ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ತಿ ವಿವರ; ಕೋಟಿ ಕೋಟಿ ಹಣ ಇದ್ದರೂ ಬಂಗಾರ ಮಾತ್ರ ಇಲ್ಲ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಕೋಟಿ ಕೋಟಿ ಆಸ್ತಿ ಇದೆ ಆದ್ರೆ ಒಂದು ಚೂರು ಬಂಗಾರ ಇಲ್ಲ..? |Lakshmi Hebbalkar | Oneindia Kannada

ಬೆಳಗಾವಿ, ಸೆಪ್ಟೆಂಬರ್ 20: ಡಿ.ಕೆ ಶಿವಕುಮಾರ್ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಂಗಳವಾರ ಇಡಿ ನೋಟಿಸ್ ನೀಡಿತ್ತು. ಅದರಂತೆ ಸೆಪ್ಟಂಬರ್ 19ರಂದು ವಿಚಾರಣೆಗೆ ಬರಲು ಸೂಚಿಸಿದ್ದು, ಇಡಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ತಿಳಿಸಿದ್ದರು. ಅದರಂತೆ ನಿನ್ನೆ ಇಡಿ ವಿಚಾರಣೆಗೂ ಹಾಜರಾಗಿದ್ದರು.

ಈ ನಡುವೆ ಡಿಕೆಶಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಕೋಟಿ ಕೋಟಿ ರೂಪಾಯಿ ವರ್ಗಾವಣೆಯಾಗಿರುವ ಕುರಿತು ಮಾಹಿತಿ ತಿಳಿದುಬಂದಿತ್ತು. ಹೆಬ್ಬಾಳ್ಕರ್ ತಾಯಿ, ಸಹೋದರನ ಹೆಸರಿನಲ್ಲಿ 49 ಕೋಟಿ ಠೇವಣಿ ಇರುವುದಾಗಿಯೂ ತಿಳಿದುಬಂದಿತ್ತು. ಬೆಳಗಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಹಣ ವರ್ಗಾವಣೆ ಆಗಿರುವ ಮಾಹಿತಿ ಹರಿದಾಡುತ್ತಿತ್ತು. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಳಿ ಇರುವ ಆಸ್ತಿಯ ಮೌಲ್ಯದತ್ತ ಎಲ್ಲರ ಚಿತ್ತವೂ ಹೋಗಿದೆ.

ಮನಿ ಲಾಂಡ್ರಿಂಗ್ ಕೇಸ್: ಡಿಕೆಶಿ ಆಪ್ತವಲಯದ ಬೆಳಗಾವಿ ಶಾಸಕಿ ಲಕ್ಷ್ಮಿಗೆ 'ಇಡಿ' ಸಮನ್ಸ್ಮನಿ ಲಾಂಡ್ರಿಂಗ್ ಕೇಸ್: ಡಿಕೆಶಿ ಆಪ್ತವಲಯದ ಬೆಳಗಾವಿ ಶಾಸಕಿ ಲಕ್ಷ್ಮಿಗೆ 'ಇಡಿ' ಸಮನ್ಸ್

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಬ್ಬಾಳ್ಕರ್ 2018ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರವನ್ನು ಹೆಬ್ಬಾಳ್ಕರ್ ಸಲ್ಲಿಸಿದ್ದರು. ಅದರಂತೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬಳಿ 10 ಕೋಟಿ ರೂಪಾಯಿ ಚರಾಸ್ತಿ ಹಾಗೂ 17.49 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.

 17.49 ಕೋಟಿ ರೂಪಾಯಿ ಸ್ಥಿರಾಸ್ತಿ

17.49 ಕೋಟಿ ರೂಪಾಯಿ ಸ್ಥಿರಾಸ್ತಿ

ಇದರೊಂದಿಗೆ ನಗರದ ಎಸ್‌ಸಿ ಮೋಟರ್ಸ್ ಬಳಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಖಾನಾಪುರ ತಾಲೂಕಿನ ಬರಗಾಂವದಲ್ಲಿ ಪತಿ ಹಾಗೂ ಪತ್ನಿ ಮಧ್ಯೆ ಇಬ್ಭಾಗ ಮಾಡಿದ ತಲಾ 7.30 ಎಕರೆ ಕೃಷಿ ಭೂಮಿ ಇದೆ. ಲಕ್ಷ್ಮಿ ಹೆಬ್ಬಾಳಕರ್ ಅವರ ಬಳಿ 17.49 ಕೋಟಿ ರೂ. ಸ್ಥಿರಾಸ್ತಿ ಇದ್ದರೆ, ಪತಿ 17 ಲಕ್ಷ ರೂ. ಹಾಗೂ ಮಗ ಮೃನಾಳ ಹೆಸರಿನಲ್ಲಿ 1.50 ಕೋಟಿ ರೂ. ಸ್ಥಿರಾಸ್ತಿ ಇದೆ.

 ನಾಲ್ಕು ವರ್ಷದಲ್ಲಿ ಆಸ್ತಿಯಲ್ಲಿ 19 ಕೋಟಿ ಹೆಚ್ಚಳ

ನಾಲ್ಕು ವರ್ಷದಲ್ಲಿ ಆಸ್ತಿಯಲ್ಲಿ 19 ಕೋಟಿ ಹೆಚ್ಚಳ

ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಮಾಹಿತಿಯಂತೆ ಅವರ ಬಳಿ ಆಸ್ತಿಗಿಂತ ಸಾಲವೇ ಹೆಚ್ಚು. 7.56 ಕೋಟಿ ರೂ. ಸಾಲ ಅವರಿಗಿದೆ. ಮಗ ಮೃಣಾಲ ಕೂಡ 3.79 ಕೋಟಿ ರೂ. ಸಾಲ ಹೊಂದಿದ್ದಾರೆ. ಆದರೆ ಸಾಲ ಇದ್ದರೂ ಆಸ್ತಿ ಮಾತ್ರ ವರ್ಷವರ್ಷಕ್ಕೂ ಹೆಚ್ಚುತ್ತಲೇ ಹೋಗಿದೆ. ಹೆಬ್ಬಾಳ್ಕರ್ ಆಸ್ತಿಯಲ್ಲಿ ನಾಲ್ಕು ವರ್ಷದಲ್ಲಿ 19 ಕೋಟಿ ಹೆಚ್ಚಳವಾಗಿರುವುದು ತಿಳಿದುಬಂದಿದೆ.

ಇ.ಡಿಯಿಂದ ಮತ್ತೊಂದು ಬಾಂಬ್: ಡಿಕೆ ಶಿವಕುಮಾರ್ ಮಾವನಿಗೆ ಸಮನ್ಸ್‌ಇ.ಡಿಯಿಂದ ಮತ್ತೊಂದು ಬಾಂಬ್: ಡಿಕೆ ಶಿವಕುಮಾರ್ ಮಾವನಿಗೆ ಸಮನ್ಸ್‌

ಸುಮಾರು 8 ಕೋಟಿವರೆಗೂ ಸಾಲ

ಸುಮಾರು 8 ಕೋಟಿವರೆಗೂ ಸಾಲ

ಲಕ್ಷ್ಮೀ ಹೆಬ್ಬಾಳ್ಕರ್ ಅವರು 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರಗಿಂತಲೂ ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ಚರಾಸ್ತಿ ಸುಮಾರು 8 ಕೋಟಿ ರೂ.ವರೆಗೆ ಹೆಚ್ಚಾಗಿದೆ. ಆಗ ಕೇವಲ 84.31 ಲಕ್ಷ ರೂ. ಚರಾಸ್ತಿ ಇತ್ತು. ಸ್ಥಿರಾಸ್ತಿ ಈಗ 17.49 ಕೋಟಿ ರೂ.ಗೆ ಹೆಚ್ಚಾಗಿದೆ. ಆಗ 12 ಲಕ್ಷ ರೂ. ಸಾಲ ಪಡೆದಿದ್ದ ಹೆಬ್ಬಾಳ್ಕರ್ ಅವರ ಮೇಲೆ ಈಗ ಸುಮಾರು 8 ಕೋಟಿ ರೂಪಾಯಿವರೆಗೂ ಸಾಲ ಇದೆ.

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?

 ಕೋಟಿ ಕೋಟಿ ಹಣ ಇದ್ದರೂ ಬಂಗಾರ ಮಾತ್ರ ಇಲ್ಲ

ಕೋಟಿ ಕೋಟಿ ಹಣ ಇದ್ದರೂ ಬಂಗಾರ ಮಾತ್ರ ಇಲ್ಲ

ಕೋಟಿ ಕೋಟಿ ಆಸ್ತಿಯಿದ್ದರೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹತ್ತಿರ ಬಂಗಾರ ಮಾತ್ರ ಇಲ್ಲ. ದಾಖಲಾತಿಯಲ್ಲಿ ಬಂಗಾರದ ಒಡವೆ, ಆಭರಣ ಕುರಿತು ಯಾವುದೇ ಮಾಹಿತಿಯೂ ಇಲ್ಲ. ಹೀಗಾಗಿ ಈ ಬಗ್ಗೆ ಅನುಮಾನವೂ ವ್ಯಕ್ತವಾಗಿದೆ.

English summary
DK Shivakumar aide Belagavi rural MLA Lakshmi Hebbalkar gets ED summons on Tuesday (Sept 17) to appear before Delhi ED office in relation to DK Shivakumar money laundering case. On sep 19 Hebbalkar attended the ed investigation. Here is a asset details of Belagavi MLA Lakshmi Hebbalkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X