ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೌಢ್ಯ ನಿಷೇಧ ಕಾಯ್ದೆ ಸದನದಲ್ಲಿ ಮಂಡನೆ, ಮುಖ್ಯಾಂಶಗಳು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್ 14 : ಕರ್ನಾಟಕ ಸರ್ಕಾರ ಬಹು ಚರ್ಚಿತವಾದ 'ಮೌಢ್ಯ ಪ್ರತಿಬಂಧಕ ಮಸೂದೆ'ಯನ್ನು ಸದನದಲ್ಲಿ ಮಂಡನೆ ಮಾಡಿದೆ. ಕೆಲವು ದಿನಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಮಂಡನೆ ಮಾಡಲು ಒಪ್ಪಿಗೆ ನೀಡಲಾಗಿತ್ತು.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ 2ನೇ ದಿನವಾದ ಮಂಗಳವಾರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ.

ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ

Anti superstition bill tabled in winter session

ಅಧಿವೇಶನಕ್ಕೆ ಕೋಟಿ-ಕೋಟಿ ಖರ್ಚು, ಶಾಸಕರ ಗೈರುಅಧಿವೇಶನಕ್ಕೆ ಕೋಟಿ-ಕೋಟಿ ಖರ್ಚು, ಶಾಸಕರ ಗೈರು

ಮಸೂದೆಯಲ್ಲಿನ ಪ್ರಮುಖ ಅಂಶಗಳು

* ಭಾನಾಮತಿ, ಮಾಟಮಂತ್ರ ಗಳಿಗೆ ನಿಷೇಧ.

* ದೆವ್ವ ಬಿಡಿಸುತ್ತೇವೆ ಎಂಬ ನೆಪದಲ್ಲಿ ನೀಡುವ ಶಿಕ್ಷೆಗೆ ನಿಷೇಧ

* ಶಸ್ತ್ರಚಿಕಿತ್ಸೆಯನ್ನು ಬೆರಳುಗಳ ಮೂಲಕ ಮಾಡುವುದು ಎಂದು ಹೇಳುವುದು, ಮಹಿಳೆಯ ಗರ್ಭದಲ್ಲಿನ ಭ್ರೂಣದ ಲಿಂಗವನ್ನು ಬದಲಾಯಿಸಲಾಗುತ್ತದೆ ಎಂದು ಹೇಳುವುದಕ್ಕೆ ನಿಷೇಧ.
* ಕೊಕ್ಕೆಯಿಂದ ನೇತು ಹಾಕುವುದು (ಸಿಡಿ ಹಾಯುವುದು). ದೇಹಕ್ಕೆ ಚುಚ್ಚಿಕೊಂಡು ಕೊಕ್ಕೆಯ ಮೂಲಕ ತೇರನ್ನು ಎಳೆಯುವ ಆಚರಣೆಗಳಿಗೆ ನಿಷೇಧ
* ಮಕ್ಕಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಮುಳ್ಳಗಳ ಮೇಲೆ, ಎತ್ತರದಿಂದ ಎಸೆಯುವುದು ಆಚರಣೆಗಳಿಗೆ ನಿಷೇಧ
* ಮಹಿಳೆಯರನ್ನು ಬೆತ್ತಲೆ ಸೇವೆ, ಮೆರವಣಿಗೆ ಮಾಡುವ ಅಮಾನವೀಯ ಪದ್ಧತಿ ನಿಷೇಧ

* ಪ್ರಾಣಿಯನ್ನು ಅದರ ಕುತ್ತಿಗೆಯನ್ನು ಕಚ್ಚುವ ಮೂಲಕ ಕೊಲ್ಲವಂತಹ ದುಷ್ಟ ಪದ್ಧತಿಗೆ ನಿಷೇಧ
* ಕೆಂಡ ಹಾಯುವ ಪದ್ಧತಿಗೆ ಅವಕಾಶವಿಲ್ಲ
* ಬಾಯಿ ಬೀಗ ಪದ್ಧತಿಗೆ ನಿಷೇಧ (ನಾಲಿಗೆಯೂ ಸೇರಿದಂತೆ ಒಂದು ದವಡೆಯಿಂದ ಇನ್ನೊಂದು ದವಡೆಗೆ ಕಬ್ಬಿಣದ ಸಲಾಕೆಗಳನ್ನ ತೂರಿಸುವ ಪದ್ಧತಿ)
* ಮಂತ್ರ-ತಂತ್ರದ ಹೆಸರಿನಲ್ಲಿ ರಾತ್ರಿ ಅಥವಾ ಬೆಳಗಿನ ವೇಳೆಯಲ್ಲಿ ಕಲ್ಲುಗಳನ್ನು ಎಸೆಯುವುದಕ್ಕೆ ನಿಷೇಧ
* ನಾಯಿ, ಹಾವು, ಚೇಳು ಕಡಿತಕ್ಕೆ ಮಂತ್ರ-ತಂತ್ರ, ಗಂಧ-ದೂಪ ಸೇರಿದಂತೆ ಇನ್ನಿತರ ಚಿಕಿತ್ಸೆಗಳಿಗೆ ನಿಷೇಧ

English summary
Karnataka Prevention and Eradication of Inhuman Evil Practices and Black Magic Bill, 2017, popularly known as the anti-superstition Bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X