ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಘಟಪ್ರಭಾ ನದಿ ನೀರು ಇಳಿಕೆ: ನಿಟ್ಟುಸಿರು ಬಿಟ್ಟ ಗೋಕಾಕ್ ಜನತೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 20: ಘಟಪ್ರಭಾ ನದಿಯ ಪ್ರವಾಹದ ಕರಾಳ ಛಾಯೆಯಿಂದ ಕಂಗೆಟ್ಟಿದ ಗೋಕಾಕ್ ತಾಲೂಕಿನ ಜನತೆ ಬುಧವಾರದಂದು ನಿಟ್ಟುಸಿರು ಬಿಟ್ಟಿದ್ದಾರೆ. ಗಡಿಭಾಗದ ಜಲಾಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ಪ್ರವಾಹದಲ್ಲಿ ಇಳಿಮುಖವಾಗಿ ಸಂತ್ರಸ್ಥರಲ್ಲಿ ತುಸು ನೆಮ್ಮದಿ ಮೂಡಿದೆ.

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಹಂಪಿಯ ಹಲವು ಸ್ಮಾರಕಗಳು ಮುಳುಗಡೆತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಹಂಪಿಯ ಹಲವು ಸ್ಮಾರಕಗಳು ಮುಳುಗಡೆ

ವರುಣ ಇಂದು ಮುಂಜಾನೆಯಿಂದ ಬಿಡುವನ್ನು ನೀಡಿದ್ದರೂ ಕೂಡಾ ಬುಧವಾರ ಮುಂಜಾನೆ ಹಿರಣ್ಯಕೇಶಿ, ಮಾರ್ಕಂಡೇಯ, ಬಳ್ಳಾರಿ ನಾಲಾದಿಂದ ಘಟಪ್ರಭಾ ನದಿಗೆ ಸುಮಾರು 67 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವುದಿರಂದ ನೀರಿನ ಮಟ್ಟ ಕಡಿಮೆಯಾಗಿದೆ.

Belagavi: Ghataprabha River Flooding Decrease In Gokak Taluk

ಅಲ್ಲದೇ ಸಂಜೆ ವೇಳೆಗೆ ನೀರಾವರಿ ಇಲಾಖೆಯ ಮಾಹಿತಿ ಪ್ರಕಾರ 68 ಸಾವಿರ ಕ್ಯೂಸೆಕ್ಸ ನದಿಗೆ ಹರಿದು ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿರುವುದರಿಂದ ಆತಂಕವನ್ನು ದೂರು ಮಾಡಿದೆ. ನಿನ್ನೆ ರಾತ್ರಿ ಚಿಕ್ಕೋಳಿ ಸೇತುವೆ ಮೇಲೆ ಇದ್ದು ನೀರು ಇಂದು ಇಳಿಕೆಯಾಗಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

Belagavi: Ghataprabha River Flooding Decrease In Gokak Taluk

ಗೋಕಾಕ್ ನಗರದ ಉಪ್ಪಾರ ಗಲ್ಲಿ, ಕುಂಬಾರ ಗಲ್ಲಿ, ಹಾಳಬಾಗ ಗಲ್ಲಿ, ಹಳೆಯ ದನದ ಪೇಠೆ, ಮಟನ್ ಮಾರ್ಕೆಟ್, ದಾಳಂಬರಿ ತೋಟ ಸೇರಿದಂತೆ ಅನೇಕ ಗಲ್ಲಿಗಳಲ್ಲಿ ನೀರು ನುಗ್ಗಿತ್ತು, ನಿನ್ನೆಯ ದಿನಕ್ಕೆ ನೀರಿನ ಮಟ್ಟವನ್ನು ಅವಲೋಕಿಸಿದಾಗ ಇಂದು ಎಲ್ಲ ಗಲ್ಲಿಗಳಲ್ಲಿ ಸುಮಾರು 100 ಅಡಿಗಳಷ್ಟು ದೂರ ನೀರು ಸರಿದಿದೆ. ಅದೇ ರೀತಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡಾ ನೀರು ಕಡಿಮೆಯಾಗಿದೆ ಇದರಿಂದ ಸಂತ್ರಸ್ಥರಲ್ಲಿ ಸಂತೋಷವನ್ನುಂಟು ಮಾಡಿದೆ.

English summary
The people of Gokak taluk, who were disturbed by the shadow of the Ghataprabha river floods, have let out a sigh on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X