ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭಯದ ನಡುವೆ ಸರ್ಕಾರದ ವಿರುದ್ಧ ಜನರ ಪ್ರತಿಭಟನೆ

|
Google Oneindia Kannada News

ಬೆಳಗಾವಿ, ಜೂನ್ 27: ಒಂದು ಕಡೆ ಜನ ಕೊರೊನಾ ವೈರಸ್‌ನಿಂದ ತೊಂದರೆ ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರದ ನಿಯಮದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕೊರೊನಾ ಮಧ್ಯೆಯೇ ಇಂದು ಕಂಕಣವಾಡಿ ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

Recommended Video

ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. | Andhra Pradesh | Oneindia Kannada

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣ ನಿವಾಸಿಗಳಿಂದ ಸ್ವಯಂ ಪ್ರೇರಿತ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ಮಾಡಲಾಗಿತ್ತು. ಗಾಯರಾನ ಜಮೀನಿನಲ್ಲಿ ವಾಸವಿರುವ ಕುಟುಂಬಗಳ ಮನೆಗಳ ತೆರವಿಗೆ ಸರಕಾರ ಆದೇಶ ನೀಡಿದ್ದು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.

ಬೆಳಗಾವಿಯಲ್ಲಿ ಸಾವಿರಾರೂ ಲೀಟರ್ ಹಾಲು ಕಾಲುವೆ ಪಾಲಾಯ್ತುಬೆಳಗಾವಿಯಲ್ಲಿ ಸಾವಿರಾರೂ ಲೀಟರ್ ಹಾಲು ಕಾಲುವೆ ಪಾಲಾಯ್ತು

ಸರ್ಕಾರದ ಗೈರಾಣ ಜಮೀನಿನಲ್ಲಿ 2೦೦೦ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಸರಕಾರ ಆ ಜಾಗವನ್ನು ತೆರವು ಮಾಡಲು ಆದೇಶ ನೀಡಿತ್ತು. ಇದನ್ನು ಖಂಡಿಸಿ ಕಂಕನವಾಡಿ ಪಟ್ಟಣ ಬಂದ್ ಮಾಡಲಾಗಿದೆ. ಸರ್ಕಾರವೇ 4೦ ವರ್ಷಗಳಿಂದ ಜನರಿಗೆ ಮೂಲ ಸೌಕರ್ಯ ಕಲ್ಪಿಸಿ ಈಗ ತೆರವಿಗೆ ಆದೇಶ ನೀಡಿದ್ದು, ಜನರ ಅಸಮಾಧಾನಕ್ಕೆ ಕಾರಣವಾಗಿದೆ.

2000 Families Protest Against Government In Kankanavadi

ಈ ಆದೇಶದಿಂದ 2೦೦೦ ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳುವ ಸಾಧ್ಯತೆ ಇದೆ. ಹೀಗಾಗಿ, ಸರಕಾರ ತಕ್ಷಣ ಆದೇಶ ಹಿಂಪಡೆಯುವಂತೆ ಪಟ್ಟಣ ನಿವಾಸಿಗಳು ಒತ್ತಾಯ ಮಾಡಿದ್ದಾರೆ. ಪಟ್ಟಣದ ಶೇ.15 ರಷ್ಟು ಮನೆಗಳ ತೆರವಿಗೆ ಸರ್ಕಾರ ಆದೇಶ ನೀಡಿದೆ. ಇದೇ ವೇಳೆ ಪ್ರತಿಭಟನೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಪೊಲೀಸರ ಹರಸಾಹಸ ಪಡಬೇಕಾಯಿತು.

English summary
2000 families protest against government rule in Kankanavadi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X