ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಿಮ್ಮ ಎರಡು ಲಕ್ಷ ಮೌಲ್ಯ ಮತವನ್ನು ಕೆಲವು ನೂರುಗಳಿಗೆ ಮಾರಬೇಡಿ'

|
Google Oneindia Kannada News

Recommended Video

ಅಮೆರಿಕಾದ ಸಾಫ್ಟ್ವೇರ್ ಉದ್ಯೋಗಿಯಿಂದ ಕರ್ನಾಟಕದ ಜನತೆಗೆ ಸಂದೇಶ | Oneindia Kannada

ಬೆಂಗಳೂರು, ಡಿಸೆಂಬರ್ 22 : ಕರ್ನಾಟಕದ ಪ್ರತಿಯೊಬ್ಬ ಮತದಾರನ ಒಂದು ಮತದ ಮೌಲ್ಯ 2 ಲಕ್ಷ ರೂ.ಗಳಾಗಿದ್ದು ಅದನ್ನು ಐದುನೂರು, ಸಾವಿರ ರೂಪಾಯಿಗಳಿಗೆ ಮುಂಬರುವ ಚುನಾವಣೆಯಲ್ಲಿ ಮಾರಿಕೊಳ್ಳಬಾರದು ಎಂದು ಅಮೇರಿಕದಲ್ಲಿರುವ ಕನ್ನಡಿಗ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

ಮೂಲತಹ ಕರ್ನಾಟಕದ ಘಟಪ್ರಭದ ಮಹೇಶ್ ಅರಳಿ ಎಂಬುವವರು ಅಮೇರಿಕಾದ ಮೈಕ್ರೋ ಸಾಫ್ಟ್ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ಮುಂಬರುವ ವಿಧಾನ ಸಭಾ ಚುನಾವಣೆ ವೇಳೆ ಪ್ರತಿಯೊಬ್ಬ ನಾಗರಿಕರು ತಮ್ಮ ಅಮೂಲ್ಯವಾದ ಮತವನ್ನು ಯಾವ ರೀತಿ ಚಲಾಯಿಸಬೇಕೆಂದು ಬಿಡಿಸಿ ಹೇಳಿದ್ದಾರೆ.

Your vote value is Rs.2 lakhs don't sell it for peanut

ಅವರ ಪ್ರಕಾರ ಪ್ರತಿ ವರ್ಷ ರಾಜ್ಯದ ಒಬ್ಬೊಬ್ಬ ಮತದಾರರ ನಿಂದ ಸರ್ಕಾರದ ಬೊಕ್ಕಸಕ್ಕೆ ಸಂಗ್ರಹವಾಗುವ ಮೊತ್ತ 1.40 ಸಾವಿರ ಕೋಟಿ ಅಂದರೆ 5 ವರ್ಷಕ್ಕೆ 7 ಲಕ್ಷ ಕೋಟಿ ಹಣವನ್ನು ಜನರ ತೆರಿಗೆಯಿಂದ ಸಂಗ್ರಹಿಸಲಾಗುತ್ತದೆ. ಈ ರೀತಿ ಸಂಗ್ರಹವಾದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಬಳಸಬೇಕು.

ರಾಜ್ಯದಲ್ಲಿ4 ಕೋಟಿ 21 ಲಕ್ಷ ಮತದಾರರಿದ್ದು, ಪ್ರತಿಯೊಬ್ಬ ಮತದಾರ ಮತ ಚಲಾಯಿಸದಿದ್ದರೂ ಶೇ.70ರಷ್ಟು ಜನ ಮತ ಚಲಾಯಿಸುತ್ತಾರೆ. ಅಂದರೆ4.1 ಕೋಟಿ ಜನರ ಪೈಕಿ 3 ಕೋಟಿ ಜನ ಮತ ಚಲಾಯಿಸುತ್ತಾರೆ. ಮೂರು ಕೋಟಿ ಜನರು ಹಾಕಿದ ಮತ 7 ಲಕ್ಷ ಕೋಟಿ ರೂ. ಯಲ್ಲಿ ವಿಭಜಿಸಿದರೆ ಪ್ರತಿಯೊಬ್ಬ ಮತದಾರನ ಮತದ ಮೌಲ್ಯ2 ಲಕ್ಷ ರೂ,. ಆಗುತ್ತದೆ.

Your vote value is Rs.2 lakhs don't sell it for peanut

ಆದರೆ ದುರ್ದೈವವಶಾತ್, ರಾಜಕಾರಣಿಗಳು ನೀಡುವ ಹಣದಿಂದ 500 ರೂ ಸಾವಿರ, ಎರಡು ಸಾವಿರಕ್ಕೆ ತಮ್ಮ ಅಮೂಲ್ಯಯವಾದ ಮತವನ್ನು ಕಳೆದುಕೊಳ್ಳುತ್ತಾರೆ. ಮತಮಾರಿಕೊಳ್ಳುವ ಪರಿಣಾಮ ಎರಡು ಲಕ್ಷ ರೂ. ಮೌಲ್ಯವನ್ನು ಮತದಾರರು ಕಳೆದುಕೊಳ್ಳುತ್ತಿದ್ದಾರೆ.

ಸ್ವಚ್ಛ ರಾಜಕೀಯ ವ್ಯವಸ್ಥೆ ರೂಪುಗೊಳ್ಳಬೇಕಾದರೆ ಮತದಾರರು ಸ್ವಚ್ಛವಾಗಿರಬೇಕೆಂಬುದು ಅವರ ಸಂದೇಶದ ಉದ್ದೇಶ. ಈ ಹಿಂದೆಯೂ ಸ್ವಚ್ಛ ರಾಜಕೀಯ ಸಾರ್ವಜನಿಕರ ಸ್ವಚ್ಛ ಬದುಕಿನ ಬಗ್ಗೆ ಮಹೇಶ್ ಅರಳಿಯವರು ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿಯೊಬ್ಬ ಮತದಾರನಿಗೆ ತಿಳಿ ಹೇಳುವ ರೀತಿಯ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

English summary
Karnataka origin who is working for Microsoft in United States as software engineer Mahesh Arali analyzed that every vote of Kannadigas value is worth Rs.2 lakhs an shouldn't sale it for Rs.500 or Rs 1000. That video is now viral in Social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X