ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆ ಶುದ್ಧಗೊಳಿಸಲು ಅಧಿಕಾರಿಗಳ ಬಳಕೆ; ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಆಕ್ರೋಶ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 12: ಬೆಳಗಾವಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಮನೆ ಜಲಾವೃತವಾಗಿದೆ. ಹೀಗಾಗಿ ಆ ನೀರನ್ನು ಹೊರಹಾಕಿ ಮನೆ ಶುದ್ಧೀಕರಣಗೊಳಿಸಲು ಅವರು ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಆಕ್ರೋಶವೂ ವ್ಯಕ್ತಗೊಂಡಿದೆ.

 ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಜಲಾವೃತ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಜಲಾವೃತ

ಮಳೆ, ಪ್ರವಾಹದಿಂದ ಜಿಲ್ಲಾದ್ಯಂತ ಎಲ್ಲೆಲ್ಲೂ ನೀರು ನುಗ್ಗಿದೆ. ಹಾಗೆಯೇ, ಐದು ದಿನಗಳ ಹಿಂದೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಮನೆಯೊಳಗೂ ಪ್ರವಾಹದ ನೀರು ನುಗ್ಗಿ ಮನೆಯೆಲ್ಲಾ ರಾಡಿಯಾಗಿದೆ. ಆದರೆ ಈ ನೀರನ್ನು ಶುದ್ಧಗೊಳಿಸಲು ಅಂಜಲಿ ಅವರು ಪೌರ ಕಾರ್ಮಿಕರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮತ್ತು ಅಗ್ನಿಶಾಮಕ ಅಧಿಕಾರಿಗಳು, ಪೌರ ಕಾರ್ಮಿಕರು, ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿಗಳನ್ನು ತಮ್ಮ ಸ್ವಂತ ಕೆಲಸಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಇದಕ್ಕೆ ವಿರೋಧವೂ ವ್ಯಕ್ತಗೊಂಡಿದೆ.

Anjali Nimbalkar Used Officials To Clean Rainwater In Home

 ಮಹಾ ಪ್ರವಾಹ : 3 ಸಾವಿರ ಕೋಟಿ ತುರ್ತು ನೆರವಿಗೆ ಕೇಂದ್ರಕ್ಕೆ ಮನವಿ ಮಹಾ ಪ್ರವಾಹ : 3 ಸಾವಿರ ಕೋಟಿ ತುರ್ತು ನೆರವಿಗೆ ಕೇಂದ್ರಕ್ಕೆ ಮನವಿ

ಇಡೀ ಜಿಲ್ಲೆಗೆ ಜಿಲ್ಲೆಯೇ ನೀರಿನಲ್ಲಿ ಮುಳುಗಿದೆ. ಜನರೂ ನೋವಿನಲ್ಲಿ ಮುಳುಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಶಾಸಕಿಯವರು ತಮ್ಮ ಬಗ್ಗೆಯಷ್ಟೇ ಯೋಚಿಸಿದ್ದಾರೆ. ಜಿಲ್ಲೆಯ ಜನರ ಕೆಲಸಕ್ಕೆ ಅಧಿಕಾರಿಗಳನ್ನು ಬಳಸಲು ಬಿಟ್ಟು ಸ್ವಂತ ಕೆಲಸಕ್ಕೆ ಬಳಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
The house of Khanapur legislator Anjali Nimbalkar is underwater due to heavy rains in Belgaum. It is alleged that she used the authorities to clear the water in her home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X