ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಲಕೊಟ್ಟ ಲಕ್ಷ್ಮಣ ಸವದಿ ಸಂಧಾನ; ಜೆಡಿಎಸ್‌ಗೆ ಹಿನ್ನಡೆ!

|
Google Oneindia Kannada News

Recommended Video

Athani seat JD(S) candidate Guru Dasyala set to withdraw nomination | Oneindia Kannada

ಬೆಳಗಾವಿ, ನವೆಂಬರ್ 19 : ಅಥಣಿ ಕ್ಷೇತ್ರದ ಉಪ ಚುನಾವಣೆ ಚಿತ್ರಣ ಬದಲಾಗಲಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಂಧಾನ ಫಲಕೊಡುವ ನಿರೀಕ್ಷೆ ಇದ್ದು, ಜೆಡಿಎಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.

15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮೂರು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿತ್ತು. ಅದರಲ್ಲೂ ಚುನಾವಣೆ ಘೋಷಣೆಯಾದ ಬಳಿಕ ಹೆಚ್ಚು ಚರ್ಚೆಗೆ ಒಳಗಾಗಿದ್ದ ಕ್ಷೇತ್ರ ಬೆಳಗಾವಿ ಜಿಲ್ಲೆಯ ಅಥಣಿ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ.

ಉಪ ಚುನಾವಣೆ; ಬಿಜೆಪಿಗೆ ಕಗ್ಗಂಟಾದ ಮೂರು ಕ್ಷೇತ್ರದ ಬಂಡಾಯಉಪ ಚುನಾವಣೆ; ಬಿಜೆಪಿಗೆ ಕಗ್ಗಂಟಾದ ಮೂರು ಕ್ಷೇತ್ರದ ಬಂಡಾಯ

ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವರಾಗಿರುವ ಲಕ್ಷ್ಮಣ ಸವದಿಗೆ ಅಥಣಿ ಉಪ ಚುನಾವಣೆ ಟಿಕೆಟ್ ಸಿಗಲಿದೆ ಎಂಬ ಲೆಕ್ಕಾಚಾರ ತಪ್ಪಾಗಿತ್ತು. ಮಹೇಶ್ ಕುಮಟಳ್ಳಿ ಉಪ ಚುನಾವಣಾ ಕಣಕ್ಕಿಳಿಯಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.

ಅಥಣಿ ಉಪ ಚುನಾವಣೆ; ಲಕ್ಷ್ಮಣ ಸವದಿಗೆ ಇಲ್ಲ ಬಿಜೆಪಿ ಟಿಕೆಟ್!ಅಥಣಿ ಉಪ ಚುನಾವಣೆ; ಲಕ್ಷ್ಮಣ ಸವದಿಗೆ ಇಲ್ಲ ಬಿಜೆಪಿ ಟಿಕೆಟ್!

ಲಕ್ಷ್ಮಣ ಸವದಿಗೆ ಉಪ ಚುನಾವಣೆ ಟಿಕೆಟ್ ಕೈ ತಪ್ಪಿತ್ತು. ಆದರೆ, ಅವರ ಆಪ್ತರಾದ ಗುರು ದಾಶ್ಯಾಳ ಜೆಡಿಎಸ್ ಸೇರಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಗೆ ಬಿಸಿ ತುಪ್ಪವಾಗಿತ್ತು. ಈಗ ಲಕ್ಷ್ಮಣ ಸವದಿ ನಡೆಸಿದ ಸಂಧಾನ ಫಲ ನೀಡಿದೆ.

ಅಥಣಿ ಕ್ಷೇತ್ರ ಪರಿಚಯ; ಉಪಚುನಾವಣೆಯಲ್ಲಿ ಟಿಕೆಟ್ ಯಾರಿಗೆ?ಅಥಣಿ ಕ್ಷೇತ್ರ ಪರಿಚಯ; ಉಪಚುನಾವಣೆಯಲ್ಲಿ ಟಿಕೆಟ್ ಯಾರಿಗೆ?

ಅಥಣಿಯಲ್ಲಿ ಆಗಿದ್ದೇನು?

ಅಥಣಿಯಲ್ಲಿ ಆಗಿದ್ದೇನು?

ಅಥಣಿ ಕ್ಷೇತ್ರದ ಬಿಜೆಪಿ ಟಕೆಟ್ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೈ ತಪ್ಪಿತ್ತು. ಮಹೇಶ್ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾದರು. ಆದರೆ, ಲಕ್ಷ್ಮಣ ಸವದಿ ಆಪ್ತರಾದ ಗುರು ದಾಶ್ಯಾಳ ಜೆಡಿಎಸ್ ಸೇರಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಇದರಿಂದಾಗಿ ಬಿಜೆಪಿಗೆ ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಟ್ಟಿತ್ತು. ಮಹೇಶ್ ಕುಮಟಳ್ಳಿಗೆ ಹಿನ್ನಡೆ ಆಗುವ ಸಾಧ್ಯತೆ ದಟ್ಟವಾಗಿತ್ತು.

ಲಕ್ಷ್ಮಣ ಸವದಿ ಸಂಧಾನ ಸಫಲ

ಲಕ್ಷ್ಮಣ ಸವದಿ ಸಂಧಾನ ಸಫಲ

ಲಕ್ಷ್ಮಣ ಸವದಿ ಗುರು ದಾಶ್ಯಾಳ ಜೊತೆ ನಡೆಸಿದ ಸಂಧಾನ ಫಲ ಕೊಟ್ಟಿದೆ. ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯರಾದ ಗುರು ದಾಶ್ಯಾಳ ಜೆಡಿಎಸ್ ಸೇರಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಈಗ ನಾಮಪತ್ರ ವಾಪಸ್ ಪಡೆಯಲು ಮುಂದಾಗಿದ್ದಾರೆ.

ಲಕ್ಷ್ಮಣ ಸವದಿ ಹೇಳಿದ್ದೇನು?

ಲಕ್ಷ್ಮಣ ಸವದಿ ಹೇಳಿದ್ದೇನು?

ಗುರು ದಾಶ್ಯಾಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಲಕ್ಷ್ಮಣ ಸವದಿ, "ಗುರು ದಾಶ್ಯಾಳ ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಬುಧವಾರ ಅವರು ತಮ್ಮ ತೀರ್ಮಾನವನ್ನು ಪ್ರಕಟಿಸಲಿದ್ದಾರೆ" ಎಂದು ಹೇಳಿದರು. ಇದರಿಂದಾಗಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ಅಥಣಿಯಲ್ಲಿ ಜೆಡಿಎಸ್ ಬಲವೇನು?

ಅಥಣಿಯಲ್ಲಿ ಜೆಡಿಎಸ್ ಬಲವೇನು?

ಗುರು ದಾಶ್ಯಾಳ ನಾಮಪತ್ರವನ್ನು ವಾಪಸ್ ಪಡೆದರೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗಲಿದೆ. ಅಥಣಿ ಕ್ಷೇತ್ರದಲ್ಲಿ ಜೆಡಿಎಸ್ ಹೆಚ್ಚಿನ ಪ್ರಭಾವವನ್ನು ಹೊಂದಿಲ್ಲ. 2018ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗಿರೀಶ್ ಭುಟ್ಟಳ್ಳಿ ಪಡೆದ ಮತ 3,381 ಮಾತ್ರ.

English summary
After meeting with Laxman Savadi Athani seat JD(S) candidate Guru Dasyala set to withdraw nomination for the by elections. Athani seat by elections will be held on December 5, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X