• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ ಚುನಾವಣೆ ಕಣದಲ್ಲಿದ್ದಾರೆ 65 ಅಭ್ಯರ್ಥಿಗಳು: ಮತದಾನ ಹೇಗೆ?

|

ಬೆಳಗಾವಿ, ಏಪ್ರಿಲ್ 20: ಬೆಳಗಾವಿ ಲೋಕಸಭೆ ಚುನಾವಣೆ ಕಣದಲ್ಲಿ ಬರೋಬ್ಬರಿ 65 ಮಂದಿ ಕಣದಲ್ಲಿದ್ದಾರೆ. ಇಷ್ಟೊಂದು ಮಂದಿ ಕಣದಲ್ಲಿರುವ ಕಾರಣ ಆಯೋಗಕ್ಕೆ ಚುನಾವಣೆ ನಡೆಸುವುದು ಸವಾಲಾಗಿದೆ.

ಒಂದು ಇವಿಎಂ ಯಂತ್ರದಲ್ಲಿ ನೋಟಾ ಸೇರಿ 16 ಅಭ್ಯರ್ಥಿಗಳಿಗೆ ಮಾತ್ರವೇ ಮತ ಹಾಕಬಹುದು. ಕೆಲವು ಸುಧಾರಿತ ಇವಿಎಂ ಗಳಲ್ಲಿ ಮಾತ್ರ 23 ಅಭ್ಯರ್ಥಿಗಳಿಗೆ ಮತ ಹಾಕುವ ವ್ಯವಸ್ಥೆ ಇರುತ್ತದೆ.

ಸುಧಾರಿತ ಮತಗಟ್ಟೆಯನ್ನು ಆಯೋಗ ಬಳಸಿದರೂ ಸಹ ಒಂದು ಮತಗಟ್ಟೆಯಲ್ಲಿ ಮೂರು ಇವಿಎಂ ಅನ್ನು ಇಡಬೇಕಾಗುತ್ತದೆ. 16 ಅಭ್ಯರ್ಥಿಗಳ ಇವಿಎಂ ಬಳಸಿದರೆ 5 ಇವಿಎಂ ಗಳನ್ನು ಬೆಳಗಾವಿಯ ಪ್ರತಿಯೊಂದು ಮತಗಟ್ಟೆಯಲ್ಲೂ ಇಡಬೇಕಾಗುತ್ತದೆ ಇದು ಮತದಾರರಿಗೆ ಬಹು ಗೊಂದಲ ದಾಯಕವಾಗಲಿದೆ.

ಏಳು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು

ಏಳು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು

ಬೆಳಗಾವಿ ಕ್ಷೇತ್ರದಲ್ಲಿ ನೆರ ಸ್ಪರ್ಧೆ ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೇ ಪಕ್ಷಕ್ಕೆ. ಇವೆರಡರ ಜೊತೆಗೆ ಇಲ್ಲಿ ಉತ್ತಮ ಪ್ರಜಾಕೀಯ ಪಕ್ಷ, ಬಿಎಸ್‌ಪಿ, ಪ್ರಗತಿಶೀಲ ಸಮಾಜವಾದಿ ಪಾರ್ಟಿ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ. ಇನ್ನುಳಿದ 58 ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳೇ ಆಗಿದ್ದಾರೆ.

ಹಿಂದೊಮ್ಮೆ ಇದಕ್ಕೂ ಕೆಟ್ಟದಾದ ಸನ್ನಿವೇಶವಿತ್ತು

ಹಿಂದೊಮ್ಮೆ ಇದಕ್ಕೂ ಕೆಟ್ಟದಾದ ಸನ್ನಿವೇಶವಿತ್ತು

ಬೆಳಗಾವಿಯಲ್ಲಿ ಇದು ಸಾಮಾನ್ಯ ಸಮಸ್ಯೆ, ಹಿಂದೊಮ್ಮೆ ಚುನಾವಣೆಯನ್ನು ಮುಂದೂಡಬೇಕೆಂಬ ಒತ್ತಾಯವನ್ನು ಆಯೋಗ ಒಪ್ಪಲಿಲ್ಲವೆಂದು ಎಂಇಇಎಸ್ ಸಂಘಟನೆ ನೂರೈವತ್ತಕ್ಕೂ ಹೆಚ್ಚು ಜನರ ಕೈಲಿ ನಾಮಪತ್ರ ಸಲ್ಲಿಸಿತ್ತು. ಆದರೆ ಅದಕ್ಕೆ ಬಗ್ಗದ ಆಯೋಗವು ದೊಡ್ಡ ಬ್ಯಾಲೆಟ್ ಪತ್ರವನ್ನು ಮುದ್ರಿಸಿ ಚುನಾವಣೆಯು ಸರಾಗವಾಗಿ ನಡೆಯುವಂತೆ ಮಾಡಿತ್ತು. ಆಗ ಇವಿಎಂ ಇರಲಿಲ್ಲ.

ಬ್ಯಾಲೆಟ್ ಬಾಕ್ಸ್‌ ಅಥವಾ ಇವಿಎಂ?

ಬ್ಯಾಲೆಟ್ ಬಾಕ್ಸ್‌ ಅಥವಾ ಇವಿಎಂ?

ಈ ಬಾರಿಯೂ ಸಹ ಚುನಾವಣಾ ಆಯೋಗ ಬ್ಯಾಲೆಟ್ ಬಾಕ್ಸ್‌ ಮಾದರಿ ಬಳಸದೆ, ಅಭ್ಯರ್ಥಿಗಳು ಹೆಚ್ಚಾದರೂ ಸಹ ಇವಿಎಂ ಮೂಲಕವೇ ಚುನಾವಣೆ ನಡೆಸಲು ನಿಶ್ಚಯಿಸಿದೆ. ಚುನಾವಣೆಗೆ ಸರ್ವ ತಯಾರಿಯನ್ನೂ ಮಾಡಿಕೊಳ್ಳಲಾಗಿದೆ.

ಕಾಂಗ್ರೆಸ್ vs ಬಿಜೆಪಿ

ಕಾಂಗ್ರೆಸ್ vs ಬಿಜೆಪಿ

ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಸಾಧುನ್ವಾರ್ ಅವರು ಕಣಕ್ಕೆ ಇಳಿದಿದ್ದರೆ, ಬಿಜೆಪಿಯಿಂದ ಸುರೇಶ್ ಅಂಗಡಿ ಅವರು ಕಣಕ್ಕೆ ಇಳಿದಿದ್ದಾರೆ. ಮೋಹನ್ ಯಲ್ಲಪ್ಪ ಮೋರೆ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರಾದರೂ ನಂತರ ನಾಮಪತ್ರ ವಾಪಸ್ ಪಡೆದು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
65 candidates filed nominations from Belgaum lok sabha constituency. Election commission will do voting process by EVMs only, they did not using ballet box.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more