ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮ ಮಂದಿರ ದೇಣಿಗೆ: "ಕೊಡುವವರ ಇಚ್ಛೆ ಇದ್ದರೆ ಏನೂ ಮಾಡಕ್ಕಾಗಲ್ಲ''

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಲಗಾವಿ, ಫೆಬ್ರವರಿ 20: ರಾಮ ಮಂದಿರ ದೇಣಿಗೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ತೆಗೆದುಕೊಳ್ಳುವವರ ಬಲ, ಕೊಡುವವರ ಇಚ್ಛೆ ಇದ್ದರೆ ಏನೂ ಮಾಡಕ್ಕಾಗಲ್ಲ ಎಂದು ಬೆಳಗಾವಿಯಲ್ಲಿ ಹೇಳಿದರು.

ಬಹಳಷ್ಟು ಜನ ನೀರಲ್ಲಿ ದುಡ್ಡು ಎಸೆಯುತ್ತಾರೆ, ಆ ಲೆಕ್ಕ ಕೇಳಿ ಅಂದ್ರೆ ಎಲ್ಲಿಂದ ಕೇಳೋದು ಅಂತಾ ಜನ ನಮ್ಮ ದೇಶದಲ್ಲಿದ್ದಾರೆ. ಎಲ್ಲೆಲ್ಲೋ ಅನವಶ್ಯಕ ಖರ್ಚು ಮಾಡ್ತಾರೆ, ಅದನ್ನೇನು ಲೆಕ್ಕ ಕೇಳೋದು? ಅವರವರ ಇಷ್ಟ, ಪ್ರೀತಿ ಅಂತಾ ಪರಿಗಣನೆ ಮಾಡಬೇಕು ಎಂದರು.

ದೇಣಿಗೆ ಕೊಡುವವರ ಪ್ರೀತಿ, ತಗೆದುಕೊಳ್ಳುವವರ ಪ್ರೀತಿ ಆ ಲೆಕ್ಕ ಕೇಳಕ್ಕಾಗಲ್ಲ. ನನ್ನ ಹತ್ತಿರವೂ ರಾಮಮಂದಿರ ನಿರ್ಮಾಣ ದೇಣಿಗೆ ಕೇಳಲು ಬಂದಿದ್ದರು. ಅದು ಇನ್ನೂ ಚರ್ಚೆ ಹಂತದಲ್ಲಿದೆ, ನೋಡೋಣ ಏನಾಗುತ್ತದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಮೌಢ್ಯತೆ ವಿರುದ್ಧ ತೀಶ್ ಜಾರಕಿಹೊಳಿ ಹೋರಾಟ ಮುಂದುವರಿದಿದ್ದು, ಸದಾಶಿವನಗರ ಸ್ಮಶಾನದಲ್ಲಿ ಬೆಂಬಲಿಗನ ಕಾರಿಗೆ ಚಾಲನೆ ನೀಡಿದರು.

Belagavi: KPCC Working President Satish Jarakiholi Reacted About Donations To Ram Mandir

ಅಹಿಂದ ವಿಚಾರ ಬಗ್ಗೆ ಸಿದ್ದರಾಮಯ್ಯ ಚರ್ಚೆ ಮಾಡಿಲ್ಲ, ಈ ಬಗ್ಗೆ ಸಿದ್ದರಾಮಯ್ಯ ಸಹ ನಿನ್ನೆ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಸ್ಪಷ್ಟಪಡಿಸಿದಾಗ ರಾಹುಲ್ ಗಾಂಧಿ ಅನುಮತಿ ಕೊಡೋದು ಪ್ರಶ್ನೆಯೇ ಬರಲ್ಲ ಎಂದು ತಿಳಿಸಿದರು.

ಇನ್ನು ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸ್ಪರ್ಧೆ ವಿಚಾರವಾಗಿ, ದಿನಾಂಕ ಘೋಷಣೆಯಾದ ಬಳಿಕ ಮುಂದಿನ ಲೆಕ್ಕ ಸ್ಟಾರ್ಟ್ ಆಗುತ್ತದೆ. ವೈಯಕ್ತಿಕವಾಗಿ ಸ್ಪರ್ಧೆಗೆ ರೆಡಿ ಇಲ್ಲ, ಪಕ್ಷ ಹೇಳಿದರೆ ತೀರ್ಮಾನಿಸುವೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷಕ್ಕೆ ಹಲವು ನಾಯಕರಿಗೆ ಆಹ್ವಾನ ವಿಚಾರವಾಗಿ, ಹಲವು ಮಾಜಿಗಳು ಪಕ್ಷ ಸೇರ್ತಿದಾರೆ, ಒನ್ ಬೈ ಒನ್ ಮಾಡ್ತೀವಿ. ಆಹ್ವಾನ ಕೊಟ್ಟಿದ್ದೀವಿ ಅವರು ಸಹಮತ ವ್ಯಕ್ತ ಮಾಡಬೇಕಲ್ಲ ಎಂದರು.

ರಾಮ ಮಂದಿರಕ್ಕೆ ಪಿಎಫ್ಐನ ಒಂದು ರುಪಾಯಿ ಬೇಕಿಲ್ಲ''ರಾಮ ಮಂದಿರಕ್ಕೆ ಪಿಎಫ್ಐನ ಒಂದು ರುಪಾಯಿ ಬೇಕಿಲ್ಲ''

ಪಕ್ಷಾತೀತವಾಗಿ ಅಹಿಂದವಾದರೆ ಭಾಗವಹಿಸುತ್ತೇವೆ, ಕಾಂಗ್ರೆಸ್ ಅಹಿಂದಕ್ಕೆ ಬರಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅಹಿಂದ ಪಕ್ಷದ ಆಧಾರ ಮೇಲೆ ಮಾಡಿದ್ದೇವೆ, ಪ್ರತ್ಯೇಕ ಅಹಿಂದ ಪ್ರಶ್ನೆಯೇ ಇಲ್ಲ. ಮಾಡಿದರೆ ಕಾಂಗ್ರೆಸ್ ಅಹಿಂದ ಅಂತಾ ಮಾಡಬೇಕಾಗುತ್ತೆ, ಜನರಲ್ ಆಗಿ ಮಾಡೋಕೆ ಬರಲ್ಲ ಎಂದು ತಿಳಿಸಿದರು.

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ, ಮುಂದಿನ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅಂತಾ ಹೈಕಮಾಂಡ್ ಏನೂ ಹೇಳಿಲ್ಲ. ನಾನು, ನನಗಿಷ್ಟ ಬಂದ್ರೆ ನಾನೂ ಹೇಳ್ತೀನಿ. ನನಗೂ ವಾಟ್ಸಪ್‌ನಲ್ಲಿ ಮುಂದಿನ ಸಿಎಂ ಅಂತಾ ಹಾಕ್ತಾರೆ. ಅವರವರ ಅಭಿಮಾನಿಗಳು ಹಾಕ್ತಾರೆ ಎಂದು ಪ್ರತಿಕ್ರಿಯಿಸಿದರು.

ಜಮೀರ್ ಅಹ್ಮದ್ ಸಿದ್ದರಾಮಯ್ಯ ಅಭಿಮಾನಿ ಅಂತಾ ಕನ್ಸಿಡರ್ ಮಾಡ್ತೀವಿ. ಜಮೀರ್ ಹೇಳಿದ್ದರಲ್ಲಿ ತಪ್ಪೇನಿಲ್ಲ, ಆದರೆ ಪಕ್ಷ ಏನೂ ನಿರ್ಧಾರ ಮಾಡಿಲ್ಲ. 113 ಶಾಸಕರು ಆಯ್ಕೆಯಾದ ಬಂದ್ಮೇಲೆ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.

English summary
KPCC working President Satish Jarakiholi responded in Belagavi about to the donation of the Ram Mandir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X