ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಕಾರ್ಟ್ ವಾಹನದಲ್ಲಿ ಮಹಿಳೆಗೆ ಮಾತ್ರೆ ತಲುಪಿಸಿದ ಉಪ ಸಭಾಪತಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಏಪ್ರಿಲ್ 18: ದೇಶಾದ್ಯಂತ ಲಾಕ್ ಡೌನ್ ಮುಂದುವರಿದಿದೆ. ಈ ನಡುವೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಅಗತ್ಯ ಔಷಧಿ, ಚಿಕಿತ್ಸೆ ಸಿಗದೇ ಪರದಾಡುತ್ತಿರುವ ಸಂಗತಿಗಳೂ ನಡೆಯುತ್ತಿವೆ.

ಹೀಗೆ ಮಾತ್ರೆ ಸಿಗದೇ ಪರದಾಡುತ್ತಿದ್ದ ಮಹಿಳೆಯೊಬ್ಬರಿಗೆ ಉಪ ಸಭಾಪತಿ ಆನಂದ ಮಾಮನಿ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಮಾತ್ರೆಗಳನ್ನು ತಲುಪಿಸಿದ್ದಾರೆ.

ರೋಗಿಗಳನ್ನು ಸ್ವಂತ ವೆಚ್ಚದಲ್ಲಿ ಮನೆಗೆ ತಲುಪಿಸಿದ ಕೊರೊನಾ ಸೈನಿಕರು ರೋಗಿಗಳನ್ನು ಸ್ವಂತ ವೆಚ್ಚದಲ್ಲಿ ಮನೆಗೆ ತಲುಪಿಸಿದ ಕೊರೊನಾ ಸೈನಿಕರು

ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದ ಗೀತಾ ಬಡಿಗೇರ ಎಂಬ ಮಹಿಳೆ ಮೂರ್ಛೆ ರೋಗದಿಂದ ಬಳಲುತ್ತಿದ್ದಾರೆ. ಲಾಕ್ ಡೌನ್ ವಿಧಿಸಿದ್ದರಿಂದ ಔಷಧಿ ಸಿಗದೇ ಅವರು ಪರದಾಡುತ್ತಿದ್ದರು. ಔಷಧಿ ಸಿಗದೆ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಈ ಮಹಿಳೆಯ ವಿಷಯ ತಿಳಿದ ಆನಂದ ಮಾಮನಿ ಅವರು ಸವದತ್ತಿಯಿಂದ ಔಷಧಿಯನ್ನು ತಲುಪಿಸಿದ್ದಾರೆ.

Ananda Mamani Sent Medicine Through Escort Vehicle To Women In Kitturu

ಕಿತ್ತೂರಿನ ಬಿಜೆಪಿ ಮುಖಂಡ ಹನುಮಂತ ಕೊಟಬಾಗಿ ಹಾಗೂ ಪಿಎಸ್ಐ ಕುಮಾರ ಹಿತ್ತಲಮನಿ ಮೂಲಕ ಗೀತಾ ಅವರಿಗೆ ಔಷಧಿಯನ್ನು ತಲುಪಿಸಲಾಗಿದೆ.

English summary
Deputy speaker Ananda Mamani helped women by sending her medicine thorugh his escort vehicle in kitturu,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X