ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುತಾಲಿಕ್ - ಶಿವಸೇನೆ ಸಭೆಯಲ್ಲಿ 'ಬೆಳಗಾವಿ ಗಲಾಟೆ'

By Sachhidananda Acharya
|
Google Oneindia Kannada News

ಬೆಂಗಳೂರು, ನವೆಂಬರ್ 29: ಶಿವಸೇನೆ ಸೇರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಯತ್ನಕ್ಕೆ ಆರಂಭದಲ್ಲೇ ವಿಘ್ನ ತಲೆದೋರಿದೆ.

ಬಾಬರನಂತೆ ಸುನ್ನಿ ಮುಸ್ಲಿಮರ ನಾಶ ಮಾಡುವ ಬೆದರಿಕೆ ಹಾಕಿದ ಮುತಾಲಿಕ್ಬಾಬರನಂತೆ ಸುನ್ನಿ ಮುಸ್ಲಿಮರ ನಾಶ ಮಾಡುವ ಬೆದರಿಕೆ ಹಾಕಿದ ಮುತಾಲಿಕ್

ಕರ್ನಾಟಕದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಶಿವಸೇನೆ ಸ್ಥಾಪಿಸುವ ಸಂಬಂಧ ಇಂದು ನಡೆದ ಸಭೆಯಲ್ಲಿ ಶಿವಸೇನೆ ಪರವಾಗಿ ಮಹಾರಾಷ್ಟ್ರ ಸಚಿವ ದೀಪಕ್ ಸಾವಂತ್ ಮತ್ತು ಪ್ರಮೋದ್ ಮುತಾಲಿಕ್ ಪಾಲ್ಗೊಂಡಿದ್ದರು.

ಚುನಾವಣಾ ಮೈತ್ರಿ : ಶಿವಸೇನೆ ಜತೆ ಕೈಜೋಡಿಸಿದ ಶ್ರೀರಾಮಸೇನೆ ಚುನಾವಣಾ ಮೈತ್ರಿ : ಶಿವಸೇನೆ ಜತೆ ಕೈಜೋಡಿಸಿದ ಶ್ರೀರಾಮಸೇನೆ

'Belagavi Fight' in Shiv Sena - Muthalik meeting

ಸಭೆಯಲ್ಲಿ ದೀಪಕ್ ಸಾವಂತ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, "ಬೆಳಗಾವಿ ವಿಷಯ ಇಲ್ಲಿ ಬೇಡ. ನಾನು ಉದ್ಧವ್ ಠಾಕ್ರೆ ಜತೆಗೂ ಮಾತನಾಡಿದ್ದೇನೆ. ಬೆಳಗಾವಿ ವಿಷಯ ಪ್ರಸ್ತಾಪಿಸಿದರೆ ಕರ್ನಾಟಕದಲ್ಲಿ ಶಿವಸೇನೆ ಬೆಳೆಯುವುದಿಲ್ಲ," ಎಂದು ಹೇಳಿದರು.

ಶಿವಸೇನೆ ಪಕ್ಷ ಸಂಘಟನೆ : ಮುತಾಲಿಕ್‌ಗೆ ಕಲ್ಲೇಟಿನ ಎಚ್ಚರಿಕೆಶಿವಸೇನೆ ಪಕ್ಷ ಸಂಘಟನೆ : ಮುತಾಲಿಕ್‌ಗೆ ಕಲ್ಲೇಟಿನ ಎಚ್ಚರಿಕೆ

ಆದರೆ ಇದಕ್ಕೆ ದೀಪಕ್ ಸಾವಂತ್ ಒಪ್ಪದಿದ್ದಾಗ ಸಭೆಯಲ್ಲಿ ಉಭಯ ನಾಯಕರ ನಡುವೆ ವಾಕ್ಸಮರ ನಡೆದಿದೆ. ಕೊನೆಗೆ ಸಭೆಯಿಂದಲೇ ದೀಪಕ್ ಸಾವಂತ್ ಹೊರ ನಡೆದಿದ್ದಾರೆ. ಈ ಮೂಲಕ ಶಿವಸೇನೆ ಸೇರುವ ಮುತಾಲಿಕ್ ಯತ್ನಕ್ಕೆ ಆರಂಭದಲ್ಲೇ ವಿಘ್ನ ತಲೆದೋರಿದೆ.

English summary
Maharashtra Minister Deepak Sawant and Pramod Muthalik met and discussed about Shiv Sena’s entry to Karnataka. But Belagavi issue was disrupted the meeting and Deepak Sawant walks out of the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X