ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಳುತ್ತಾ ಸದನದಿಂದ ಹೊರನಡೆದ ಬಸವರಾಜ ಹೊರಟ್ಟಿ, ಏನು ಕಾರಣ?

|
Google Oneindia Kannada News

ಬೆಳಗಾವಿ, ಡಿಸೆಂಬರ್ 12: ವಿಧಾನಪರಿಷತ್‌ ಹಂಗಾಮಿ ಸಭಾಪತಿ, ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ಭಾವುಕರಾಗಿ ಅಳುತ್ತಾ ಸದನದಿಂದ ಹೊರನಡೆದ ಘಟನೆ ಇಂದು ನಡೆಯಿತು.

ಸತೀಶ್ ಜಾರಕಿಹೊಳಿ-ಶ್ರೀರಾಮುಲು ಗುಪ್ತ ಮಾತುಕತೆ, ಅನುಮಾನ ಉಲ್ಬಣ ಸತೀಶ್ ಜಾರಕಿಹೊಳಿ-ಶ್ರೀರಾಮುಲು ಗುಪ್ತ ಮಾತುಕತೆ, ಅನುಮಾನ ಉಲ್ಬಣ

ಹಂಗಾಮಿ ಸಭಾಪತಿ ಆಗಿದ್ದ ಅವರು ಸಭಾಪತಿಯಾಗಿ ಆಯ್ಕೆ ಆಗುವ ಆಸೆ ಹೊಂದಿದ್ದರು ಆದರೆ ಇಂದು ಕಾಂಗ್ರೆಸ್‌ ಪಕ್ಷವು ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿ ಆಗಿ ಆಯ್ಕೆ ಆದ ಕೂಡಲೇ ಬಸವರಾಜ ಹೊರಟ್ಟಿ ಅವರು ಭಾವುಕರಾದರು. ಬರುತ್ತಿದ್ದ ಅಳುವನ್ನು ತಡೆದುಕೊಳ್ಳಲು ಯತ್ನಿಸಿ ಸದನದಿಂದ ಹೊರನಡೆದರು.

ಬೆಳಗಾವಿ ಅಧಿವೇಶನದಲ್ಲಿ ಋಣಮುಕ್ತ ಕಾಯಿದೆ ಮಂಡನೆಗೆ ಸಿದ್ಧತೆ ಬೆಳಗಾವಿ ಅಧಿವೇಶನದಲ್ಲಿ ಋಣಮುಕ್ತ ಕಾಯಿದೆ ಮಂಡನೆಗೆ ಸಿದ್ಧತೆ

ಬಸವರಾಜಹೊರಟ್ಟಿ ಅವರು ಜೆಡಿಎಸ್‌ನ ಹಿರಿಯ ಮುಖಂಡರು ಅವರನ್ನು ಪರಿಷತ್‌ ಸಭಾಪತಿ ಮಾಡಲಾಗುತ್ತದೆ ಎಂಬ ಸುದ್ದಿ ಇತ್ತು. ಸಚಿವ ಸ್ಥಾನ ತಪ್ಪಿಸಿ ಅವರನ್ನು ಹಂಗಾಮಿ ಸಭಾಪತಿ ಮಾಡಲಾಗಿತ್ತು. ಅದೇ ಹುದ್ದೆಯಲ್ಲಿ ಮುಂದುವರೆಸಲಾಗುತ್ತದೆ ಎನ್ನಲಾಗಿತ್ತು ಆದರೆ ಅದಾಗಿಲ್ಲ ಹಾಗಾಗಿ ಬಸವರಾಜ ಹೊರಟ್ಟಿ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

Basavraj Horatti gets emotional in Belgaum assembly

ಬಸವರಾಜ ಹೊರಟ್ಟಿ ಅವರಿಗೆ ತೆರವಾಗಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಹಿಂದೆ ಸಹ ಅವರು ಈ ಹುದ್ದೆಯನ್ನು ನಿಭಾಯಿಸಿದ್ದಾರೆ. ಬಿಎಸ್‌ಪಿಯ ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಈ ಸ್ಥಾನ ಖಾಲಿಯಿದೆ.

1512 ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕ್ರಮ: ಕುಮಾರಸ್ವಾಮಿ 1512 ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕ್ರಮ: ಕುಮಾರಸ್ವಾಮಿ

ಎಸ್‌ಆರ್‌.ಪಾಟೀಲ್ ಅವರು ಸಭಾಪತಿ ಆಗಲು ಸಜ್ಜಾಗಿದ್ದ ಹೊತ್ತಿನಲ್ಲಿ ಕಾಂಗ್ರೆಸ್‌ನಲ್ಲಿ ಒಳರಾಜಕೀಯ ನಡೆದು ಯಾವುದರ ಆಕಾಂಕ್ಷೆ ಇಲ್ಲದೇ ಇದ್ದ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ನಾಮತ್ರ ಸಲ್ಲಿಸಲಾಯಿತು. ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವರೇ ಪರಿಷತ್ ಸಭಾಪತಿ ಆಗಿ ಆಯ್ಕೆ ಆದರು.

English summary
Provisional Speaker Basavraj Horatti gets emotional in Legislative council. Congress Prathap Chandra Shetty selected as speaker of Legislative council so he gets unhappy and emotional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X