ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಮನೆ ಏರಿ ಕುಳಿತ ಭಾರಿ ಗಾತ್ರದ ಮೊಸಳೆ!

|
Google Oneindia Kannada News

ಬೆಳಗಾವಿ, ಆಗಸ್ಟ್ 12: ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ವಿಪರೀತಕ್ಕೆ ಹೋಗಿದ್ದು ಮನೆಗಳು ಮುಳುಗಿ, ಜಲಚರಗಳು ಊರಿಗೆ ಬಂದಿವೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಚಿಂಚಲಿ ಪಟ್ಟಣದ ಅಜಿತ ನಗರದಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಮನೆಯೊಂದರ ಛಾವಣಿ ಏರಿ ಕೂತಿದೆ.

ಬೆಳಗಾವಿಯಲ್ಲಿ ಕೊನೆಗೂ ತಗ್ಗಿದ ಮಳೆರಾಯ; ಹಲವು ಗ್ರಾಮಗಳು ಜಲದಿಗ್ಬಂಧನದಿಂದ ಮುಕ್ತಬೆಳಗಾವಿಯಲ್ಲಿ ಕೊನೆಗೂ ತಗ್ಗಿದ ಮಳೆರಾಯ; ಹಲವು ಗ್ರಾಮಗಳು ಜಲದಿಗ್ಬಂಧನದಿಂದ ಮುಕ್ತ

ಈ ಭಾಗದಲ್ಲಿ ನೆರೆ ತೀರ ಹೆಚ್ಚಿದ್ದು, ಮನೆಗಳು ಮುಳುಗುವ ಮಟ್ಟಕ್ಕೆ ನೀರು ಏರಿದೆ. ಹಾಗಾಗಿ ಮೊಸಳೆಯು ಸುಲಭವಾಗಿ ಮನೆಯ ಮೇಲೆ ಏರಿ ತಾರಸಿ ಮೇಲೆ ಕೂತಿದೆ.

A crocodile sitting top of a house in Belgaum

ಸುಮಾರು 10 ಅಡಿ ಉದ್ದವಿರುವ ಮೊಸಳೆಯು ಭಾರಿ ಗಾತ್ರದಲ್ಲಿದ್ದು ನೋಡುಗರ ಜಂಗಾಬಲ ಉಡುಗಿಸಿದೆ. ಪ್ರವಾಹದಿಂದಾಗಿ ಹಾವು, ಚೇಳು ಇನ್ನೂ ಇತರ ಅಪಾಯಕಾರಿ ಜೀವಿಗಳು ಮನೆಗಳನ್ನು ಪ್ರವೇಶಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇಂದು ಸ್ವಲ್ಪ ತಿಳಿಯಾಗಿದ್ದು, ಇನ್ನೆರಡು ದಿನಗಳಲ್ಲಿ ನೆರೆ ಪೂರ್ಣವಾಗಿ ಇಳಿಯುವ ನಿರೀಕ್ಷೆ ಇದೆ. ಆದರೆ ನೆರೆ ಇಳಿದ ನಂತರ ಜೀವನ ಸಾಮಾನ್ಯ ಸ್ಥಿತಿಗೆ ಬರಲು ಹಲವು ದಿನಗಳೇ ಬೇಕಾಗಬಹುದು.

English summary
Huge Crocodile sitting in top of a house in Belgaum. Flood brings many creatures to town from the river.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X