಮರಾಠಿ ಪ್ರದೇಶಗಳು ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕೆಂದ ನಾಡದ್ರೋಹಿಗಳು ಈ ಸಂದರ್ಭದಲ್ಲಿ ಘೋಷಣೆ ಕೂಗಿದರು.

ಆ ಮುಂಚೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಉದ್ದವ ಠಾಕ್ರೆಯನ್ನು ಬೆಳಗಾವಿ ಮೇಯರ್ ಸಂಜೋತಾ ಬಾಂದೇಕರ ಮತ್ತು ಬೆಳಗಾವಿಯ ಎಂ.ಇ.ಎಸ್ ಮುಖಂಡರು ಭೇಟಿ ಮಾಡಿದರು.

English summary
Shiv Sena leader Uddhav Thackeray said Belagavi should be part of Maharashtra. further he said Shiva sena will always in the side of maratiens about Belagavi border dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X