ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬೆಳಗಾವಿ ವಿವಾದ ಬಗೆಹರಿಯಲಿ, ಮರಾಠಿಗರಂತೆ ನಿರ್ಣಯ ಬರಲಿ'

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್. 10 : 'ಆದಷ್ಟು ಬೇಗ ಮರಾಠಿಗರ ಇಚ್ಛೆಯಂತೆ ಬೆಳಗಾವಿ ಗಡಿ ವಿವಾದ ಇತ್ಯರ್ಥವಾಗಲಿ. ಮರಾಠಿಗರ ಪರವಾಗಿ ನಿರ್ಣಯ ಬರುವಂತೆ ದೇವರು ಆಶೀರ್ವದಿಸಲಿ' ಎಂದು ಬಿಜೆಪಿ ಶಾಸಕ ಸಂಜಯ ಪಾಟೀಲ ಕರ್ನಾಟಕ ವಿರೋಧಿ ಹೇಳಿಕೆ ನೀಡಿದರು.

 ಸಂಜಯ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಸಂಜಯ ಪಾಟೀಲ್ ವಿರುದ್ಧ ಪ್ರಕರಣ ದಾಖಲು

ಭಾನುವಾರ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ನಡೆದ 12ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ ಅವರು, 'ನಾನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜನಿಸಿದ್ದೇನೆ. ನನಗೆ ತುಂಬಾ ಮರಾಠಿ ಪ್ರೇಮವಿದೆ' ಎಂದರು.

 ಬೆಳಗಾವಿ ಗಡಿ ವಿವಾದಕ್ಕೆ ತುಪ್ಪ ಸುರಿದ ಉದ್ದವ್ ಠಾಕ್ರೆ ಬೆಳಗಾವಿ ಗಡಿ ವಿವಾದಕ್ಕೆ ತುಪ್ಪ ಸುರಿದ ಉದ್ದವ್ ಠಾಕ್ರೆ

Sanjay Patil

'ನನ್ನ ತಾಯಿ ಮರಾಠಿ, ಹೀಗಾಗಿ ನಾನು ಶಾಸಕನಾಗಿ ಸಾಹಿತ್ಯ ಸಮ್ಮೇಳನಕ್ಕೆ ಬಂದಿಲ್ಲ. ಮರಾಠಿಗನಾಗಿ ಬಂದಿದ್ದೇನೆ. ನನ್ನ ವೈಯಕ್ತಿಕ ಇಚ್ಛೆಯಿದೆ ಗಡಿ ವಿಚಾರ ಬೇಗ ಬಗೆಹರಿಯಲಿ. ಗಡಿ ಮತ್ತು ಮರಾಠಿಗರ ವಿಚಾರ ಬಿಸಿ ತುಪ್ಪದಂತಿದೆ. ನುಂಗು ಹಾಗಿಲ್ಲ ಉಗುಳುವ ಹಾಗಿಲ್ಲ. ಮರಾಠಿಗರ ಪರ ಮಾತಾನಾಡದೇ ಇರಲು ಆಗುವುದಿಲ್ಲ' ಎಂದು ಹೇಳಿದರು.

 ಬೆಳಗಾವಿ:ಮಹಾಮೇಳಾವನಲ್ಲಿ ಭಾಗವಹಿಸಿದ್ದ ಮರಾಠಿ ಪುಂಡರ ಮೇಲೆ FIR ಬೆಳಗಾವಿ:ಮಹಾಮೇಳಾವನಲ್ಲಿ ಭಾಗವಹಿಸಿದ್ದ ಮರಾಠಿ ಪುಂಡರ ಮೇಲೆ FIR

'ಮರಾಠಿ ಭೂಮಿಯಲ್ಲಿ ಜನಿಸಿದ್ದೇನೆ. ಆದರೆ, ರಾಷ್ಟ್ರೀಯ ಪಕ್ಷದಲ್ಲಿ ಇರುವುದರಿಂದ ಕೆಲವು ನಿರ್ಬಂಧವಿದೆ. ಗಡಿ ವಿವಾದ ಇತ್ಯರ್ಥವಾಗಲಿ. ಮರಾಠಿಗರ ಪರವಾಗಿ ನಿರ್ಣಯ ಬರುವಂತೆ ದೇವರು ಆಶೀರ್ವದಿಸಲಿ' ಎಂದು ಹೇಳಿ ವಿವಾದ ಹುಟ್ಟುಹಾಕಿದ್ದಾರೆ.

English summary
Belagavi rural constituency BPP MLA Sanjay B. Patil sparked controversy by his statement about Belagavi border dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X