ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.21ರಿಂದ ಬೆಳಗಾವಿಯಲ್ಲಿ 6ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

By Ramesh
|
Google Oneindia Kannada News

ಬೆಳಗಾವಿ, ಜನವರಿ. 16 : 6ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಗಡಿನಾಡು ಬೆಳಗಾವಿ ಸಜ್ಜಾಗಿದೆ. ಜನವರಿ 21ರಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2017 ನಡೆಯಲಿದೆ.

ಗುಜರಾತ್ ಹೊರತುಪಡಿಸಿದರೆ ಬೆಳಗಾವಿಯಲ್ಲಿ ನಡೆಯುವ ಉತ್ಸವದಲ್ಲಿ ಅತಿ ಹೆಚ್ಚು ಜನರು ಪಾಲ್ಗೊಳ್ಳುತ್ತಾರೆ. ಒಟ್ಟು ನಾಲ್ಕು ದಿನದ ಉತ್ಸವ ಆಯೋಜನೆ ಮಾಡಲಾಗಿದ್ದು, ಎರಡು ದಿನಗಳ ಕಾಲ ಗಾಳಿಪಟ ಉತ್ಸವ ನಡೆಯಲಿದೆ.

ಕೆನಡಾ, ಯುಕೆ, ಜರ್ಮನಿ, ಮಲೇಷ್ಯಾ, ರಷ್ಯಾ, ಬ್ರೆಜಿಲ್, ಆಸ್ಟ್ರೇಲಿಯಾ, ಫ್ರಾನ್ಸ್, ಇಟಲಿ, ದಕ್ಷಿಣ ಆಫ್ರಿಕಾ, ಸಿಂಗಾಪುರ ಸೇರಿದಂತೆ 17 ದೇಶಗಳ ವಿವಿಧ ತಂಡಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ.

6th International Kite Festival at Belagavi from January 21

ಕರ್ನಾಟಕ, ಗೋವಾ, ಮಹಾರಾಷ್ಟ್ರದ ಲಕ್ಷಾಂತರ ಜನರು ಈ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಐದು ಬಾರಿ ನಡೆದ ಉತ್ಸವ ಯಶಸ್ವಿಯಾಗಿದ್ದು, ಇದು 6ನೇ ಬಾರಿ ನಡೆಯುತ್ತಿರುವ ಉತ್ಸವವಾಗಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯೂ ಈ ಉತ್ಸವಕ್ಕೆ ಸಹಕಾರ ನೀಡಲಿದೆ. ಗುಜರಾತ್, ಕೇರಳ, ಮಹಾರಾಷ್ಟ್ರದ ವಿವಿಧ ತಂಡಗಳು ಭಾಗವಹಿಸಲಿವೆ.

English summary
The Belagavi International Kite Festival is back for the sixth consecutive year and all set to fill the skies over the city with hundreds of colourful kites in different shapes and sizes for two days from January 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X