ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಸಾವಿರಾರೂ ಲೀಟರ್ ಹಾಲು ಕಾಲುವೆ ಪಾಲಾಯ್ತು

|
Google Oneindia Kannada News

ಬೆಳಗಾವಿ, ಮಾರ್ಚ್ 31: ಲಾಕ್‌ ಡೌನ್‌ನಿಂದ ರೈತರು ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಸಿಕ್ಕಿಲ್ಲ, ಬೆಳೆಗಳನ್ನು ಮಾರಟ ಮಾಡಲು ಆಗುತ್ತಿಲ್ಲ ಎಂದು ಕಂಗಾಲಾಗಿದ್ದಾರೆ. ಅಲ್ಲದೆ, ತಾವು ಬೆಳೆದ ಬೆಳೆಯನ್ನು ತಾವೇ ನಾಶ ಮಾಡುತ್ತಿದ್ದಾರೆ.

ಟೊಮೋಟೊ, ಕಲ್ಲಂಗಡಿ, ದ್ರಾಕ್ಷಿ, ಸಪೋಟ ಬೆಳೆಗಾರರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬೆಳಗಾವಿಯಲ್ಲಿ ಹಾಲಿಗೆ ಸರಿಯಾದ ಬೆಲೆ ಸಿಕ್ಕಿಲ್ಲ ಎಂದು ಸಾವಿರಾರೂ ಲೀಟರ್ ಹಾಲನ್ನು ಕಾಲುವೆಗೆ ಚೆಲ್ಲಲಾಗಿದೆ.

ಕೊರೊನಾಭೀತಿ: ಹೆರಿಟೇಜ್ ಹಾಲಿನ ಬಗ್ಗೆ ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆಕೊರೊನಾಭೀತಿ: ಹೆರಿಟೇಜ್ ಹಾಲಿನ ಬಗ್ಗೆ ಆತಂಕ ಬೇಡ, ಸ್ವಚ್ಛತೆಗೆ ಆದ್ಯತೆ

ಬೆಳಗಾವಿ ರಾಯಬಾಗ ತಾಲೂಕಿನ ಪಾಲಭಾಂವಿಯಲ್ಲಿ ಗೌಳಿ ಸಮುದಾಯದ ಯುವಕರು ಹಾಲಿನ ಸಂಗ್ರಹ ಮಾಡುತ್ತಿದ್ದರು. ರೈತರಿಂದ ಹಾಲನ್ನು ಪಡೆದು ಬೇರೆ ಬೇರೆ ಕಡೆಗೆ ಅದನ್ನು ಸರಬರಾಜು ಮಾಡುತ್ತಿದ್ದರು. ಆದರೆ, ಈಗ ಲಾಕ್ ಡೌನ್‌ ಇರುವ ಕಾರಣ ಹಾಲಿನ ಸರಬರಾಜು ಮಾಡಲು ಆಗುತ್ತಿಲ್ಲ.

Belagavi Farmers Dump 1.5 Thousand Liters Of Milk To Canal

ಗೌಳಿ ಸಮುದಾಯದ ಯುವಕರು ಒಂದು ಲೀಟರ್‌ಗೆ 32 ರೂಪಾಯಿ ಕೊಟ್ಟು ರೈತರಿಂದ ಹಾಲನ್ನು ಖರೀದಿ ಮಾಡಿದ್ದಾರೆ. ಆದರೆ, ಈಗ ಅವರಿಂದ ಖರೀದಿ ಮಾಡುವ ಕಂಪನಿ ಕೇವಲ 10 ರೂಪಾಯಿಗೆ ಕೊಡಿ ಎಂದು ಕೇಳಿತ್ತಿದೆ. ಇದರಿಂದ ಬೇಸರಗೊಂಡ ಯುವಕರು ಹಾಲನ್ನು ಕಾಲುವೆಗೆ ಚೆಲ್ಲಿದ್ದಾರೆ.

ಕರ್ಫ್ಯೂ ನಡುವೆಯೇ ಚನ್ನಪಟ್ಟಣದಲ್ಲಿ ಹಾಲಿನ ಬೂತ್ ಗೆ ಬೆಂಕಿಕರ್ಫ್ಯೂ ನಡುವೆಯೇ ಚನ್ನಪಟ್ಟಣದಲ್ಲಿ ಹಾಲಿನ ಬೂತ್ ಗೆ ಬೆಂಕಿ

ತಮ್ಮ ಬಳಿ 1500ಕ್ಕೂ ಹೆಚ್ಚು ಲೀಟರ್ ಹಾಲು ಇದ್ದು, ಎಲ್ಲವನ್ನು ಘಟ್ಟಪ್ರಭಾ ಎಡದಂಡೆ ಕಾಲುವೆಗೆ ಸುರಿದಿದ್ದಾರೆ. ಈ ಮೂಲಕ ತಮ್ಮ ಆಕ್ರೋಶವನ್ನು ಯುವಕರು ಹೊರ ಹಾಕಿದ್ದಾರೆ

English summary
India Lockdown: Belagavi farmers dump 1.5 thousand liters of milk to canal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X