ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಕರ್ನಾಟಕದ 3ನೇ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣ

|
Google Oneindia Kannada News

ಬೆಳಗಾವಿ, ಜುಲೈ 22; ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಕೋವಿಡ್ ಪರಿಸ್ಥಿತಿಯಲ್ಲಿಯೂ ಕರ್ನಾಟಕದ 3ನೇ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2021ರ ಏಪ್ರಿಲ್‌ನಿಂದ ಜೂನ್ ತನಕ 1,640 ವಿಮಾನಗಳು ನಿಲ್ದಾಣಕ್ಕೆ ಬಂದಿವೆ.

ಸಾಂಬ್ರಾ ವಿಮಾಣ ನಿಲ್ದಾಣ ಕರ್ನಾಟಕದ ಹಳೆಯ ವಿಮಾನ ನಿಲ್ದಾಣವಾಗಿದೆ. 2019ರಲ್ಲಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಕೋವಿಡ್ ಪರಿಸ್ಥಿತಿಗಿಂತ ಮೊದಲು ಹಾರಾಟ ನಡೆಸಿದ ವಿಮಾನಕ್ಕಿಂತ ಹೆಚ್ಚು ವಿಮಾನಗಳು ಈಗ ಹಾರಾಟ ನಡೆಸುತ್ತಿವೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಇಸ್ರೇಲ್ ಮಾದರಿ ಭದ್ರತೆಮಂಗಳೂರು ವಿಮಾನ ನಿಲ್ದಾಣಕ್ಕೆ ಇಸ್ರೇಲ್ ಮಾದರಿ ಭದ್ರತೆ

2021ರ ಏಪ್ರಿಲ್‌ನಿಂದ ಜೂನ್ ತನಕ 1,640 ವಿಮಾನಗಳು ಲ್ಯಾಂಡಿಂಗ್ ಅಥವ ಟೇಕಾಫ್ ಆಗಿವೆ. 51,190 ಪ್ರಯಾಣಿಕರು ವಿಮಾಣ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. 2019ರ ಏಪ್ರಿಲ್‌ನಿಂದ ಜೂನ್ ತನಕ 730 ವಿಮಾನಗಳು ಹಾರಾಟ ನಡೆಸಿದ್ದವು.

ಹುಬ್ಬಳ್ಳಿ; ಜುಲೈ 1ರಿಂದ ಹಲವು ವಿಮಾನ ಸಂಚಾರ ಪುನರಾರಂಭ ಹುಬ್ಬಳ್ಳಿ; ಜುಲೈ 1ರಿಂದ ಹಲವು ವಿಮಾನ ಸಂಚಾರ ಪುನರಾರಂಭ

ಕೋವಿಡ್ ಪರಿಸ್ಥಿತಿಯಲ್ಲಿಯೂ ಹೆಚ್ಚು ಪ್ರಯಾಣಿಕರು ಭೇಟಿ ನೀಡಿರುವ ದೇಶದ ವಿಮಾನ ನಿಲ್ದಾಣಗಳಲ್ಲಿ ಸಾಂಬ್ರಾ ಸಹ ಸೇರಿದೆ. 2020-21ರಲ್ಲಿ 2.8 ಲಕ್ಷ ಪ್ರಯಾಣಿಕರು ಭೇಟಿ ನೀಡಿದ್ದರು. 2019 ಏಪ್ರಿಲ್‌ನಿಂದ 2020ರ ಮಾರ್ಚ್‌ ತನಕ ಕೋವಿಡ್ ಇಲ್ಲದ ಅವಧಿಯಲ್ಲಿಯೂ 2.76 ಲಕ್ಷ ಪ್ರಯಾಣಿಕರು ನಿಲ್ದಾಣಕ್ಕೆ ಬಂದಿದ್ದರು.

ಕೆಐಎ: ಹೆಚ್ಚುವರಿ 500 ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಲಾಟ್ ಕೆಐಎ: ಹೆಚ್ಚುವರಿ 500 ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಲಾಟ್

ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ

ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ

ಕರ್ನಾಟಕದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದಿದೆ. 2ನೇ ಸ್ಥಾನದಲ್ಲಿ ಮಂಗಳೂರಿನ ಬಜ್ಪೆಯಲ್ಲಿರುವ ವಿಮಾಣ ನಿಲ್ದಾಣವಿದೆ. ಆದರೆ ಕೋವಿಡ್ ಕಾಲದಲ್ಲಿ ಈ ವಿಮಾನ ನಿಲ್ದಾಣಗಳಿಗೆ ವಿಮಾನ, ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.

ಕೆಂಪೇಗೌಡ ವಿಮಾನ ನಿಲ್ದಾಣ

ಕೆಂಪೇಗೌಡ ವಿಮಾನ ನಿಲ್ದಾಣ

2019-20ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2.72 ದೇಶಿಯ, 45.78 ಲಕ್ಷ ಅಂತರಾಷ್ಟ್ರೀಯ ಪ್ರಯಾಣಿಕರು ಬಂದಿದ್ದರು. 1.04 ದೇಶಿಯ ಮತ್ತು 4.65 ಲಕ್ಷ ಅಂತರಾಷ್ಟ್ರೀಯ ಪ್ರಯಾಣಿಕರು 2020-21ರಲ್ಲಿ ಭೇಟಿ ನೀಡಿದ್ದಾರೆ. ಈ ವರ್ಷದ ಜೂನ್ ತನಕ ವಿಮಾನ ನಿಲ್ದಾಣಕ್ಕೆ 3186 ಅಂತರಾಷ್ಟ್ರೀಯ, 22,483 ದೇಶಿಯ ವಿಮಾನಗಳು ನಿಲ್ದಾಣಕ್ಕೆ ಬಂದಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣ

ಹುಬ್ಬಳ್ಳಿ ವಿಮಾನ ನಿಲ್ದಾಣ

ರಾಜ್ಯದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ 2019ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ 3ನೇ ಸ್ಥಾನದಲ್ಲಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಕುಸಿತವಾಗುತ್ತಿದೆ. 2021ರ ಏಪ್ರಿಲ್‌ನಿಂದ ಜೂನ್ ತನಕ 928 ವಿಮಾನಗಳು ಬಂದಿದ್ದು, 27,352 ಪ್ರಯಾಣಿಕರು ಆಗಮಿಸಿದ್ದಾರೆ. 2019ರಲ್ಲಿ ಇದೇ ಅವಧಿಯಲ್ಲಿ 1928 ವಿಮಾನಗಳು ಬಂದಿದ್ದು, 1.50 ಲಕ್ಷ ಪ್ರಯಾಣಿಕರ ಭೇಟಿ ಕೊಟ್ಟಿದ್ದರು.

Recommended Video

Umesh Katti : ನಾನು ಕೂಡ ಸಿಎಂ ಆಕಾಂಕ್ಷಿ... ನಾನು ಸಿಎಂ ಆಗೋದು ಪಕ್ಕಾ! | Oneindia Kannada
ಪ್ರಯಾಣಿಕರ ಸಂಖ್ಯೆ ಕಡಿಮೆ ಏಕೆ?

ಪ್ರಯಾಣಿಕರ ಸಂಖ್ಯೆ ಕಡಿಮೆ ಏಕೆ?

ಕರ್ನಾಟಕ ಸರ್ಕಾರ ಕೋವಿಡ್ 2ನೇ ಅಲೆಯ ಲಾಕ್‌ಡೌನ್‌ನಲ್ಲಿ ವಿಮಾನಗಳ ಹಾರಾಟಕ್ಕೆ ಯಾವುದೇ ನಿರ್ಬಂಧ ಹೇರಿರಲಿಲ್ಲ. ಆದರೆ ವಿಮಾನಯಾನ ಕಂಪನಿಗಳು ಹಾರಾಟವನ್ನು ಕಡಿಮೆ ಮಾಡಿದವು. ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆ ವರದಿ ತರಬೇಕು ಸೇರಿದಂತೆ ವಿವಿಧ ನಿಯಮಗಳ ಕಾರಣ ಹೆಚ್ಚಿನ ಪ್ರಯಾಣಿಕರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿಲ್ಲ ಎಂದು ವಿಶ್ಲೇಷಿಸಲಾಗಿದೆ.

English summary
Belagavi Sambra airport emerged as the third busiest airport in Karnataka. Between Apirl to June 2021 airport witnessed 1,640 flights either taking off or landing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X