ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಗೆದ್ದವರ ಪಟ್ಟಿ

|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 6: ಭಾರಿ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಜಯಭೇರಿ ಬಾರಿಸಿದೆ. ಬೆಳಗಾವಿ ಜೊತೆಗೆ ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶವೂ ಇಂದೇ ಪ್ರಕಟವಾಗುತ್ತಿದೆ.

ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದರೆ, ಕಲಬುರಗಿ ಕಾಂಗ್ರೆಸ್ ಪಾಲಾಗುವ ಲಕ್ಷಣ ಕಂಡು ಬಂದಿದೆ.

 Belagavi Municipal Election Results 2021: List of Winners and Losers

ಬೆಳಗಾವಿಯ 58 ವಾರ್ಡ್ (28 ಮ್ಯಾಜಿಕ್ ನಂಬರ್) ಗಳಿಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ವಿವರ ಹೀಗಿದೆ: (ಸಮಯ 12:31)
ಬಿಜೆಪಿ: 34
ಕಾಂಗ್ರೆಸ್: 9
ಪಕ್ಷೇತರ: 13

15ನೇ ವಾರ್ಡ್‌ನಲ್ಲಿ ಬಿಜೆಪಿಯ ನೇತ್ರಾವತಿ ವಿನೋದ ಭಾಗವತ್, ವಾರ್ಡ್ ನಂಬರ್ 14 ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಶಿವಾಜಿ ಮಂಡೋಳಕರ್ ಮತ್ತು ವಾರ್ಡ್ ನಂಬರ್ 40ರಲ್ಲಿ ಬಿಜೆಪಿಯ ಹೇಮಾ ಕಾಮ್ಕರ್ ಗೆಲುವು ಸಾಧಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ 58 ವಾರ್ಡ್(28 ಮ್ಯಾಜಿಕ್ ನಂಬರ್)
ವಾರ್ಡ್ ಸಂಖ್ಯೆ ವಿಜೇತರು ಪಕ್ಷ
01 ಇಕ್ರಾ ಮುಲ್ಲಾ ಪಕ್ಷೇತರ
02 ಮುಜಾಮಿಲ್ ದೋನಿ ಕಾಂಗ್ರೆಸ್
03 ಜ್ಯೋತಿ ಕಡೋಳ್ಕರ್ ಕಾಂಗ್ರೆಸ್
04 ಜಯತೀರ್ಥ ಸವದತ್ತಿ ಬಿಜೆಪಿ
05 ಅಫ್ರಿಜಾ ಮುಲ್ಲಾ ಕಾಂಗ್ರೆಸ್
06 ಸಂತೋಷ್ ಪಡ್ನೇಕರ್ ಬಿಜೆಪಿ
07 ಶಂಕರ್ ಪಾಟೀಲ್ ಪಕ್ಷೇತರ
08 ಸೋಹೆಲ್ ಸಂಗೊಳ್ಳಿ ಕಾಂಗ್ರೆಸ್
09 ಪೂಜಾ ಪಾಟೀಲ್ ಪಕ್ಷೇತರ
10 ವೈಶಾಲಿ ಭಟ್ಕಂಡೆ ಪಕ್ಷೇತರ
11 ಸಮೀಯುಲ್ಲಾ ಮಡಿವಾಳೆ ಕಾಂಗ್ರೆಸ್
12 ಮದಿನಸಾಹಾಬ್ ಮಟವಾಳೆ ಪಕ್ಷೇತರ
13 ರೇಷ್ಮಾ ಭೈರಾಕ್ಡಾರ್ ಕಾಂಗ್ರೆಸ್
14 ಶಿವಾಜಿ ಮಂಡೋಲ್ಕರ್ ಪಕ್ಷೇತರ
15 ನೇತ್ರಾವತಿ ಬಿಜೆಪಿ
16 ರಾಜು ಭಟ್ಕಂಡೆ ಬಿಜೆಪಿ
17 ಸವಿತಾ ಕಾಂಬ್ಳೆ ಬಿಜೆಪಿ
18 ಸಾಹಿದ್ ಖಾನ್ ಪಠಾಣ್ ಎಐಎಂಐಎಂ
19 ರಿಯಾಜ್ ಕಿಲ್ಲೇದಾರ್ ಪಕ್ಷೇತರ
20 ಶಕೀಲ ಮುಲ್ಲಾ ಕಾಂಗ್ರೆಸ್
21 ಪ್ರೀತಿ ಕಾಮ್ಕಾರ್ ಬಿಜೆಪಿ
22 ರವಿರಾಜ್ ಸಂಬ್ರೇಕರ್ ಬಿಜೆಪಿ
23 ಜಯಂತ್ ಜಾಧವ್ ಬಿಜೆಪಿ
24 ಗಿರೀಶ್ ಧೊಂಗಡಿ ಬಿಜೆಪಿ
25 ಜರೀನಾ ಫತೇಖಾನ್ ಪಕ್ಷೇತರ
26 ರೇಖಾ ಹೂಗಾರ್ ಬಿಜೆಪಿ
27 ರವಿ ಸಾಲುಂಕೆ ಬಿಜೆಪಿ
28 ರವಿ ಧೋತ್ರೆ ಬಿಜೆಪಿ
29 ನಿತಿನ್ ಜಾಧವ್ ಬಿಜೆಪಿ
30 ನಂದು ಮಿರಜ್ಕರ್ ಬಿಜೆಪಿ
31 ವೀಣಾ ವಿಜಾಪುರೆ ಬಿಜೆಪಿ
32 ಸಂದೀಪ್ ಜೆ ಬಿಜೆಪಿ
33 ರೇಷ್ಮಾ ಪಾಟೀಲ್ ಬಿಜೆಪಿ
34 ಶ್ರೇಯಸ್ ನಕಾಡಿ ಬಿಜೆಪಿ
35 ಲಕ್ಷ್ಮಿ ರಾಥೋಡ್ ಬಿಜೆಪಿ
36 ರಾಜಶೇಖರ್ ಡೋಣಿ ಬಿಜೆಪಿ
37 ಶಮೋಬಿನ್ ಪಠಾಣ್ ಕಾಂಗ್ರೆಸ್
38 ಮೊಹಮ್ಮದ್ ಪಟ್ವೆಗರ್ ಪಕ್ಷೇತರ
39 ಉದಯಕುಮಾರ್ ಉಪಾರಿ ಬಿಜೆಪಿ
40 ರೇಷ್ಮಾ ಕಮ್ಕಾರ್ ಬಿಜೆಪಿ
41 ಮಂಗೇಶ್ ಪವಾರ್ ಬಿಜೆಪಿ
42 ಅಭ್ಜಿಜೀತ್ ಜವಾಲ್ಕರ್ ಬಿಜೆಪಿ
43 ವಾಣಿ ಜೋಶಿ ಬಿಜೆಪಿ
44 ನಂದ್ ಚವಾಣ್ ಬಿಜೆಪಿ
45 ರೂಪಾ ಚಿಕಲ್ದಾನಿ ಬಿಜೆಪಿ
46 ಹನುಮಂತ್ ಕೊಂಗಲಿ ಬಿಜೆಪಿ
47 ಅಸ್ಮಿತಾ ಪಾಟೀಲ್ ಪಕ್ಷೇತರ
48 ಬಸವರಾಜ್ ಮೊಡ್ಗೆಕರ್ ಪಕ್ಷೇತರ
49 ದೀಪಾಲಿ ತೊಪಗಿ ಬಿಜೆಪಿ
50 ಸಾರಿಕಾ ಪಾಟೀಲ್ ಬಿಜೆಪಿ
51 ಶ್ರೀಶೈಲ್ ಕಾಂಬ್ಳೆ ಬಿಜೆಪಿ
52 ಖುರ್ಷಿಯಾ ಮುಲ್ಲಾ ಕಾಂಗ್ರೆಸ್
53 ರಮೇಶ್ ಮಲಿಗೋಳ್ ಬಿಜೆಪಿ
54 ಮಾಧವಿ ರಘೋಚೆ ಬಿಜೆಪಿ
55 ಸವಿತಾ ಪಾಟೀಲ್ ಬಿಜೆಪಿ
56 ಲಕ್ಷ್ಮಿ ಲೋಕರಿ ಕಾಂಗ್ರೆಸ್
57 ಶೋಭಾ ಸೋಮ್ನಾಚೆ ಬಿಜೆಪಿ
58 ಪ್ರಿಯಾ ಸತ್ಗೊಡ್ ಬಿಜೆಪಿ

4.31 ಲಕ್ಷ ಮತದಾರರು:
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 4,31,383 ಮತದಾರರು ಮತದಾನದ ಹಕ್ಕು ಹೊಂದಿದ್ದರು. ಇದರಲ್ಲಿ 560 ಸೇವಾ ಮತದಾರರು ಸೇರಿದಂತೆ 2,15,364 ಪುರುಷರು ಹಾಗೂ 2,16,019 ಮಹಿಳಾ‌ ಮತದಾರರಿದ್ದರು. 58 ವಾರ್ಡುಗಳಲ್ಲಿ ಒಟ್ಟಾರೆ 402 ಮತಗಟ್ಟೆಗಳು ಮತ್ತು 13 ಉಪ ಮತಗಟ್ಟೆಗಳು ಸೇರಿದಂತೆ 415 ಮತಗಟ್ಟೆಗಳಲ್ಲಿ ಮತದಾನ ನಡೆಸಲಾಗಿದೆ.

ಕೋವಿಡ್ ಮಾರ್ಗಸೂಚಿ ಪಾಲನೆ:
ಮತದಾನ ಹಾಗೂ ಮತ ಎಣಿಕೆ‌ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಾರ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮಾದರಿ ನೀತಿಸಂಹಿತೆ ಪಾಲನೆ, ಸೆಕ್ಟರ್ ಅಧಿಕಾರಿಗಳ ನಿಯೋಜನೆ, ವಾಹನ ಸೌಲಭ್ಯ ಮತ್ತಿತರ ವಿಷಯಗಳ ಬಗ್ಗೆ ನಿಗಾ ವಹಿಸಿ, ಚುನಾವಣೆಯನ್ನು ಶಾಂತಿಯುತವಾಗಿ ಆಯೋಜಿಸಲಾಗಿತ್ತು ಎಂದು ರಾಜ್ಯ ಚುನಾವಣಾ ಆಯುಕ್ತ ಡಾ.ಬಿ.ಬಸವರಾಜು ಹೇಳಿದ್ದಾರೆ.

English summary
Belagavi Municipal Election Results 2021: Here is the list of Winners and Losers. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X