ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಚುನಾವಣೆ: ಬಿಜೆಪಿಗೆ ಏದುಸಿರು ತಂದ ಎಂಇಎಸ್ ಅಭ್ಯರ್ಥಿ

|
Google Oneindia Kannada News

ಲಕ್ಷಾಂತರ ಮತಗಳ ಅಂತರದಿಂದ ಕ್ಷೇತ್ರವನ್ನು ಗೆಲ್ಲುತ್ತಿದ್ದ ಬಿಜೆಪಿಗೆ ಒಂದು ಹಂತದಲ್ಲಿ ಸೋಲಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಮತಎಣಿಕೆ ಸಾಗುತ್ತಿತ್ತು. 89 ರೌಂಡ್ ಗಳ ಮತಎಣಿಕೆಯಲ್ಲಿ 35ಕ್ಕೂ ಹೆಚ್ಚು ರೌಂಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೀಡ್ ನಲ್ಲಿದ್ದರು.

ವಿಜಯಲಕ್ಷ್ಮೀ ಚಂಚಲೆಯಾಗಿ, ಸೂಪರ್ ಓವರ್ ನಂತೆ ಸಾಗುತ್ತಿದ್ದ ಮತಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ಗೆದ್ದರು ಎನ್ನುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ವೀರೋಜಿತ ಸೋಲಾಯಿತು.

ಬೆಳಗಾವಿ ಉಪ ಚುನಾವಣೆ: ಕೊನೆ ಹಂತದಲ್ಲಿ ಗೆದ್ದು ಬೀಗಿದ ಮಂಗಲ ಅಂಗಡಿಬೆಳಗಾವಿ ಉಪ ಚುನಾವಣೆ: ಕೊನೆ ಹಂತದಲ್ಲಿ ಗೆದ್ದು ಬೀಗಿದ ಮಂಗಲ ಅಂಗಡಿ

ಕೆಲವೊಮ್ಮೆ ಮೂರಂಕಿ, ಕೆಲವೊಮ್ಮೆ ನಾಲ್ಕಂಕಿ ಲೀಡ್ ನಲ್ಲಿ ಮಾತ್ರ ಇಬ್ಬರು ಅಭ್ಯರ್ಥಿಗಳು ಸಾಗುತ್ತಿದ್ದರು. ಬೆಳಗಾವಿ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಆರರಲ್ಲಿ ಬಿಜೆಪಿ ಶಾಸಕರಿದ್ದಾರೆ.

ಬೆಳಗಾವಿ ಫಲಿತಾಂಶ: ಬೆಳಗಾವಿ ಫಲಿತಾಂಶ: "ಏನಯ್ಯ ಸತೀಶ್, ಎಷ್ಟು ಟೆನ್ಷನ್ ಕೊಡ್ತಿಯಲ್ಲಪ್ಪ''

ಇಷ್ಟಾದರೂ, ಬಿಜೆಪಿ ಗೆಲುವು ಸಾಧಿಸಲು ಹರಸಾಹಸ ಪಡಬೇಕಾಗಿ ಬಂದಿದ್ದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿ, ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿ ಮತಗಳ ಬುಟ್ಟಿಗೆ ಲಗ್ಗೆ ಇಟ್ಟಿದ್ದು.

 ಮತ ಎಣಿಕೆ ಅಂತಿಮ ಹಂತದವರೆಗೂ ರೋಚಕ ತಿರುವನ್ನು ಪಡೆಯುತ್ತಲೇ ಸಾಗಿತು

ಮತ ಎಣಿಕೆ ಅಂತಿಮ ಹಂತದವರೆಗೂ ರೋಚಕ ತಿರುವನ್ನು ಪಡೆಯುತ್ತಲೇ ಸಾಗಿತು

ಪ್ರತಿ ಸುತ್ತಿನಲ್ಲೂ ಹಾವು-ಏಣಿ ಆಟದಂತಿದ್ದ ಬೆಳಗಾವಿ ಕ್ಷೇತ್ರದ ಮತ ಎಣಿಕೆ ಅಂತಿಮ ಹಂತದವರೆಗೂ ರೋಚಕ ತಿರುವನ್ನು ಪಡೆಯುತ್ತಲೇ ಸಾಗಿತು. ಮಂಗಳ ಅಂಗಡಿಗೆ 4,40,327, ಸತೀಶ್ ಜಾರಕಿಹೊಳಿಗೆ 4,35,087 ಮತಗಳು ಚಲಾವಣೆಯಾದವು. ನೋಟಾಗೆ 10,631 ಮತಗಳು ಬಿದ್ದವು. ಕೊನೆಗೂ, ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಬಿಜೆಪಿ ಅಭ್ಯರ್ಥಿ 5,240 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

 ಎಂಇಎಸ್ ಅಭ್ಯರ್ಥಿ ಶುಭಂ ವಿಕ್ರಾಂತ್ ಶಿಲ್ಕೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದರು

ಎಂಇಎಸ್ ಅಭ್ಯರ್ಥಿ ಶುಭಂ ವಿಕ್ರಾಂತ್ ಶಿಲ್ಕೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದರು

ಆದರೆ, ಬಿಜೆಪಿ ಅಭ್ಯರ್ಥಿಗೆ ಒಂದು ಹಂತದಲ್ಲಿ ಅಕ್ಷರಸಃ ತೊಡಕಾಗುತ್ತಾ ಸಾಗಿದ್ದು ಎಂಇಎಸ್ ಅಭ್ಯರ್ಥಿ ಶುಭಂ ವಿಕ್ರಾಂತ್ ಶಿಲ್ಕೆ. ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ ಈ ಅಭ್ಯರ್ಥಿ 1,17,174 ಮತಗಳನ್ನು ಪಡೆದರು. ಎಂಇಎಸ್ ಗೆ ಬೀಳುವ ಮತಗಳು ಸಾಂಪ್ರದಾಯಿಕವಾಗಿ ಬಿಜೆಪಿಯದ್ದೇ ಎಂದು ಹೇಳಲಾಗುತ್ತದೆ.

 ಎಂಇಎಸ್ ಗೆ ಗ್ರಾಮೀಣದಲ್ಲಿ 45,536 ಮತ್ತು ದಕ್ಷಿಣದಲ್ಲಿ 44,950 ಮತಗಳು

ಎಂಇಎಸ್ ಗೆ ಗ್ರಾಮೀಣದಲ್ಲಿ 45,536 ಮತ್ತು ದಕ್ಷಿಣದಲ್ಲಿ 44,950 ಮತಗಳು

ಪ್ರಮುಖವಾಗಿ ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣದಲ್ಲಿ ಈ ಅಭ್ಯರ್ಥಿ ಪಡೆದ ಮತಗಳು ಹೆಚ್ಚುಕಮ್ಮಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಪಡೆದ ಮತಗಳಿಗೆ ಹತ್ತಿರವಾಗಿತ್ತು. ಗ್ರಾಮೀಣದಲ್ಲಿ 45,536 ಮತ್ತು ದಕ್ಷಿಣದಲ್ಲಿ 44,950 ಮತಗಳನ್ನು ಎಂಇಎಸ್ ಅಭ್ಯರ್ಥಿ ಪಡೆದರು.

Recommended Video

Corona ಕಡಿಮೆಯಾಗಿದೆ ಎಂದು ವರದಿಯಾಗಲು ಇದೇ ಕಾರಣ | Oneindia Kannada
 ಬೆಳಗಾವಿಯಲ್ಲಿ ಬಿಜೆಪಿ ಪ್ರಯಾಸದಿಂದ ಗೆಲುವನ್ನು ಸಾಧಿಸಿತು

ಬೆಳಗಾವಿಯಲ್ಲಿ ಬಿಜೆಪಿ ಪ್ರಯಾಸದಿಂದ ಗೆಲುವನ್ನು ಸಾಧಿಸಿತು

ಇನ್ನು, ಬೆಳಗಾವಿ ಉತ್ತರದಲ್ಲಿ 24,594 ಮತಗಳನ್ನು ಪಡೆಯುವ ಮೂಲಕ, ಕ್ಷೇತ್ರದ ಚಿತ್ರಣವನ್ನೇ ಎಂಇಎಸ್ ಅಭ್ಯರ್ಥಿ ಬದಲಿಸಿದರು. ಆದರೆ, ಬೆಳಗಾವಿ ನಗರ ಮತ್ತು ಗ್ರಾಮಾಂತರ ಹೊರತಾಗಿ ವಿಕ್ರಾಂತ್ ಶಿಲ್ಕೆ ಹೆಚ್ಚಿನ ಮತ ಪಡೆಯುವಲ್ಲಿ ಸಫಲರಾಗಲಿಲ್ಲ. ಒಟ್ಟಿನಲ್ಲಿ, ಬಿಜೆಪಿಗೆ ಸುಲಭ ತುತ್ತಾಗಬಹುದು ಎಂದು ಗ್ರಹಿಸಲಾಗಿದ್ದ ಬೆಳಗಾವಿಯಲ್ಲಿ ಬಿಜೆಪಿ ಪ್ರಯಾಸದಿಂದ ಗೆಲುವನ್ನು ಸಾಧಿಸಿತು.

English summary
Belagavi Lok Sabha By Election Results 2021: MES Candidate gives Struggle for BJP candidate to win
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X