ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2005-06ರ ಮಳೆಗೆ ಬೆಳಗಾವಿಯಲ್ಲಿ ಆದ ಹಾನಿ ಪ್ರಮಾಣ 424 ಕೋಟಿಗೂ ಹೆಚ್ಚು

By ಅನಿಲ್ ಆಚಾರ್
|
Google Oneindia Kannada News

ಬೆಳಗಾವಿಯು ಈ ಬಾರಿಯ ಮಳೆಗೆ ಮತ್ತೊಮ್ಮೆ ಥರಗುಟ್ಟಿದೆ. ಈ ಹಿಂದೆ ಅಂದರೆ 2005-06ರಲ್ಲಿ ಬಿದ್ದ ಮಳೆಗೂ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಹಾನಿಯಾಗಿತ್ತು. ಈಗಿನ ಸಂದರ್ಭಕ್ಕೆ ಆಗ ಆದ ಹಾನಿಯ ಅಧಿಕೃತ ಲೆಕ್ಕಾಚಾರ ನಿಮ್ಮೆದುರು ಇಲ್ಲಿದೆ. ಇದು ಸರಕಾರದಿಂದಲೇ ಬಿಡುಗಡೆಯಾದ ತಾಲೂಕುವಾರು ನಷ್ಟ ಪ್ರಮಾಣದ ಲೆಕ್ಕಾಚಾರ.

ತಾಲೂಕು ಖಾಸಗಿ ಆಸ್ತಿ ಸಾರ್ವಜನಿಕ ಆಸ್ತಿ ಒಟ್ಟು ನಷ್ಟ
ಬೆಳಗಾವಿ 8.86 ಕೋಟಿ 7.31 ಕೋಟಿ 16.17 ಕೋಟಿ
ಹುಕ್ಕೇರಿ 4.44 ಕೋಟಿ 1.93 ಕೋಟಿ 6.37 ಕೋಟಿ
ಖಾನಾಪುರ್ 1.57 ಕೋಟಿ 3.69 ಕೋಟಿ 5.27 ಕೋಟಿ
ಬೈಲಹೊಂಗಲ 0.65 ಕೋಟಿ 2.96 ಕೋಟಿ 3.61 ಕೋಟಿ
ಗೋಕಾಕ್ 44.45 ಕೋಟಿ 3.52 ಕೋಟಿ 47.98 ಕೋಟಿ
ಸವದತ್ತಿ 0.35 ಕೋಟಿ 0.79 ಕೋಟಿ 1.15 ಕೋಟಿ
ರಾಮದುರ್ಗ 0.03 ಕೋಟಿ 1.53 ಕೋಟಿ 1.56 ಕೋಟಿ
ಚಿಕ್ಕೋಡಿ 97.32 ಕೋಟಿ 12.86 ಕೋಟಿ 110 ಕೋಟಿ
ರಾಯಭಾಗ 47.27 ಕೋಟಿ 6.18 ಕೋಟಿ 53.46 ಕೋಟಿ
Belagavi District Rain Havoc Caused More Than 424 Crore Loss In 2005- 06

ಬೆಳಗಾವಿ ಜಿಲ್ಲೆಯ ಎಲ್ಲ್ ತಾಲೂಕು ಸೇರಿ ಖಾಸಗಿ ಆಸ್ತಿ 374.72 ಕೋಟಿ ಹಾಗೂ ಸಾರ್ವಜನಿಕ ಆಸ್ತಿ 49.41 ಕೋಟಿ ಸೇರಿ ಒಟ್ಟು 424.14 ಕೋಟಿ ರುಪಾಯಿಯಷ್ಟು ನಷ್ಟವಾಗಿತ್ತು. ಇಲ್ಲಿ ಖಾಸಗಿ ಆಸ್ತಿ ಅಂದರೆ, ಮನೆಗಳ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಹಾನಿ ಆಗಿರುವುದು ಹಾಗೂ ಬೆಳೆ ನಷ್ಟ, ರಾಸುಗಳ ಹಾನಿ ಒಳಗೊಂಡಿದೆ.

ಬೆಳಗಾವಿಯಲ್ಲಿ ಭಯಂಕರ ಮಳೆ; ಚಿತ್ರ ನೋಡಿ...ಬೆಳಗಾವಿಯಲ್ಲಿ ಭಯಂಕರ ಮಳೆ; ಚಿತ್ರ ನೋಡಿ...

ಇನ್ನು ಸಾರ್ವಜನಿಕ ಆಸ್ತಿ ಅಂದರೆ ನೀರು ಸರಬರಾಜು ವ್ಯವಸ್ಥೆ, ರಸ್ತೆ, ಕಟ್ಟಡಗಳು, ಕಾಲುವೆ- ಟ್ಯಾಂಕ್ ಗಳು, ವಿದ್ಯುತ್ ಸರಬರಾಜು ಒಳಗೊಂಡಿರುತ್ತದೆ.

English summary
Rain havoc in Belagavi: Here is an official numbers, which discloses taluk wise rain loss caused during 2005- 06.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X