ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಮತ್ತೊಂದು ಕೊರೊನಾ ವೈರಸ್ ಲಸಿಕೆ ಪ್ರಯೋಗ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್‌ 08: ಬೆಳಗಾವಿ ಜಿಲ್ಲೆಯಲ್ಲಿನ ಜೀವನ ರೇಖಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಪಟ್ಟಂತೆ ಮತ್ತೊಂದು ಲಸಿಕೆಯ ಪ್ರಯೋಗವನ್ನು ನಡೆಸಲಾಗುತ್ತಿದೆ.

ಇಲ್ಲಿನ ಜೀವನ ರೇಖಾ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಭಾರತ ಬಯೋಟೆಕ್ ಕೊವ್ಯಾಕ್ಸಿನ್ ಪ್ರಯೋಗ ನಡೆಯುತ್ತಿರುವ ಬೆನ್ನಲ್ಲಿಯೇ ಝೆಡೆಸ್ ಕೆಡೆಲಾ ಎಂಬ ಕೋವಿಡ್ ವ್ಯಾಕ್ಸಿನ್ ಪ್ರಯೋಗವನ್ನೂ ಸದ್ಯಕ್ಕೆ ಪ್ರಯೋಗಿಸಲಾಗುತ್ತಿದೆ.

ಕೊರೊನಾ ಸೋಂಕಿಗೆ ವಿಶ್ವಾದ್ಯಂತ ನೂರಾರು ಲಸಿಕೆಗಳ ಸಂಶೋಧನೆ ಏಕೆ?ಕೊರೊನಾ ಸೋಂಕಿಗೆ ವಿಶ್ವಾದ್ಯಂತ ನೂರಾರು ಲಸಿಕೆಗಳ ಸಂಶೋಧನೆ ಏಕೆ?

ಜೀವನ ರೇಖಾ ಆಸ್ಪತ್ರೆ ಸೇರಿದಂತೆ ಭಾರತದ ಹನ್ನೆರಡು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿನ ನಿವಾರಣೆಗೆ ಕೊವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಬಹುತೇಕ ಆರಂಭಗೊಂಡಿತ್ತು. ಇದರ ಬೆನ್ನಲ್ಲೇ ಇದೀಗ ICMR ಮಾರ್ಗಸೂಚಿಯ ಪ್ರಕಾರ ಆಸ್ಪತ್ರೆಯಲ್ಲಿ ಝಡೆಸ್ ಕೆಡೆಲಾ ಎಂಬ ಕೋವಿಡ್ ವ್ಯಾಕ್ಸಿನ್ ಅನ್ನು ಪ್ರಯೋಗಿಸಲಾಗುತ್ತಿದೆ. ಸದ್ಯಕ್ಕೆ ಹನ್ನೆರಡು ವರ್ಷದಿಂದ ಅರವತ್ತು ವರ್ಷದ ಒಳಗಿನ, ಕೋವಿಡ್ ಸೋಂಕು ಇಲ್ಲದ ಆರೋಗ್ಯಕರ ವ್ಯಕ್ತಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ.

Belagavi: Another Coronavirus Vaccine Trial Underway At Jeevan Rekha Hospital

ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ಇಪ್ಪತ್ತು ಜನರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಿದ್ದು, ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಜೀವನ ರೇಖಾ ಆಸ್ಪತ್ರೆಯ ಡಾ.ಅಮೀತ ಭಾತೆ ಮಾಹಿತಿ ನೀಡಿದ್ದಾರೆ.

English summary
Another coronavirus vaccine trial is underway at jeevan rekha hospital in belagavi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X