ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ನ.1 ರಿಂದ ಕಾಯಂ

|
Google Oneindia Kannada News

ಬೆಳಗಾವಿ, ಆಗಸ್ಟ್ 18 : ಬೆಳಗಾವಿಯ ಜನರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಬೆಳಗಾವಿ-ಬೆಂಗಳೂರು ನಡುವಿನ ಸೂಪರ್ ಫಾಸ್ಟ್ ರೈಲು ನವೆಂಬರ್‌ 1 ರಿಂದ ಕಾಯಂ ಆಗಿ ಸಂಚಾರ ನಡೆಸಲಿದೆ.

ಜೂನ್ 29ರಂದು ಆರಂಭವಾದ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ತಿಂಗಳ ಪ್ರಾಯೋಗಿಕವಾಗಿದ್ದ ರೈಲನ್ನು ಈಗ ಅಕ್ಟೋಬರ್ ಅಂತ್ಯದ ತನಕ ವಿಸ್ತರಣೆ ಮಾಡಲಾಗಿದೆ.

ಬೆಳಗಾವಿ-ಬೆಂಗಳೂರು ವಿಶೇಷ ರೈಲು ಅಕ್ಟೋಬರ್ ತನಕ ವಿಸ್ತರಣೆಬೆಳಗಾವಿ-ಬೆಂಗಳೂರು ವಿಶೇಷ ರೈಲು ಅಕ್ಟೋಬರ್ ತನಕ ವಿಸ್ತರಣೆ

ನವೆಂಬರ್ 1 ರಿಂದ ಈ ರೈಲನ್ನು ಕಾಯಂಗೊಳಿಸಲು ನೈಋತ್ಯ ರೈಲ್ವೆ ತೀರ್ಮಾನ ಕೈಗೊಂಡಿದೆ. ಶೀಘ್ರದಲ್ಲಿಯೇ ಈ ಕುರಿತು ಆದೇಶ ಪ್ರಕಟವಾಗಲಿದೆ. ಇದರಿಂದಾಗಿ ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಹಾಯಕವಾಗಲಿದೆ.

ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಸೇರ್ಪಡೆಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಸೇರ್ಪಡೆ

Belagavi Bengaluru Tatkal Super Fast Train Permanent From November 1

ಜೂನ್ 29ರಂದು ರೈಲು ಸೇವೆ ಆರಂಭವಾದಾಗ 14 ಬೋಗಿ ಇತ್ತು. ಪ್ರತಿದಿನ ಹೆಚ್ಚಿನ ಸೀಟುಗಳಿಗೆ ಬೇಡಿಕೆ ಬರುತ್ತಿತ್ತು. ಆದ್ದರಿಂದ, ಹೆಚ್ಚುವರಿಯಾಗಿ ಫಸ್ಟ್ ಕ್ಲಾಸ್ ಎಸಿ ಕೋಚ್ ಅಳವಡಿಕೆ ಮಾಡಿ 15 ಬೋಗಿಯನ್ನು ಮಾಡಲಾಗಿತ್ತು.

ಬೆಳಗಾವಿ-ಬೆಂಗಳೂರು ರೈಲು ಸಂಚಾರಕ್ಕೆ ಹಸಿರು ನಿಶಾನೆಬೆಳಗಾವಿ-ಬೆಂಗಳೂರು ರೈಲು ಸಂಚಾರಕ್ಕೆ ಹಸಿರು ನಿಶಾನೆ

ಈಗ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ 15 ಕೋಚ್‌ಗಳಿದ್ದು, 868 ಸೀಟುಗಳು ಲಭ್ಯವಿದೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಜನರಿಗೆ ಈ ರೈಲಿನಿಂದ ಬಹಳಷ್ಟು ಅನುಕೂಲವಾಗಿದೆ.

ಬೆಳಗಾವಿ-ಬೆಂಗಳೂರು ನಡುವಿನ ಸುಮಾರು 610 ಕಿ. ಮೀ. ದೂರವನ್ನು ಈ ರೈಲು 10 ಗಂಟೆಗಳಲ್ಲಿ ಕ್ರಮಿಸಲಿದೆ. ಆದ್ದರಿಂದ ಜನರು ಬಸ್‌ಗಳಿಗಿಂತ ಈ ರೈಲಿನ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದಾರೆ.

ಬೆಳಗಾವಿಯಿಂದ ಹೊರಡುವ ರೈಲು ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ತುಮಕೂರು, ಯಶವಂತಪುರ ಮಾರ್ಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಆಗಮಿಸುತ್ತದೆ.

English summary
Due to heavy demand and good response from passengers Belagavi-Bengaluru tatkal super fast train service made permanent from November 1, 2019. South Western Railway will issue order soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X