ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಜಿಂದಾಲ್ ನಿಸರ್ಗಾಲಯದಲ್ಲಿ ಹಾರ್ದಿಕ್ ಪಟೇಲ್ ಗೆ ಚಿಕಿತ್ಸೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18: ಗುಜರಾತ್ ನ ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ದೊರಕಿಸಲು ಉಪವಾಸ ಹೋರಾಟದ ಮೂಲಕ ದೇಶದ ಗಮನ ಸೆಳೆದಿರುವ ಯುವ ಮುಖಂಡ ಹಾರ್ದಿಕ್ ಪಟೇಲ್ 10 ದಿನಗಳ ಚಿಕಿತ್ಸೆಗಾಗಿ ಬೆಂಗಳೂರಿನ ಜಿಂದಾಲ್ ನೇಚರ್ ಕ್ಯೂರ್ ನಲ್ಲಿ ದಾಖಲಾಗಲಿದ್ದಾರೆ.

ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ 19 ದಿನಗಳ ಕಾಲ ಉಪವಾಸ ಕೈಗೊಂಡಿದ್ದ ಹಾರ್ದಿಕ್ ಪಟೇಲ್ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಂದಾಲ್ ನೈಸರ್ಗಿಕ ಕೇಂದ್ರಕ್ಕೆ ಆಗಮಿಸಲಿದ್ದಾರೆ.

ಹತ್ತೊಂಬತ್ತು ದಿನಗಳ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ ಹಾರ್ದಿಕ್ ಪಟೇಲ್ ಹತ್ತೊಂಬತ್ತು ದಿನಗಳ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ ಹಾರ್ದಿಕ್ ಪಟೇಲ್

ಸೆಪ್ಟೆಂಬರ್ 18ರಿಂದ ಚಿಕಿತ್ಸೆ ಆರಂಭವಾಗಲಿದೆ. ಒಂದು ವಾರದ ಹಿಂದೆಯೇ ಹಾರ್ದಿಕ್ ಈ ಚಿಕಿತ್ಸಾಲಯದಲ್ಲಿ 10 ದಿನಗಳ ಚಿಕಿತ್ಸೆಗೆ ಬುಕಿಂಗ್ ಮಾಡಿದ್ದರು. ಪಾತೀದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ 19 ದಿನಗಳ ಕಾಲ ಉಪವಾಸ ಕೈಗೊಂಡಿದ್ದರು. ಬಳಿಕ ಆರೋಗ್ಯ ಸ್ಥಿತಿ ಕ್ಷೀಣಿಸಿರುವ ಕಾರಣ ಉಪವಾಸ ಪ್ರತಿಭಟನೆಯನ್ನು ಸೆಪ್ಟೆಂಬರ್ 12ಕ್ಕೆ ಅಂತ್ಯಗೊಳಿಸಿದ್ದರು.

Youth icon Hardik Patel in Bengaluru for treatment

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಾರ್ದಿಕ್ ಪಟೇಲ್: ಉಪವಾಸ ಮುಂದುವರಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಾರ್ದಿಕ್ ಪಟೇಲ್: ಉಪವಾಸ ಮುಂದುವರಿಕೆ

ಈಗಾಗಲೇ ಹಾರ್ದಿಕ್ ಪಟೇಲ್ ಅವರಿಗೆ ಇ-ಮೇಲ್ ಕಳುಹಿಸಿದ್ದೇವೆ, ಯಾವುದೇ ರಾಜಕೀಯ ಚರ್ಚೆಗಳು, ಸಭೆಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿದೆ ಎಂದು ಜಿಂದಾಲ್ ನೇಚರ್ ಕೇರ್ ನ ವೈದ್ಯರು ತಿಳಿಸಿದ್ದಾರೆ.

English summary
Youth icon and Patidar movement leader in Gujarath, Hardik Patel will admit in Jindal naturopathic center in Bangalore for 10 days treatment from Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X