ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಕೆಎಟಿ ಪೀಠ ತಾತ್ಕಾಲಿಕವಾಗಿ ಬಂದ್

|
Google Oneindia Kannada News

ಬೆಳಗಾವಿ, ಜನವರಿ 20 : ಆರಂಭವಾದ ಒಂದು ತಿಂಗಳಿನಲ್ಲಿಯೇ ಬೆಳಗಾವಿ ಕೆಎಟಿ ಪೀಠ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಬೆಳಗಾವಿ ಕೆಎಟಿ ಪೀಠದ ವ್ಯಾಪ್ತಿಗೆ 7 ಜಿಲ್ಲೆಗಳು ಸೇರಿವೆ.

2019ರ ಜನವರಿ 16ರಿಂದ ಬೆಳಗಾವಿಯ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಪೀಠ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. 2018ರ ಡಿಸೆಂಬರ್ 17ರಂದು ಬೆಳಗಾವಿಯ ಕೆಎಟಿ ಪೀಠವನ್ನು ಉದ್ಘಾಟನೆ ಮಾಡಲಾಗಿತ್ತು.

ಬೆಳಗಾವಿ ಕೆಎಟಿ ಪೀಠ ಲೋಕಾರ್ಪಣೆಬೆಳಗಾವಿ ಕೆಎಟಿ ಪೀಠ ಲೋಕಾರ್ಪಣೆ

ಬೆಳಗಾವಿ ಕೆಎಟಿ ಪೀಠಕ್ಕೆ ಪ್ರಧಾನ ಪೀಠದಿಂದ 150 ಪ್ರಕರಣಗಳನ್ನು ವರ್ಗಾವಣೆ ಮಾಡಲಾಗಿತ್ತು. ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಮತ್ತು ನ್ಯಾಯಾಂಗ ಸದಸ್ಯ ವಿ.ಪಿ.ಬಳಿಗಾರ್ ಅವರು ಜನವರಿ 7 ರಿಂದ ಪೀಠದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ಬೆಳಗಾವಿ : ಜಿಲ್ಲಾ ಆಸ್ಪತ್ರೆಗಳಲ್ಲಿ ಸೌರ ವಿದ್ಯುತ್ ಉತ್ಪಾದನೆಬೆಳಗಾವಿ : ಜಿಲ್ಲಾ ಆಸ್ಪತ್ರೆಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ

kat

ಕರ್ನಾಟಕ ಸರ್ಕಾರ ಬೆಳಗಾವಿ ಮತ್ತು ಕಲಬುರಗಿಯಲ್ಲಿ ಕೆಎಟಿ ಪೀಠ ಸ್ಥಾಪನೆ ಮಾಡಲು 2015ರಲ್ಲಿ ನಿರ್ಧಾರವನ್ನು ಕೈಗೊಂಡಿತ್ತು. 2018ರಲ್ಲಿ ಪೀಠವನ್ನು ಉದ್ಘಾಟನೆ ಮಾಡಲಾಗಿತ್ತು.

ಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭಬೆಂಗಳೂರಿನ ಕೆಇಎಲ್‌ಗೆ ಬೆಳಗಾವಿಯಿಂದ ವಿದ್ಯುತ್, ಘಟಕ ಆರಂಭ

ಬೆಳಗಾವಿ ಕೆಎಟಿ ಪೀಠದ ವ್ಯಾಪ್ತಿಗೆ ಬೆಳಗಾವಿ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಒಳಪಡುತ್ತವೆ. ಈ ಜಿಲ್ಲೆಗಳ ಸುಮಾರು 2644 ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ.

ಕೆಎಟಿ ರಿಜಿಸ್ಟ್ರಾರ್ ಕೆ.ಅಮರನಾರಾಯಣ ಅವರು ಈ ಕುರಿತು ಮಾಹಿತಿ ನೀಡಿದ್ದು, '2019ರ ಜನವರಿ 16ರಿಂದ ಪೀಠ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಶೀಘ್ರದಲ್ಲೇ ಪೀಠವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ' ಎಂದು ಹೇಳಿದ್ದಾರೆ.

English summary
Belagavi Karnataka Administrative Tribunal (KAT) bench shutdown for temporarily. Bench inaugurated on December 17, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X