ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ : ಉದ್ಘಾಟನೆ ಮಾಡಿದ ತಿಂಗಳಲ್ಲೇ ಕೈಕೊಟ್ಟ ಉಚಿತ ವೈ ಫೈ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 01 : ಬೆಳಗಾವಿ ಸಂಸದ ಸುರೇಶ ಅಂಗಡಿ ಡಿಜಿಟಲ್ ಇಂಡಿಯಾ ಸ್ಕೀಮ್ ಅಡಿಯಲ್ಲಿ ನಗರದ ಹಲವಾರು ಸಾರ್ಜನಿಕ ಸ್ಥಳಗಳಲ್ಲಿ ಅಳವಡಿಸಿದ ವೈ ಫೈ ಇಂಟರ್ನೆಟ್ ವ್ಯೆವಸ್ಥೆ ಸಂಪೂರ್ಣವಾಗಿ ಹಳ್ಳ ಹಿಡಿದಿದೆ.

ಬೆಳಗಾವಿಯ ರೆಲ್ವೆ ನಿಲ್ದಾಣದಲ್ಲಿ ಸಂಸದ ಸುರೇಶ ಅಂಗಡಿ ಅವರು ಉಚಿತ ವೈ ಫೈ ವ್ಯೆವಸ್ಥೆ ಉದ್ಘಾಟಿಸಿದ ಕೆಲವೇ ಕೆಲವು ವಾರ ಸಾರ್ವಜನಿಕರಿಗೆ ಹೈ ಫೈ ಸೇವೆ ನೀಡಿದ ವೈಫೈ ಹಳ್ಳಹಿಡಿಯಿತು, ಇಲ್ಲಿ ವೈಫೈ ಕನೆಕ್ಟ ಮಾಡಲು ಸಾರ್ವಜನಿಕರು ಮೊಬೈಲ್ ಸೆಟಿಂಗ್ಸ್ ಬದಲಾಯಿಸಿ ಬದಲಾಯಿಸಿ ಸುಸ್ತಾಗುತ್ತಿದ್ದಾರೆ.

ಬೆಂಗಳೂರಿನ ಬಸ್ ನಿಲ್ದಾಣ, ಮಾರುಕಟ್ಟೆಯಲ್ಲಿ ವೈಫೈ ಸೌಲಭ್ಯಬೆಂಗಳೂರಿನ ಬಸ್ ನಿಲ್ದಾಣ, ಮಾರುಕಟ್ಟೆಯಲ್ಲಿ ವೈಫೈ ಸೌಲಭ್ಯ

ಜಿಲ್ಲಾ ಆಸ್ಪತ್ರೆಯ ರೋಗಿಗಳು ಬೆಡ್ ಮೇಲೆ ಇಂಟರ್ನೆಟ್ ಆನ್ ಮಾಡಿ ಎಂಜಾಯ್ ಮಾಡಲಿ ಅಂತಾ ಅಲ್ಲಿಯೂ ವೈ ಫೈ ಅಳವಡಿಸಲಾಗಿತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಡಾಕ್ಟರ್ ಗಳೇ ಸಮಯಕ್ಕೆ ಸರಿಯಾಗಿ ಬರೋದಿಲ್ಲ ಹಾಗಾಗಿ ಇಲ್ಲಿಯ ವ್ಯೆವಸ್ಥೆ ನೋಡಿ ಆಸ್ಪತ್ರೆಯ ವೈಫೈ ಕೂಡಾ ಸೋಮಾರಿಯಾಗಿದೆ ಒಂದೆರಡು ದಿನ ಆಸ್ಪತ್ರೆಯ ರೋಗಿಗಳು ಎಂಜಾಯ್ ಮಾಡಿದ ವೈಫೈ ನಂತರ ಇಲ್ಲಿಂದ ಕಾಲ್ಕಿತ್ತಿದೆ.

Belagavi: Free wifi in public places goes offline

ಬಸ್ ನಿಲ್ದಾಣದಲ್ಲಿಯೂ ಡಿಜಿಟಲ್ ಇಂಡಿಯಾ ಸೇವೆ ಅಡಿಯಲ್ಲಿ ವೈ ಫೈ ಅಳವಡಿಸಲಾಗಿತ್ತು ಕಂಡಕ್ಟರ್ ಗಳು ವೈಫೈ ಕನೆಕ್ಟ ಮಾಡಿ ಟೈಮ್ ಪಾಸ್ ಮಾಡುತ್ತಿರುವದರಿಂದ ಕಲೆಕ್ಷನ್ ಕಡಿಮೆ ಆಗುತ್ತಿದೆ ಅಂತ ಸಾರಿಗೆ ಅಧಿಕಾರಿಗಳೇ ಇಲ್ಲಿಯ ವೈ ಫೈನ ಸೊಂಟ ಮುರಿದಿದ್ದಾರೆ.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಖಾಸಗಿ ಕಂಪನಿಯೊಂದರ ಸಹಯೋಗದಲ್ಲಿ ವೈ ಫೈ ಅಳವಡಿಸಲಾಗಿತ್ತು ಇದೂ ಕೂಡಾ ಈಗ ನಿಷ್ಕ್ರಿಯವಾಗಿದೆ

ರಾಜ್ಯದ 2,500 ಗ್ರಾಮಪಂಚಾಯ್ತಿಗಳಿಗೆ ವೈಫೈ ಸೌಲಭ್ಯರಾಜ್ಯದ 2,500 ಗ್ರಾಮಪಂಚಾಯ್ತಿಗಳಿಗೆ ವೈಫೈ ಸೌಲಭ್ಯ

ಸ್ಮಾರ್ಟ್ ಸಿಟಿಯ ಸ್ಮಾರ್ಟ ಪಾಲಿಕೆಯಲ್ಲಿ ವೈ ಫೈ ಅಳವಡಿಸಲಾಗಿತ್ತು ಇಲ್ಲಿ ಕೆಲವು ತಿಂಗಳ ಕಾಲ ಸಾರ್ವಜನಿಕರ ಮೋಬೈಲ್ ಗಳಿಗೆ ಕನೆಕ್ಟ ಆಯ್ತು ಬರ್ತ್ ಸರ್ಟಿಪಿಕೇಟ್, ಡೆತ್ ಸರ್ಟಿಪಿಕೇಟ್ ಪಡೆಯಲು ಪಾಲಿಕೆಗೆ ಬಂದವರು ಅರ್ಜಿ ಕೊಟ್ಟು ಪಾಲಿಕೆಯಲ್ಲೇ ವೈಫೈ ಕನೆಕ್ಟ ಮಾಡಿ ಕೆಲವು ತಿಂಗಳ ಕಾಲ ಎಂಜಾಯ್ ಮಾಡಿದ್ರು ಇತ್ತಿಚಿನ ದಿನಗಳಲ್ಲಿ ಇಲ್ಲಿನ ಸ್ಮಾರ್ಟ್ ವೈಫೈ ತನ್ನ ಸ್ಮಾರ್ಟ್ ನೆಸ್ ಕಳೆದುಕೊಂಡು ಕೂರುಪಿಯಾಗಿದೆ.

ಡಿಸಿ ಕಚೇರಿಯಲ್ಲಿ ಅಳವಡಿಸಲಾದ ವೈಫೈ ಚನ್ನಾಗಿಯೇ ಇತ್ತು ಇದಕ್ಕೆ ಯಾರ ದೃಷ್ಠಿ ಬಿತ್ತೋ ಗೊತ್ತಿಲ್ಲ ಅದು ಕೂಡಾ ಈಗ ಹಳ್ಳ ಹಿಡಿದಿದ್ದು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಬೆಳಗಾವಿಯಲ್ಲಿ ಸರ್ಜಿಕಲ್ ಸ್ಟೇಜ್ ನಲ್ಲಿದೆ.

ಸಂಸದ ಸುರೇಶ ಅಂಗಡಿ ಸ್ವಲ್ಪ ಈ ಕಡೆ ಗಮನ ಹರಿಸಿ ವೈಫೈ ರಿಪೇರಿ ಮಾಡಿಸಲು ಕ್ರಮ ಕೈಗೊಳ್ಳುತ್ತಾರೋ ಅಥವಾ ಲಕ್ವಾ ಹಿಡೆದಿರುವ ವೈ ಫೈ ಕೋಮಾ ಗೆ ಹೋಗುತ್ತದೆಯೋ ಕಾದು ನೋಡಬೇಕು.

English summary
Free wifi in public places has not been working in Belagavi city. MP Suresh Angadi has inaugurated free wifi under digital india scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X