ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆತಂಕ ಮೂಡಿಸಿದ ಬೆಳಗಾವಿ ಜಿಲ್ಲಾ ಕೊರೊನಾ ವೈರಸ್ ವರದಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮೇ 26: ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕು ಬೆಂಬಿಡದೇ ಕಾಡುತ್ತಿದ್ದು, ಈವರೆಗೆ ಜಿಲ್ಲೆಯಲ್ಲಿ ಹೆಲ್ತ್ ಬುಲಿಟಿನ್ ಪ್ರಕಾರ 130 ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ಮಂಗಳವಾರ ಬರೋಬ್ಬರಿ 1,009 ಜನರ ವರದಿ ಬರಬೇಕಿದೆ.

ಬೆಳಗಾವಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಈವರೆಗೆ 10,293 ಜನರ ಮೇಲೆ ನಿಗಾ ಇಟ್ಟಿದ್ದು, ಇದರಲ್ಲಿ ಹಲವಾರು ಜನ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನೂ ಸಾವಿರಾರು ಜನ ಕ್ವಾರಂಟೈನ್ ಅವಧಿ ಮುಗಿಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಕ್ವಾರೆಂಟೈನ್ ಗೆ ವಿರೋಧಿಸಿದ ನಾಲ್ವರು ವಿದೇಶಿಗರಲ್ಲಿ ಕೊರೊನಾ ವೈರಸ್!ಕ್ವಾರೆಂಟೈನ್ ಗೆ ವಿರೋಧಿಸಿದ ನಾಲ್ವರು ವಿದೇಶಿಗರಲ್ಲಿ ಕೊರೊನಾ ವೈರಸ್!

ಬೆಳಗಾವಿ ಜಿಲ್ಲೆಯಲ್ಲಿ 130 ಕೊರೊನಾ ವೈರಸ್ ಸೋಂಕಿತರ ಪೈಕಿ 8 ಜನ ಬಾಗಲಕೋಟೆ ಜಿಲ್ಲೆಯವರಾಗಿದ್ದಾರೆ. ಬೆಳಗಾವಿಯ 122 ಸೋಂಕಿತರ ಪೈಕಿ ಈವರೆಗೆ 93 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಬ್ಬರು ಮೃತ ಪಟ್ಟಿದ್ದು. ಜಿಲ್ಲೆಯಲ್ಲಿ ಕೇವಲ 28 ಜನರಲ್ಲಿ ಸೋಂಕು ಪ್ರಕರಣಗಳು ಸಕ್ರೀಯವಾಗಿದೆ.

Belagavi District Administration Awaits Report Of 1000 People Today

ಜಿಲ್ಲಾ ಆರೋಗ್ಯ ಇಲಾಖೆಯು ಹೊರ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಗೆ ಆಗಮಿಸಿರುವ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಒಟ್ಟು 1,009 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದು, ಬೆಳಗಾವಿ ಜಿಲ್ಲಾಡಳಿತ ಈ ಎಲ್ಲ ಜನರ ವರದಿಗಾಗಿ ಕಾಯುತ್ತಿದೆ.

English summary
Thousands of throat samples were sent for examination in Belagavi district, pending a Covid-19 report of 1,009 people on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X