ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ; ವಿಧಾನ ಪರಿಷತ್‌ನ 15 ಕಾಂಗ್ರೆಸ್ ಸದಸ್ಯರು ಅಮಾನತು

|
Google Oneindia Kannada News

ಬೆಳಗಾವಿ, ಡಿಸೆಂಬರ್ 15; ಬೆಳಗಾವಿಯಲ್ಲಿ ಕರ್ನಾಟಕ ವಿಧಾನಸಭೆಯ 3ನೇ ದಿನದ ಅಧಿವೇಶನ ನಡೆಯುತ್ತಿದೆ. ಒಂದು ದಿನದ ಮಟ್ಟಿಗೆ ಕಾಂಗ್ರೆಸ್‌ನ 15 ವಿಧಾನ ಪರಿಷತ್ ಸದಸ್ಯರನ್ನು ಅಮಾನತು ಮಾಡಲಾಗಿದೆ.

ಬುಧವಾರ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪರಿಷತ್ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಸೇರಿದಂತೆ 15 ಮಂದಿ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದರು.

Infographic; ವಿಧಾನ ಪರಿಷತ್‌ನಲ್ಲಿ ಪಕ್ಷಗಳ ಬಲಾಬಲInfographic; ವಿಧಾನ ಪರಿಷತ್‌ನಲ್ಲಿ ಪಕ್ಷಗಳ ಬಲಾಬಲ

ಕಲಾಪ ಆರಂಭಗೊಂಡಾಗ ಕಾಂಗ್ರೆಸ್ ಸದಸ್ಯರು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ವಿರುದ್ಧದ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಚುನಾವಣೆ 2021; ಗೆದ್ದವರು, ಸೋತವರ ಪಟ್ಟಿ ವಿಧಾನ ಪರಿಷತ್ ಚುನಾವಣೆ 2021; ಗೆದ್ದವರು, ಸೋತವರ ಪಟ್ಟಿ

Assembly Session 15 Congress Legislative Council Members Suspended

ಆದರೆ ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಮಾತನಾಡಿ, "ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದ್ದರಿಂದ ಚರ್ಚೆಗೆ ಅವಕಾಶ ನೀಡುವುದು ಸಾಧ್ಯವಿಲ್ಲ" ಎಂದರು.

 ಪರಿಷತ್ ಗೆಲುವಿಗೆ ತಾಯಿಯ ತ್ಯಾಗ ಕಾರಣ; ಡಾ. ಸೂರಜ್ ರೇವಣ್ಣ ಪರಿಷತ್ ಗೆಲುವಿಗೆ ತಾಯಿಯ ತ್ಯಾಗ ಕಾರಣ; ಡಾ. ಸೂರಜ್ ರೇವಣ್ಣ

ಆಗ ಸಭಾಪತಿ ಬಸವರಾಜ ಹೊರಟ್ಟಿ ಭೈರತಿ ಬಸವರಾಜ ವಿರುದ್ಧದ ಚರ್ಚೆ ಕೊನೆಗೊಳಿಸಲಾಗಿದೆ ಎಂದು ಪ್ರಕಟಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ಪಟ್ಟು ಬಿಡಲಿಲ್ಲ. ಚರ್ಚೆಗೆ ಅವಕಾಶ ನೀಡಬೇಕು ಎಂದು ಧರಣಿ ಆರಂಭಿಸಿದರು.

ನಿಯಮಗಳಿಗೆ ವಿರುದ್ಧವಾಗಿ ನಡವಳಿಕೆ ತೋರಿದ ಕಾರಣ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಸೇರಿದಂತೆ 15 ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಯಿತು ಮತ್ತು ಕಲಾಪವನ್ನು ಮುಂದೂಡಲಾಯಿತು.

ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರಾದ ಎಸ್. ಆರ್. ಪಾಟೀಲ್, ಪಿ. ಆರ್. ರಮೇಶ್, ನಾರಾಯಣಸ್ವಾಮಿ, ಬಿ. ಕೆ. ಹರಿಪ್ರಸಾದ್, ಪ್ರತಾಪ್ ಚಂದ್ರ ಶೆಟ್ಟಿ, ಯು. ಟಿ. ವೆಂಕಟೇಶ್, ವೀಣಾ ಅಚ್ಚಯ್ಯ, ಸಿ. ಎಂ. ಇಬ್ರಾಹಿಂ ಸೇರಿದಂತೆ ಇತರ ಸದಸ್ಯರನ್ನು ಅಮಾನತು ಮಾಡಲಾಗಿದೆ.

ಸಚಿವರ ಪ್ರತಿಕ್ರಿಯೆ; ವಿಧಾನ ಪರಿಷತ್ ಆಡಳಿತ ಪಕ್ಷದ ನಾಯಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, "ಹತ್ತು ವರ್ಷಗಳಷ್ಟು ಹಳೆಯ ಪ್ರಕರಣವನ್ನು ಈಗ ಸದಸನದಲ್ಲಿ ಚರ್ಚಿಸುತ್ತಿದ್ದಾರೆಯೋ ಗೊತ್ತಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಸದನದಲ್ಲಿ ಚರ್ಚಿಸಲು ಅವಕಾಶ ನೀಡಲು ಆಗುವುದಿಲ್ಲ. ಸಭಾಪತಿ ಮಾತಿಗೆ ಬೆಲೆ ಕೊಡದಿರುವುದು ಯಾರಿಗೂ ಶೋಭೆ ತರುವುದಿಲ್ಲ" ಎಂದರು.

ಏನಿದು ಭೂ ಕಬಳಿಕೆ ಆರೋಪ?; ಬೆಂಗಳೂರಿನ ಕೆ. ಆರ್. ಪುರಂನ ಕಲ್ಕರೆಯಲ್ಲಿ ಅಣ್ಣಯ್ಯಪ್ಪ ಎಂಬುವವರಿಗೆ ಸೇರಿದ 35 ಎಕರೆ ಜಮೀನು ಕಬಳಿಕೆ ಆಗಿದೆ. ಕಾನೂನು ಬಾಹಿರವಾಗಿ ಜಮೀನು ವರ್ಗಾವಣೆ ಮಾಡಲಾಗಿದೆ. ಪ್ರಕರಣದ ತೀರ್ಪು ನವೆಂಬರ್ 25ರಂದು ತೀರ್ಪು ಬಂದಿದೆ.

ಈ ತೀರ್ಪು ಆಧರಿಸಿ ಸಚಿವ ಭೈರತಿ ಬಸವರರಾಜ ರಾಜೀನಾಮೆ ಪಡೆಯಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಇದೇ ವಿಚಾರವಾಗಿ ಇಂದು ಸದನಲ್ಲಿ ಚರ್ಚಿಸಲು ಅವಕಾಶ ಕೇಳಲಾಯಿತು, ಬಳಿಕ ಗದ್ದಲ ಉಂಟಾಯಿತು.

ಗುರುವಾರವೂ ಪ್ರತಿಭಟನೆ; ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಮಾತನಾಡಿ, "ಸಭಾಪತಿಗಳು ನಮ್ಮನ್ನು ಅಮಾತನು ಮಾಡಿದ್ದಾರೆ. ನಮ್ಮ ವರ್ತನೆಯಿಂದ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ. ಭೈರತಿ ಬಸವರಾಜರನ್ನು ತಕ್ಷಣ ಸಂಪುಟದಿಂದ ವಜಾಗೊಳಿಬೇಕು" ಎಂದು ಆಗ್ರಹಿಸಿದರು.

"ಮಾಲೀಕರನ್ನು ನಕಲು ಮಾಡಿ ಭೂಕಬಳಿಕೆ ಮಾಡಿದ 300 ಕೋಟಿ ಮೊತ್ತದ ಹಗರಣವಿದಾಗಿದೆ. ಇದು ಕೇವಲ ದಾಖಲೆಗಳಲ್ಲಿ ಇರುವ ಆರೋಪವಲ್ಲ. ನ್ಯಾಯಾಲಯದ ತೀರ್ಪು ಬಂದಿದೆ. ಈ ವಿಚಾರದ ಕುರಿತು ಚರ್ಚಿಸಲು ಅವಕಾಶ ಕೋರಿ ಗುರುವಾರವೂ ನಾವು ಪ್ರತಿಭಟನೆ ನಡೆಸುತ್ತೇವೆ" ಎಂದು ನಾರಾಯಣಸ್ವಾಮಿ ಹೇಳಿದರು.

ಸಭಾಪತಿಗಳ ಮಾತಿಗೆ ಮನ್ನಣೆ ನೀಡದೆ ನಿಯಮ ಬಾಹಿರವಾಗಿ ನಡೆದುಕೊಂಡಿದ್ದಕ್ಕಾಗಿ 15 ಕಾಂಗ್ರೆಸ್ ಸದಸ್ಯರನ್ನು ಬುಧವಾರ ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಗುರುವಾರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಮತ್ತೆ ಇದೇ ವಿಚಾರ ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆ.

Recommended Video

Ramesh Jarkiholi ಕಳ್ಳಾಟಕ್ಕೇ ಬ್ರೇಕ್ | Oneindia Kannada

English summary
Opposition leader of legislative council S. R. Patil and 14 other Congress legislative council members suspended for the day. Wednesday assembly session 3rd day at Suvarna Vidhana Soudha, Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X