ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ರೈಲಿನಡಿ ಜಿಗಿದರೂ ಯುವಕ ಪಾರಾಗಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಜನವರಿ 11: ಮೊಬೈಲ್ ಬಳಕೆ ಕಡಿಮೆ ಮಾಡು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮೆಟ್ರೋ ಹಳಿಗೆ ಜಿಗಿದು ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದ ಯುವಕ ವೇಣುಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬಸವನಗುಡಿ ನಿವಾಸಿ ವೇಣುಗೋಪಾಲ್(25) ಆತ್ಮಹತ್ಯೆಗೆ ಯತ್ನಿಸಿದ ಯುವಕ, ಆತ ವೃತ್ತಿಯಲ್ಲಿ ಟೈಲರ್ , ಡಿಕೆ ಟೈಲರ್ ಶಾಪ್ ನಡೆಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

ಹಾಗಾದರೆ ಆತ ಬದುಕುಳಿದಿದ್ದು ಹೇಗೆ ಎನ್ನುವುದನ್ನು ನೋಡುವುದಾದರೆ, ಒಂದು ಆತ ಹೈವೋಲ್ಟೇಜ್ ಲೈನ್‌ ನ ಪಕ್ಕದಲ್ಲಿ ಬಿದ್ದಿದ್ದಾನೆ ಮತ್ತು ಒಂದೊಮ್ಮೆ ಪ್ರಾಣಿ ಅಥವಾ ಪಕ್ಷಿಗಳು ಬಂದರೆ ಆಟೋಮೆಟಿಕ್ ಆಗಿ ಹೈವೋಲ್ಟೇಜ್ ಲೇನ್ ತಾನಾಗಿದೆ ಸ್ಥಗಿತಗೊಳ್ಳುತ್ತದೆ.

Youth jumps from metro station, how he survive

750 ವೋಲ್ಟ್ಸ್ ವಿದ್ಯುತ್ ಹಳಿ ಅದಾಗಿದೆ. ಬಿದ್ದಿರುವ ರಭಸಕ್ಕೆ ಹಳಿ ತಾಗಿ ತಲೆಗೆ ಬಲವಾದ ಏಟಾಗಿದ್ದು, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಯುವಕನಿಗೆ ಪ್ರಜ್ಞೆ ಬಂದಿದೆ.

ಎಸ್‌ಎಸ್‌ಎಲ್‌ಸಿಯಲ್ಲಿ ಒಂದು ವಿಷಯದಲ್ಲಿ ಫೇಲ್ ಅಗಿದ್ದ. ಟೈಲರಿಂಗ್ ಮಾಡಿ ಮಗನನ್ನು ಓದಿಸುತ್ತಿದ್ದ ತಾಯಿ ಎಸ್‌ಎಸ್‌ಎಲ್‌ಸಿ ಪಾಸು ಮಾಡುವಂತೆ ಬುದ್ಧಿವಾದ ಹೇಳಿದ್ದರು.

ಹೆತ್ತವರ ಮಾತಿನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಬಾರದು. ಹೆತ್ತವರ ಮಾತಿನ ಹಿಂದಿನ ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಘಟನೆ ಸ್ಥಳಕ್ಕೆ ಆಗಮಿಸಿದ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಟ್ ಮಾತನಾಡಿ, ಆತ ದಿಢೀರನೆ ಟ್ರ್ಯಾಕ್ ಮೇಲೆ ಜಿಗಿದಿದ್ದಾನೆ.

ಘಟನೆ ನಡೆದ ಕೂಡಲೇ ಪವರ್ ಸಪ್ಲೈ ನಿಲ್ಲಿಸಿದ್ದೇವೆ. ಆತ ಸೇಫ್ಟಿ ಲೈನ್ ಮೀರಿ ಹೋಗಿದ್ದ. ಅದೃಷ್ಟವಶಾತ್ ಬದುಕಿದ್ದಾನೆ. ಕೂಡಲೇ ನಿಮ್ಹಾನ್ಸ್​ಗೆ ಶಿಫ್ಟ್ ಮಾಡಿದ್ದೀವಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಘಟನೆ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆಯವರೆಗೂ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

English summary
Youth jumped from National college Namma metro station and he survived in filmy style, he will not fell into the metro power lanes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X