ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಮ್ಯಾರಥಾನ್ : ಪೋಲಿಯೋ ವಿರುದ್ಧ ಓಡಿ

By Kiran B Hegde
|
Google Oneindia Kannada News

ಬೆಳಗಾವಿ, ಫೆ. 13: ಪೋಲಿಯೋ ನಿರ್ಮೂಲನೆ ಉದ್ದೇಶದಿಂದ ವೇಣುಗ್ರಾಮ ರೋಟರಿ ಕ್ಲಬ್ ನಗರದಲ್ಲಿ ಫೆ. 22ರಂದು 5ನೇ 'ಸಿಡ್ವಿನ್ ಬೆಳಗಾವಿ ಮ್ಯಾರಥಾನ್ 2015' ಆಯೋಜಿಸಲಾಗಿದೆ. "ಭಾರತವನ್ನು ಪೋಲಿಯೋ ಮುಕ್ತವಾಗಿರಿಸಿ" ಎಂಬ ಸಂದೇಶ ಕೊಡುವುದು ಈ ಮ್ಯಾರಥಾನ್ ಉದ್ದೇಶ.

ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ಸಿಪಿಎಡ್ ಮೈದಾನದಲ್ಲಿ ಫೆ. 22ರಂದು ಬೆಳಗ್ಗೆ 7 ಗಂಟೆಗೆ ಮ್ಯಾರಥಾನ್ ಆರಂಭವಾಗಲಿದೆ. ಸುಮಾರು 9 ಕಿ.ಮೀ. ದೂರ ಓಡಲಾಗುವುದು. ವಿವಿಧ ಆರು ಗುಂಪುಗಳಿದ್ದು, ಸುಮಾರು 5,000 ಜನ ಭಾಗವಹಿಸುವ ನಿರೀಕ್ಷೆಯಿದೆ. ವಿಜೇತರಿಗೆ ಒಟ್ಟು ಒಂದು ಲಕ್ಷ ರು. ಮೊತ್ತದ ಬಹುಮಾನ ನೀಡಲಾಗುವುದು.

marathon

ಸ್ಪರ್ಧಿಗಳ ವಯಸ್ಸಿಗೆ ತಕ್ಕಂತೆ ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಮುಕ್ತ' ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. 10ಕ್ಕಿಂತ ಕಡಿಮೆ ವಯಸ್ಸಿನವರು, 10 ರಿಂದ 14 ನೇ ವಯಸ್ಸಿನವರು, 14ರಿಂದ 16ನೇ ವಯಸ್ಸಿನವರು, 40 ರಿಂದ 50ನೇ ವಯಸ್ಸಿನವರು ಹಾಗೂ 60ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವಿಶೇಷ ವಿಭಾಗ ರಚಿಸಲಾಗಿದೆ. [ಯುವಕರ ಸೆಳೆದ ಮಿಡ್ ನೈಟ್ ಮ್ಯಾರಥಾನ್]

ಈ ವರ್ಷವೂ ಮ್ಯಾರಥಾನ್‌ಗೆ SIDVIN ಸಂಸ್ಥೆ ಪ್ರಾಯೋಜನ ನೀಡುತ್ತಿದೆ. ಮ್ಯಾರಥಾನ್ ದಿನ ಬೆಳಗ್ಗೆ 6.30ಕ್ಕಿಂತ ಮೊದಲೇ ಬಂದವರಿಗೆ ಉಚಿತವಾಗಿ ಟಿ ಶರ್ಟ್, ನ್ಯಾಪ್‌ಕಿನ್, ಪೆನ್ ಮತ್ತು ನೋವು ನಿವಾರಕ ಔಷಧ ನೀಡಲಾಗುವುದು.

ಆಸಕ್ತರು ನಾರ್ವೇಕರ್ ಗಲ್ಲಿಯ ಡಿ.ಬಿ. ಪಾಟೀಲ ಫೋಟೊ ಸ್ಟುಡಿಯೋ, ಶಿವಾಜಿ ರಸ್ತೆಯಲ್ಲಿರುವ ರೋಹಿತ್ ಮೆಡಿಕಲ್ಸ್, ಗೊಂಧಳ್ಳಿ ಗಲ್ಲಿಯ ಆಲ್ಶಿಯಸ್ ಫಾರ್ಮಾಸ್ಯುಟಿಕಲ್ಸ್, ಮರಾಠಾ ಮಂದಿರದ ಎದುರು ಇರುವ ರುಕ್ಮಿಣಿ ಎಂಟರ್‌ಪ್ರೈಸಿಸ್‌ನಲ್ಲಿ ಸಿಗುವ ಫಾರ್ಮ್ ತುಂಬಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಿ.ಬಿ. ಪಾಟೀಲ - 9448963874 ಅವರನ್ನು ಸಂಪರ್ಕಿಸಬಹುದು.

English summary
The “SIDVIN Belagavi Marathon 2015” will be held on 22nd Feb in Belagavi. With the message “Keep India Polio Free” Rotary club of Venugrama has organized this marathon. There will be six age groups in this event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X