ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆರವಣಿಗೆಯಲ್ಲಿ ಪಾಕಿಸ್ತಾನದ ಹಾಡು: ಪ್ರಕರಣ ದಾಖಲಿಸಲು ಒತ್ತಾಯ

By Manjunatha
|
Google Oneindia Kannada News

ಬೆಳಗಾವಿ, ಡಿಸೆಂಬರ್ 02 : ಪಾಕಿಸ್ತಾನದ ಸೈನ್ಯದಲ್ಲಿ ಹಾಡಲಾಗುವ ಹಾಡನ್ನು ಬೆಳಗಾವಿಯ ಈದ್ ಮಿಲಾದ್ ಆಚರಣೆಯಲ್ಲಿ ಹಾಡಲಾಗಿದೆ ಎಂದು ಬೆಳಗಾವಿ ಬಿಜೆಪಿ ಮಹಾನಗರ ಘಟಕ ಪ್ರಧಾನ ಕಾರ್ಯದರ್ಶಿ ರಾಜೀವ ಟೋಪಣ್ಣವರ್ ಆರೋಪಿಸಿದ್ದಾರೆ.

ಇಂದು (ಡಿಸೆಂಬರ್ 02)ರಂದು ನಗರದಲ್ಲಿ ನಡೆದ ಮುಸ್ಲಿಂರ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಕಿಸ್ತಾನ ಸಯನ್ಯದಲ್ಲಿ ಹಾಡಲಾಗುವ ಹಾಡನ್ನು ಹಾಡಿದ್ದು, ಇದು ದೇಶದ್ರೋಹದ ಕಾರ್ಯ ಎಂದು ಅವರು ಹೇಳಿದರು.

ಹುಬ್ಬಳ್ಳಿಯಲ್ಲಿ ಪಾಕಿಸ್ತಾವನ್ನು ಗುಣಗಾನ ಮಾಡಿದ ಮುಸ್ಲಿಂ ಮೌಲ್ವಿ ಹುಬ್ಬಳ್ಳಿಯಲ್ಲಿ ಪಾಕಿಸ್ತಾವನ್ನು ಗುಣಗಾನ ಮಾಡಿದ ಮುಸ್ಲಿಂ ಮೌಲ್ವಿ

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಕೆಂದೇ ಶಾಂತಿ ಕದಡುವ ಉಮೇದಿನಿಂದ ಮುಸ್ಲಿಂ ನಾಯಕರು ಹೀಗೆ ಮಾಡಿದ್ದಾರೆ ಅವರಿಗೆ ಜನಪ್ರತಿನಿಧಿಗಳ ಬೆಂಬಲವೂ ಇದೆ ಎಂದು ಅವರು ಆರೋಪ ಮಾಡಿದರು.

Belagavi: Pakistan military song in Ed Milad procession

ಶತ್ರು ದೇಶದ ಹಾಡಿಗೆ ಬೆಳಗಾವಿ ಪಾಲಿಕೆ ಸದಸ್ಯರಾದ ಮಾತೀನ್ ಶೇಖ್, ಬಂದಿನವಾಜ್ ಬಾಳೆಕುಂದ್ರಿ, ಅಜಿಂ ಪಟವೇಗಾರ ಅವರು ನೃತ್ಯ ಮಾಡುವ ಮೂಲಕ ದೇಶ ದ್ರೋಹಿಗಳಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಬ್ಬ ಆಚರಿಸಲು ಅಡ್ಡಯಿಲ್ಲ ಆದರೆ ಪಾಕಿಸ್ತಾನದ ಹಾಡು ಇಲ್ಲಿ ಯಾಕೆ, ಪಾಕಿಸ್ತಾನದ ಹಾಡು ಇಷ್ಟವಾದರೆ ಅಲ್ಲಿಗೆ ಹೋಗಲಿ ಇಲ್ಲಿ ಬೇಡ ಎಂದು ಅವರು ಅಬ್ಬರಿಸಿದರು.

ಇಷ್ಟೆಲ್ಲಾ ಆಗುತ್ತಿದ್ದರು ಮೆರವಣಿಗೆಗೆ ಭದ್ರತೆ ಒದಗಿಸಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಈ ಕೂಡಲೆ ಪಾಕಿಸ್ತಾನ ಹಾಡು ಹಾಡಿದ ಹಾಗೂ ಅವರಿಗೆ ಬೆಂಬಲ ಸೂಚಿಸಿದ ಎಲ್ಲರನ್ನೂ ದೇಶದ್ರೋಹದ ಅಡಿ ಬಂಧಿಸಬೇಕು. ಹಾಗೂ ಕರ್ತವ್ಯ ಮರೆತ ಪೊಲೀಸರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

English summary
Belagavi BJP leader Rajeev Topannavar said in pressmeet that in Ed procession happen in Belagavi today (December 02) muslims sung Pakistan military song. Rajeev demands to arrest those who sung Pakistan song and book them under sedition case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X