ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ

|
Google Oneindia Kannada News

ಬೆಳಗಾವಿ, ಆಗಸ್ಟ್ 12 : ಕೋವಿಡ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದಾಗ ಸಾರಿಗೆ ಇಲಾಖೆಗಳಿಗೆ ಅಪಾರವಾದ ನಷ್ಟ ಉಂಟಾಗಿತ್ತು. ಈಗ ಬಸ್‌ಗಳ ಸಂಚಾರ ಆರಂಭವಾಗಿದ್ದು, ವರಮಾನದಲ್ಲಿ ಚೇತರಿಕೆ ಕಂಡು ಬರುತ್ತಿದೆ.

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿನ ವರಮಾನದಲ್ಲಿ ಚೇತರಿಕೆ ಕಂಡು ಬಂದಿದೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಬಸ್ ಸೇವೆ ಆರಂಭವಾದರೆ ಮತ್ತಷ್ಟು ಆದಾಯ ಬರಲಿದೆ.

ಮೈಸೂರಿನಿಂದ ಈ ಜಿಲ್ಲೆಗಳಿಗೆ KSRTC ಬಸ್ ಸಂಚಾರ ರದ್ದುಮೈಸೂರಿನಿಂದ ಈ ಜಿಲ್ಲೆಗಳಿಗೆ KSRTC ಬಸ್ ಸಂಚಾರ ರದ್ದು

ಮೇ 19ರಿಂದ ಬೆಳಗಾವಿ ಜಿಲ್ಲೆಯೊಳಗೆ ಅಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿದೆ. ಬೆಳಗಾವಿ ವಿಭಾಗದಲ್ಲಿ ಕೆಲದು ದಿನಗಳ ತನಕ 6 ರಿಂದ 7 ಲಕ್ಷ ಆದಾಯ ಬರುತ್ತಿತ್ತು. ಈಗ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಿದ್ದು, ಆದಾಯವೂ ಹೆಚ್ಚಾಗಿದೆ.

ಲಾಕ್ ಡೌನ್ ಅಂತ್ಯ; ಬಿಎಂಟಿಸಿ, ಕೆಎಸ್ಆರ್‌ಟಿಸಿ ಸಂಚಾರ ಮಾಹಿತಿಲಾಕ್ ಡೌನ್ ಅಂತ್ಯ; ಬಿಎಂಟಿಸಿ, ಕೆಎಸ್ಆರ್‌ಟಿಸಿ ಸಂಚಾರ ಮಾಹಿತಿ

ಮೈಸೂರು, ಬೆಂಗಳೂರು ಮುಂತಾದ ನಗರಗಳಿಗೂ ಬಸ್‌ಗಳು ಸಂಚಾರ ನಡೆಸುತ್ತಿವೆ. ಆದರೆ, ಪ್ರಯಾಣಿಕರ ಕೊರತೆ ಇದೆ. ಗೋವಾ, ಮಹಾರಾಷ್ಟ್ರಗಳಿಗೆ ಬಸ್ ಸೇವೆ ಆರಂಭವಾದರೆ ಆದಾಯ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೇಮಕಾತಿ ಬಗ್ಗೆ ವಾಟ್ಸಪ್ ಸಂದೇಶಗಳು; ಕೆಎಸ್ಆರ್‌ಟಿಸಿ ಸ್ಪಷ್ಟನೆ ನೇಮಕಾತಿ ಬಗ್ಗೆ ವಾಟ್ಸಪ್ ಸಂದೇಶಗಳು; ಕೆಎಸ್ಆರ್‌ಟಿಸಿ ಸ್ಪಷ್ಟನೆ

ಸುಮಾರು 15 ಲಕ್ಷ ಆದಾಯ

ಸುಮಾರು 15 ಲಕ್ಷ ಆದಾಯ

ಬೆಳಗಾವಿ ವಿಭಾಗದಲ್ಲಿ ಈಗ 14 ರಿಂ 15 ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿದೆ. ಎಲ್ಲಾ ಮಾರ್ಗದಲ್ಲಿಯೂ ಬಸ್ ಸಂಚಾರ ಇಲ್ಲದಿದ್ದರೂ ಇಷ್ಟು ಆದಾಯ ಸಂಗ್ರಹವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಹಿಂದೆ ಸುಮಾರು 75 ಲಕ್ಷ ಆದಾಯ ಬರುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 691 ಮಾರ್ಗದಲ್ಲಿ ಆಗ ಬಸ್ ಸಂಚಾರ ನಡೆಸುತ್ತಿತ್ತು.

12 ರಿಂದ 15 ಲಕ್ಷ ಆದಾಯ

12 ರಿಂದ 15 ಲಕ್ಷ ಆದಾಯ

ಚಿಕ್ಕೋಡಿ ವಿಭಾಗದಲ್ಲಿ ಪ್ರಸ್ತುತ 260 ಬಸ್‌ಗಳು ಸಂಚಾರ ನಡೆಸುತ್ತಿವೆ. ಸುಮಾರು 12 ರಿಂದ 15 ಲಕ್ಷ ಆದಾಯ ಬರುತ್ತಿದೆ. ಲಾಕ್ ಡೌನ್‌ಗಿಂತ ಮೊದಲು 630 ಬಸ್‌ಗಳು ಸಂಚಾರ ನಡೆಸುತ್ತಿದ್ದವು. ಈಗ ಹೆಚ್ಚು ರೈಲುಗಳ ಸಂಚಾರ ಇಲ್ಲದ ಕಾರಣ ಬಸ್‌ಗಳನ್ನು ಅವಲಂಬನೆ ಮಾಡುವುದು ಅನಿವಾರ್ಯವಾಗಿದೆ.

ಅಂತರರಾಜ್ಯ ಸಂಚಾರ ಆರಂಭವಾಗಬೇಕು

ಅಂತರರಾಜ್ಯ ಸಂಚಾರ ಆರಂಭವಾಗಬೇಕು

ಬೆಳಗಾವಿ ವಿಭಾಗದಿಂದ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಹೆಚ್ಚಿನ ಜನರು ಸಂಚಾರ ನಡೆಸುತ್ತಾರೆ. ಆದರೆ, ಈಗ ಬಸ್ ಸಂಚಾರವಿಲ್ಲ. ಅಂತರರಾಜ್ಯ ಬಸ್‌ಗಳ ಸಂಚಾರ ಆರಂಭವಾದರೆ ಹೆಚ್ಚಿನ ಆದಾಯ ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇವಾಲಯಗಳಲ್ಲಿ ದರ್ಶನವಿಲ್ಲ

ದೇವಾಲಯಗಳಲ್ಲಿ ದರ್ಶನವಿಲ್ಲ

ಸವದತ್ತಿ ರೇಣುಕಾ ಯಲ್ಲಮ್ಮದೇವಿ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ದರ್ಶನ ಲಭ್ಯವಿಲ್ಲ. ಆದ್ದರಿಂದ, ಜನರು ಕಡಿಮೆ ಸಂಖ್ಯೆಯಲ್ಲಿ ಸಂಚಾರ ನಡೆಸುತ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರು ನಗರಕ್ಕೆ ಭೇಟಿ ನೀಡುವ ಜನರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
After the bus service began North Western Karnataka Road Transport Corporation (NWKRTC) getting income. If Bus interstate bus service open corporation will get more income after the lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X