ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ-ಬೆಂಗಳೂರು ರೈಲು ಸಂಚಾರಕ್ಕೆ ಹಸಿರು ನಿಶಾನೆ

|
Google Oneindia Kannada News

ಬೆಳಗಾವಿ, ಜೂನ್ 30 : ಬೆಳಗಾವಿ-ಬೆಂಗಳೂರು ತತ್ಕಾಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಎಸ್ ರೈಲಿಗೆ ಚಾಲನೆ ಸಿಕ್ಕಿದೆ. ಜೂನ್ 30ರಿಂದ 1 ತಿಂಗಳ ಕಾಲ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಬೆಳಗಾವಿ ರೈಲು ನಿಲ್ದಾಣದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಶನಿವಾರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಬೆಳಗಾವಿ ಬೆಂಗಳೂರು ನಡುವಿನ 610 ಕಿ.ಮೀ.ದೂರವನ್ನು ರೈಲು 10 ಗಂಟೆಗಳಲ್ಲಿ ಕ್ರಮಿಸಲಿದೆ.

ಬೆಳಗಾವಿ-ಬೆಂಗಳೂರು ವಿಶೇಷ ರೈಲು : ನಿಲ್ದಾಣ, ವೇಳಾಪಟ್ಟಿಬೆಳಗಾವಿ-ಬೆಂಗಳೂರು ವಿಶೇಷ ರೈಲು : ನಿಲ್ದಾಣ, ವೇಳಾಪಟ್ಟಿ

ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಸುರೇಶ್ ಅಂಗಡಿ ಅವರು, 'ಮೈಸೂರು-ಧಾರವಾಡ ರೈಲನ್ನು ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರದ ಮೀರಜ್ ತನಕ ವಿಸ್ತರಣೆ ಮಾಡುವ ಚಿಂತನೆ ನಡೆದಿದೆ' ಎಂದು ಹೇಳಿದರು.

ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಬೆಂಗಳೂರು-ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

Belagavi -KSR Bengaluru special train flag off

'ಬೆಳಗಾವಿಯಿಂದ ಪುಣೆಯವರೆಗೆ ಪುಷ್‌ಪುಲ್ ರೈಲು ಆರಂಭಿಸಲು ಹಾಗೂ ಬೆಳಗಾವಿಯಿಂದ ಗೋವಾದ ವಾಸ್ಕೋವರೆಗೆ ಹೊಸ ರೈಲು ಆರಂಭಿಸುವಂತೆ ಸಾಕಷ್ಟು ಬೇಡಿಕೆ ಇದೆ. ಇದರ ಬಗ್ಗೆಯೂ ಚಿಂತನೆ ಮಾಡುತ್ತಿದ್ದೇವೆ' ಎಂದು ಸಚಿವರು ತಿಳಿಸಿದರು.

ಬೆಳಗಾವಿ-ಮುಂಬೈ ವಿಮಾನ ಹಾರಾಟ ಆರಂಭಿಸಿದ ಸ್ಪೈಸ್ ಜೆಟ್ಬೆಳಗಾವಿ-ಮುಂಬೈ ವಿಮಾನ ಹಾರಾಟ ಆರಂಭಿಸಿದ ಸ್ಪೈಸ್ ಜೆಟ್

ಪ್ರಯಾಣ ದರ, ನಿಲ್ದಾಣ : ಬೆಳಗಾವಿ-ಬೆಂಗಳೂರು ರೈಲು ಪ್ರಯಾಣ ದರ 2ಎಸಿ 1,755 ರೂ., 3ಎಸಿ 1,235 ರೂ., ಸ್ಲೀಪರ್ 465 ರೂ.ಗಳು. ಈ ರೈಲು ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ತುಮಕೂರು ಮತ್ತು ಯಶವಂತಪುರದಲ್ಲಿ ನಿಲುಗಡೆಗೊಳ್ಳಲಿದೆ.

ವೇಳಾಪಟ್ಟಿ : ಪ್ರತಿದಿನ ರಾತ್ರಿ 9 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಡಲಿರುವ ರೈಲು ಮರುದಿನ ಬೆಳಗ್ಗೆ 7.30ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ರಾತ್ರಿ 9 ಗಂಟೆಗೆ ಹೊರಡಲಿರುವ ರೈಲು ಮರುದಿನ ಬೆಳಗ್ಗೆ 7.30ಕ್ಕೆ ಬೆಂಗಳೂರು ತಲುಪಲಿದೆ.

English summary
Suresh Angadi minister of railways state flag off for the special tatkal train between Belagavi to KSR Bengaluru on June 29, 2019. Train scheduled for only a month said South Western Railway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X