ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋರಾಟಕ್ಕೆ ಜಯ, ಮೂಡಲಗಿ ತಾಲೂಕು ರಚನೆಗೆ ಸಂಪುಟ ಒಪ್ಪಿಗೆ

By Sachhidananda Acharya
|
Google Oneindia Kannada News

ಬೆಂಗಳೂರು, ಅಕ್ಟೋಬರ್ 11: ಕೊನೆಯ ಘಳಿಗೆಯಲ್ಲಿ ನೂತನ ತಾಲೂಕುಗಳ ಪಟ್ಟಿಯಿಂದ ಮೂಡಲಗಿ ಕೈಬಿಟ್ಟಿರುವುದನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗೆ ಕೊನೆಗೂ ರಾಜ್ಯ ಸರಕಾರ ಮಣಿದಿದೆ.

ಇಂದು ನಡೆದ ಸಂಪುಟ ಸಭೆಯಲ್ಲಿ ಮೂಡಲಗಿ ತಾಲೂಕು ರಚನೆಗೆ ಸರಕಾರ ಒಪ್ಪಿಗೆ ಸೂಚಿಸಿದೆ.

"ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮೂಡಲಗಿ ಪಟ್ಟಣವನ್ನು ಹೊಸ ತಾಲೂಕನ್ನಾಗಿ ರಚಿಸಲು ಸಂಪುಟವು ತೀರ್ಮಾನಿಸಿದೆ," ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದರು.

Belagavi: Cabinet meeting approved for Moodalagi taluk

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಪಟ್ಟಣ ಮೂಡಲಗಿ ನೂತನ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಆದರೆ, ಅಧಿಕೃತ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡುವಾಗ ಮಾತ್ರ ಮೂಡಲಗಿ ಹೆಸರು ನಾಪತ್ತೆಯಾಗಿತ್ತು.

ಇದರಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ನಿರಂತರ ತಿಂಗಳುಗಟ್ಟಲೆ ಇಲ್ಲಿನ ಕಲ್ಮೇಶ್ವರ ವೃತ್ತದಲ್ಲಿ 'ಮೂಡಲಗಿ ತಾಲೂಕು ಹೋರಾಟ ಸಮಿತಿ' ಹೆಸರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರು.

ಇದೀಗ ಪ್ರತಿಭಟನೆಗೆ ರಾಜ್ಯ ಸರಕಾರ ಮಣಿದಿದ್ದು ಮೂಡಲಗಿ ತಾಲೂಕು ರಚನೆಗೆ ಒಪ್ಪಿಗೆ ಸೂಚಿಸಿದೆ.

English summary
Belagavi: State government approved to form Mudalagi Taluk in today's cabinet meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X